ಷೇರುಪೇಟೆಯ ಮೇಲೂ ಕೊರೋನಾ ಎಫೆಕ್ಟ್​; 2018ರ ನಂತರ ಅತ್ಯಂತ ಕನಿಷ್ಟ ಮಟ್ಟ ದಾಖಲಿಸಿದ ನಿಫ್ಟಿ-ರೂಪಾಯಿ ಮೌಲ್ಯ

ಇಂದಿನ ಮಾರುಕಟ್ಟೆ ವಹಿವಾಟು ಆರಂಭವಾದಾಗಲೇ ಎನ್ಎಸ್ಇ ನಿಫ್ಟಿ 50 ಸೂಚ್ಯಾಂಕ ಶೇ.5.2 ರಷ್ಟು ಕುಸಿತ ಕಂಡಿದ್ದು 9,916.55ಕ್ಕೆ ತಲುಪಿದ್ದರೆ, ಬೆಚ್ ಮಾರ್ಕ್ ಎಸ್ ಮತ್ತು ಪಿಬಿಎಸ್ಇ ಸೆನ್ಸೆಕ್ಸ್ 1,821.27 ಅಂಕಗಳಿಗೆ ಕುಸಿತ ಕಂಡಿತ್ತು. ಅಂದರೆ ಶೇ.5.1 ರಷ್ಟು ಷೇರುಮೌಲ್ಯ ಇಳಿಕೆಯಾಗಿ 33,876.13ಕ್ಕೆ ತಲುಪಿದೆ.

ಮುಂಬೈ ಷೇರುಪೇಟೆ.

ಮುಂಬೈ ಷೇರುಪೇಟೆ.

  • Share this:
ಮುಂಬೈ (ಮಾರ್ಚ್ 12); ಮಾರಣಾಂತಿಕ ಕೊರೋನಾ ವೈರಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲ್ಪಟ್ಟಿದೆ. ಅಲ್ಲದೆ, ಅಮೆರಿಕ ಮತ್ತು ಯೂರೋಪ್ ನಿಂದ ಭಾರತಕ್ಕೆ ವಿಮಾನಯಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಪರಿಣಾಮ ಗುರುವಾರ ಭಾರತೀಯ ಷೇರುಪೇಟೆ ಕರಡಿ ಕುಣಿತ ಕಂಡಿದೆ. ಪರಿಣಾಮ ಬ್ಲೂ ಚಿಪ್ ನಿಫ್ಟಿ 50 ಕಳೆದ ಎರಡು ವರ್ಷದಲ್ಲಿ ಮೊದಲ ಬಾರಿಗೆ 10,000ಕ್ಕಿಂತಲೂ ಕಡಿಮೆಯಾಗಿದೆ.

ಇಂದಿನ ಮಾರುಕಟ್ಟೆ ವಹಿವಾಟು ಆರಂಭವಾದಾಗಲೇ ಎನ್ಎಸ್ಇ ನಿಫ್ಟಿ 50 ಸೂಚ್ಯಾಂಕ ಶೇ.5.2 ರಷ್ಟು ಕುಸಿತ ಕಂಡಿದ್ದು 9,916.55ಕ್ಕೆ ತಲುಪಿದ್ದರೆ, ಬೆಚ್ ಮಾರ್ಕ್ ಎಸ್ ಮತ್ತು ಪಿಬಿಎಸ್ಇ ಸೆನ್ಸೆಕ್ಸ್ 1,821.27 ಅಂಕಗಳಿಗೆ ಕುಸಿತ ಕಂಡಿತ್ತು. ಅಂದರೆ ಶೇ.5.1 ರಷ್ಟು ಷೇರುಮೌಲ್ಯ ಇಳಿಕೆಯಾಗಿ 33,876.13ಕ್ಕೆ ತಲುಪಿದೆ. ನಿಫ್ಟಿ 50 ಕರಡಿ ಕುಣಿತಕ್ಕೆ ಪ್ರವೇಶಿಸಿದ್ದ ಶೇ.20 ರಷ್ಟು ಕುಸಿತ ಕಂಡಿದೆ. ಇದು ಷೇರು ಮಾರುಕಟ್ಟೆ ಇತ್ತೀಚೆಗೆ ಕಂಡ ಅತ್ಯಂತ ದೊಡ್ಡ ಕುಸಿತ ಎಂದು ವಿವರಿಸಲಾಗುತ್ತಿದೆ.

ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯವು ಶೇ.0.8 ರಷ್ಟು ಕುಸಿದಿದ್ದು 74.35ಕ್ಕೆ ಇಳಿದಿದೆ. ಅಕ್ಟೋಬರ್ 2018ರ ನಂತರ ಭಾರತದ ರೂಪಾಯಿ ಡಾಲರ್ ಎದುರು ದಾಖಲಿಸಿದ ಅತ್ಯಂತ ಕಳಪೆ ಸಾಧನೆ ಎನ್ನಲಾಗುತ್ತಿದೆ. ಆದರೆ. ಮಾನದಂಡದ 10 ವರ್ಷಗಳ ಬಾಂಡ್ ಇಳುವರಿ 6.15% ವರೆಗೆ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್​ ಅನ್ನು ಸಾಂಕ್ರಾಮಿಕ ರೋಗ ಎಂದು ಮುದ್ರೆ ಒತ್ತಿದ್ದು, ಷೇರುಪೇಟೆ ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಇದು ನಿಧಾನಗತಿಯ ಭಾರತೀಯ ಆರ್ಥಿಕತೆಯ ಮೇಲೆ ಸಾಕಷ್ಟು ವ್ಯತಿರೀಕ್ತ ಪರಿಣಾಮ ಬೀರುತ್ತದೆ ಎಂದು ಬಂಡವಾಳ ಮಾರುಕಟ್ಟೆ ಕಾರ್ಯತಂತ್ರದ ಮುಖ್ಯಸ್ಥ ಗೌರವ್ ದುವಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಹೆಚ್ಚಿದ ಕೊರೋನಾ ವೈರಸ್ ಭೀತಿ; ಅಮೆರಿಕಾ-ಯುರೋಪ್ ನಡುವೆ ವಿಮಾನ ಸಂಚಾರ ಬಂದ್
First published: