ಇಂದಿನಿಂದ ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಿಗೆ ಹಾಪ್​ಕಾಮ್ಸ್​​ನಿಂದ ಹಣ್ಣುಗಳು ಸರಬರಾಜು

ಸಚಿವರ ಸೂಚನೆಯಂತೆ ರವಿವಾರದಿಂದ ಎಪ್ರಿಲ್ 5 ರಿಂದ ಅಪಾರ್ಟ್​ಮೆಂಟ್​​ಗಳಿಗೆ ಹಣ್ಣುಗಳನ್ನು ನಿಗದಿತ ದರದಲ್ಲಿ ಸರಬರಾಜು ಮಾಡಲು ಹಾಪ್​​ ಕಾಮ್ಸ್​ ನಿರ್ಧರಿಸಿದೆ.

ಹಣ್ಣುಗಳು

ಹಣ್ಣುಗಳು

 • Share this:
  ಬೆಂಗಳೂರು (ಏ.05) : ಕೊರೋನಾ ವೈರಸ್​ ನಿಂದ ಜನ ಸಾಮಾನ್ಯರು ತೀವ್ರ ತೊಂದರೆ ಪಡುತ್ತಿದ್ದಾರೆ. ಇದನ್ನು ಮನಗಂಡಿರುವ ಹಾಪ್​​ ಕಾಮ್ಸ್​​ ನಿಂದ ಬೆಂಗಳೂರಿನ ಅಪಾರ್ಟ್​​ಮೆಂಟ್​ಗಳಿಗೆ ಇಂದಿನಿಂದ ನೇರವಾಗಿ ಹಣ್ಣುಗಳನ್ನು ಸರಬರಾಜು ಮಾಡಲು ಮುಂದಾಗಿದೆ. 

  ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಸಿಗದಂತಾಗಿ ಮಾರಾಟವಾಗದೆ ಹೊಲದಲ್ಲಿ ಹಾಳಾಗುತ್ತಿರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ  ಅನುಕೂಲವಾಗುವಂತ ನಿರ್ಧಾರ ತೆಗೆದುಕೊಳ್ಳಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

  ಈ ಬಗ್ಗೆ ಬಿಬಿಎಂಪಿಯಲ್ಲಿ ಅಪಾರ್ಟ್​ಮೆಂಟ್ ಅಸೋಸಿಯೇಶನ್ ಜೊತೆ ನಿನ್ನೆ ತೋಟಗಾರಿಕಾ ಸಚಿವ ನಾರಾಯಣ ಗೌಡ ವಿಡಿಯೋ ಸಂವಾದ ನಡೆಸಿದ್ದರು. ಹಾಪ್ ಕಾಮ್ಸ್ ಮೂಲಕ ಬೆಂಗಳೂರಿನಲ್ಲಿರುವ ಸುಮಾರು 720 ಅಪಾರ್ಟ್​ಮೆಂಟ್​​ಗಳಿಗೆ ರೈತರ ಉತ್ಪನ್ನಗಳನ್ನು ನೇರವಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದರು.

  ಇದನ್ನೂ ಓದಿ : ಲಾಕ್ ಡೌನ್ ಉಲ್ಲಂಘಿಸಿದವರಿಗೆ ಯೋಗ ಶಿಕ್ಷೆ - ಮೇಣದ ಬತ್ತಿ ಕೊಟ್ಟು ನಾಳೆ ಬೆಳಗುವಂತೆ ಸೂಚನೆ

  ಸಚಿವರ ಸೂಚನೆಯಂತೆ ರವಿವಾರದಿಂದ ಎಪ್ರಿಲ್ 5 ರಿಂದ ಅಪಾರ್ಟ್​ಮೆಂಟ್​​ಗಳಿಗೆ ಹಣ್ಣುಗಳನ್ನು ನಿಗದಿತ ದರದಲ್ಲಿ ಸರಬರಾಜು ಮಾಡಲು ಹಾಪ್​​ ಕಾಮ್ಸ್​ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಲಾಲ್​​ಬಾಬ್​​ ನಲ್ಲಿರುವ ಹಾಪ್​​​​ ಕಾಮ್ಸ್​​ ಮುಖ್ಯ ಕಚೇರಿಯಲ್ಲಿ ತೋಟಗಾರಿಕೆ ಸಚಿವ ನಾರಾಯಣಗೌಡ ಚಾಲನೆ ನೀಡಲಿದ್ದಾರೆ.
  First published: