ಕೊರೋನಾ ಸೋಂಕಿನ ಭೀತಿ - ಬಚಾವಾಗಲು ಹೆಲ್ಮೆಟ್ ಹಾಕಿಕೊಂಡು ಚಕ್ಕಡಿ ನಡೆಸಿದ ರೈತ

ಕೊರೋನಾ ವೈರಸ್ ನಿಂದ ಬಚಾವಾಗಲು ರೈತನೋರ್ವ ಹೆಲ್ಮೆಟ್ ಧರಿಸಿ ಚಕ್ಕಡಿ ಓಡಿಸಿದ ಘಟನೆ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ

ಹೆಲ್ಮೆಟ್ ಹಾಕಿಕೊಂಡು ರೈತನಿಗೆ ಸೆಲ್ಯೂಟ್ ಹೊಡೆದ ಪಿಎಸ್ಐ

ಹೆಲ್ಮೆಟ್ ಹಾಕಿಕೊಂಡು ರೈತನಿಗೆ ಸೆಲ್ಯೂಟ್ ಹೊಡೆದ ಪಿಎಸ್ಐ

 • Share this:
  ಕಲಬುರ್ಗಿ(ಮಾ.24): ಜಿಲ್ಲೆಯಾದ್ಯಂತ ಕೊರೋನಾ ಭೀತಿ ವ್ಯಾಪಕ ವಾಗುತ್ತಿದೆ. ಹೊಸ ಪಾಸಿಟಿವ್ ಪ್ರಕರಣಗಳ ಪತ್ತೆಯಾಗಿಲ್ಲ ಆದರೆ, ಜನರ ಆತಂಕ ಮಾತ್ರ ದೂರವಾಗಿಲ್ಲ. ಸೋಂಕಿನ ಭೀತಿ ಎಷ್ಟಿದೆಯೆಂದ್ರೆ, ನಗರ ಪ್ರದೇಶದ ಜೊತೆ ಗ್ರಾಮೀಣ ಪ್ರದೇಶದ ಜನರಲ್ಲಿಯೂ ಗಾಬರಿ ಹುಟ್ಟಿಸಿದೆ. ರೈತರಲ್ಲಿಯೂ ಕೊರೋನಾ ಭಯ ಸೃಷ್ಟಿಯಾಗಿದೆ.

  ಕೊರೋನಾ ವೈರಸ್ ನಿಂದ ಬಚಾವಾಗಲು ರೈತನೋರ್ವ ಹೆಲ್ಮೆಟ್ ಧರಿಸಿ ಚಕ್ಕಡಿ ಓಡಿಸಿದ ಘಟನೆ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಲಕ್ಕಪ್ಪ ಕೊರಬಾ ಎಂಬಾತನೆ ಹೆಲ್ಮೆಟ್ ಧರಿಸಿ ಚಕ್ಕಡಿ ಓಡಿಸಿದ ರೈತ. ನಿನ್ನೆಯಷ್ಟೇ ಪುಣೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿ ಹಿತ್ತಲ ಶಿರೂರು ಗ್ರಾಮದಲ್ಲಿ ಅಡ್ಡಾಡಿದ್ದ. ಮದ್ಯ ಸೇವಿಸಿದರೆ ಕೊರೋನಾ ವೈರಸ್ ಹೋಗುವುದೆಂಬ ಮಾತು ನಂಬಿ ಕಂಠ ಮಟ್ಟ ಕುಡಿದು, ಗ್ರಾಮದ ವಿವಿಧೆಡೆ ಓಡಾಡಿದ್ದ. ಆತ ಪೂನಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಾನೆ ಎಂಬ ಮಾಹಿತಿ ಗೊತ್ತಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ದಿತ್ತು.

  ಅದಾದ ನಂತರ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗುತ್ತು. ಇದೇ ಭೀತಿಯಿಂದ ತನಗೆ ಕೊರೋನಾ ಸೋಂಕು ಹರಡಬಾರದೆಂದು ರೈತನೊಬ್ಬ ಹೆಲ್ಮೆಟ್ ಹಾಕಿಕೊಂಡು ಚಕ್ಕಡಿ ಹೊಡೆದುಕೊಂಡು ಹೋಗಿದ್ದಾನೆ. ಹೊಲಕ್ಕೆ ಹೋಗುವಾಗ ಮತ್ತು ಮನೆಗೆ ಬರುವಾಗ ರೈತ ಹೆಲ್ಮೆಟ್ ಧರಿಸಿಕೊಂಡಿದ್ದಾನೆ.

  ರೈತ ಹೆಲ್ಮೆಟ್ ಹಾಕಿಕೊಂಡು ಚಕ್ಕಡಿ ಓಡಿಸೋದನ್ನು ನೋಡಿ, ಪಿಎಸ್ಐಯಿಂದ ಸೆಲ್ಯೂಟ್ ಸಹ ಹೊಡೆದಿದ್ದಾನೆ. ಹಿತ್ತಲ ಶಿರೂರ ಗ್ರಾಮಕ್ಕೆ ಹೋಗುತ್ತಿದ್ದ ನಿಂಬರ್ಗಾ ಪಿಎಸ್ಐ ಸುರೇಶಕುಮಾರ ಚವ್ಹಾಣ ರೈತ ಹೆಲ್ಮೆಟ್ ಧರಿಸಿಕೊಂಡು ಚಕ್ಕಡಿ ಓಡಿಸಿಕೊಂಡು ಬರುವ ದೃಶ್ಯ ನೋಡಿ ಅವಾಕ್ಕಾಗಿದ್ದಾರೆ. ಯಾಕೆ ಹೆಲ್ಮೆಟ್ ಧರಿಸಿಕೊಂಡಿದ್ದೀಯಾ ಅಂತ ಕೇಳಿದ್ದಾನೆ. ಆತ ಕೊಟ್ಟ ಉತ್ತತಕ್ಕೆ ಮೆಚ್ಚಿ ಸೆಲ್ಯೂಟ್ ಹೊಡೆದಿದ್ದಾನೆ.

  ಇದನ್ನೂ ಓದಿ : ಕೊರೋನಾ ವಿರುದ್ದ ಹೋರಾಟಕ್ಕೆ ಬೆಂಬಲವಾಗಿ 1 ತಿಂಗಳ ಸಂಬಳ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

  ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯ ಮಾಡಿದರೂ ಹಾಕದೆ ಕಾನೂನು ಉಲ್ಲಂಘಿಸುತ್ತಿರುವ ಉದಾಹರಣೆಗಳೆ ಹೆಚ್ಚು. ಜೊತೆಗೆ ಕೊರೋನಾ ನಿಯಂತ್ರಣಕ್ಕೆ ಕಲಬುರ್ಗಿಯಲ್ಲಿ ಕರ್ಫ್ಯೂ ವಿಧಿಸಿದರೂ ಜನ ಅಡ್ಡಾಡುವುದನ್ನು ಮಾತ್ರ ಬಿಟ್ಟಿಲ್ಲ. ಆದರೆ ಹಳ್ಳಿಗಳಲ್ಲಿ ಮಾಸ್ಕ್ ಸಿಗದೇ ಇದ್ದಾಗ, ಹೆಲ್ಮೆಟ್ ಹಾಕಿಕೊಂಡು ಚಕ್ಕಡಿ ಓಡಿಸುವ ಮೂಲಕ ರೈತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಹೆಲ್ಮೆಟ್ ಧರಿಸಿಕೊಂಡು ರೈತ ಚಕ್ಕಡಿ ಓಡಿಸೋ ವೀಡಿಯೋ ವೈರಲ್ ಆಗಿದೆ.

   
  First published: