CoronaVirus| ತೀವ್ರವಾದ ಕೋವಿಡ್ 19 ಸೋಂಕು ನಿಮಗೆ ಬಲವಾದ ರೋಗ ನಿರೋಧಕ ಶಕ್ತಿ ನೀಡುವುದೇ?
ಕೊರೋನಾ ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು, ಕೋಟ್ಯಂತರ ಸೋಂಕಿತರಿದ್ದಾರೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆ ಕೊರೊನಾ ವೈರಸ್ ಬಗ್ಗೆ ನಿಮಗಿರುವ ಅನುಮಾನಗಳನ್ನುಇಲ್ಲಿ ಉತ್ತರಿಸಲಾಗಿದೆ.
ಕೊರೋನಾ ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು, ಕೋಟ್ಯಂತರ ಸೋಂಕಿತರಿದ್ದಾರೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದ್ದು, ಈ ಹಿನ್ನೆಲೆ ಕೊರೊನಾ ವೈರಸ್ ಬಗ್ಗೆ ನಿಮಗಿರುವ ಅನುಮಾನಗಳನ್ನುಇಲ್ಲಿ ಉತ್ತರಿಸಲಾಗಿದೆ. 1. ಕೋವಿಡ್ 19 ವಿರುದ್ಧ ಹೋರಾಡಿದ ನಂತರ ನೀವೆಷ್ಟು ಸುರಕ್ಷಿತ?ನಿಮಗೆ ಆಶ್ಚರ್ಯವಾದರೂ ಸಂಶೋಧನೆಯ ಒಂದು ಸತ್ಯವನ್ನು ಹೇಳುತ್ತೇವೆ. ಕೋವಿಡ್ 19 ನಿಂದ ಚೇತರಿಸಿಕೊಳ್ಳುವವರಿಗೆ ಬಹಳ ದಿನಗಳ ತನಕ ನೈಸರ್ಗಿಕ ರೋಗನಿರೋಧಕ ಶಕ್ತಿವೃದ್ಧಿಯಾಗುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತದೆ. ಅಲ್ಲದೇ ಇದು ಜೀವಿತಾವಧಿಯವರೆಗೆ ಇರುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತಿಳಿಸಿವೆ.
2. ರೋಗನಿರೋಧಕ ಶಕ್ತಿ ಯಾವಾಗ ಪ್ರಬಲವಾಗಿ ವೃದ್ಧಿಯಾಗುತ್ತದೆ?
ಕೋವಿಡ್ ಜೊತೆಗೆ ಹೋರಾಟ ನಡೆಸಿದ ಬಳಿಕ ಪ್ರಬಲ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೋವಿಡ್ ನಂತರದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಾಗಲೂ ಪ್ರತಿಕಾಯಗಳು ಹೆಚ್ಚಾಗಿರುತ್ತವೆ. ಜೊತೆಗೆ ನಿಧಾನವಾಗಿ ಪ್ರತಿರಕ್ಷೆ ನಿರ್ಮಾಣವಾಗಲು ಆರಂಭವಾಗುತ್ತದೆ. ಸೋಂಕಿನ ನಂತರ 90 - 120 ದಿನಗಳ ನಂತರ ನಿಧಾನವಾಗಿ ರೋಗನಿರೋಧಕ ಶಕ್ತಿ ಬೆಳವಣಿಗೆ ಕಾಣುತ್ತದೆ. ಈಗಾಗಲೇ ಬಹುತೇಕ ಸೋಂಕಿತರಲ್ಲಿ ಈ ವಿಷಯ ನಿಜವಾಗಿದೆ. 90 ದಿನಗಳ ವಿಂಡೋ ಪ್ರಕಾರ ಸೋಂಕಿಗೆ ತುತ್ತಾದ ವ್ಯಕ್ತಿ ಹೆಚ್ಚು ಸುರಕ್ಷಿತರಾಗಿರುತ್ತಾನೆ.
3. ಸೋಂಕು ನಿಮಗೆ ಹೇಗೆ ರೋಗನಿರೋಧಕ ಶಕ್ತಿ ನೀಡುತ್ತದೆ?
ಕೋವಿಡ್ 19 ವಿರುದ್ಧ ದೇಹದ ಪ್ರತಿಕ್ರಿಯೆಗಳನ್ನು ಊರಿಯೂತದ ಮೂಲಕ ರೋಗನಿರೋಧಕ ಶಕ್ತಿಯಲ್ಲಿ ಉಂಟಾಗುವ ಹಲವಾರು ವಿಷಯಗಳಿಂದ ಗುರುತಿಸಬಹುದು. ಇದು ದೇಹದ ಪ್ರತಿರಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯನ್ನು ನೀಡುತ್ತದೆ. ಜ್ವರ ಮತ್ತು ಉರಿಯೂತ ಇದರಲ್ಲಿ ಒಂದು. ಉದಾ: ಎಷ್ಟು ದಿನಗಳ ಕಾಲ ಜ್ವರವಿರುತ್ತದೆ ಎನ್ನುವುದು ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿದೆ. ಕಡಿಮೆ ಲಕ್ಷಣಗಳಿರುವವವರಿಗಿಂತಲೂ ಹೆಚ್ಚಿನ ಗುಣ ಲಕ್ಷಣ ಇರುವವರಲ್ಲಿ ಈ ಪ್ರತಿಕಾಯಗಳು ಹೆಚ್ಚು ಕಂಡು ಬಂದಿವೆ.
4. ನಿಮ್ಮ ರೋಗನಿರೋಧಕ ಶಕ್ತಿಯನ್ನು ಇನ್ನೂ ಯಾವೆಲ್ಲಾ ಅಂಶಗಳು ನಿರ್ಧರಿಸುತ್ತವೆ?
ಸೋಂಕಿನ ವಿರುದ್ಧ ಹೋರಾಡಿದ ನಂತರವೂ ಕೆಲವು ಅಂಶಗಳು ಮತ್ತು ಅದಕ್ಕೂ ಮೊದಲಿನ ದೇಹದ ಸ್ಥಿತಿಯೂ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದೇ ಕಾರಣಕ್ಕೆ ಕೆಲವು ಜನರು ಬೇಗ ಕಾಯಿಲೆಗೆ ಬೀಳುತ್ತಾರೆ.
5. ತೀವ್ರವಾದ ಸೋಂಕು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆಯೇ?
ಕಡಿಮೆ ತೀವ್ರತೆ ಹೊಂದಿರುವವರಿಗಿಂತ ಕೋವಿಡ್ನಿಂದ ನಿಂದ ಹೆಚ್ಚು ಬಳಲುತ್ತಿರುವ ವರಲ್ಲಿ ಹಲವಾರು ಲಕ್ಷಣಗಳು ಕಂಡು ಬರುತ್ತವೆ. ತೀವ್ರ ಸೋಂಕಿನ ವಿರುದ್ಧ ಹೋರಾಡುವುದು ಎಂದರೆ ದೇಹ ಶಕ್ತಿಯನ್ನು ದ್ವಿಗುಣಗೊಳಿಸಿಕೊಳ್ಳುವುದು. ಸೋಂಕು ನಿವಾರಿಸಲು ವೈರಸ್ ಬಡಿದೊಡಿಸಲು ತೀವ್ರ ಹೋರಾಟವನ್ನು ಮಾಡುತ್ತದೆ. ಆದ್ದರಿಂದ ಪ್ರತಿರಕ್ಷೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ದಾಖಲೆಗಳಿಲ್ಲ. ಕೇಸ್ ಸ್ಟಡಿ ಮತ್ತು ಹಲವಾರು ತಜ್ಞರ ಅಭಿಪ್ರಾಯದ ಪ್ರಕಾರ ತೀವ್ರವಾದ ಸೋಂಕನ್ನು ಒಳಗೊಂಡಿರುವವರಲ್ಲಿ ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಪ್ರದರ್ಶಿಸುವುದು ಮಾತ್ರವಲ್ಲ ಹೆಚ್ಚಿನ ಟಿ ಸೆಲ್ಸ್ಗಳ ಪ್ರತಿಕ್ರಿಯೆಗಳ ಜ್ಞಾನವನ್ನು ಹೊಂದಿರುತ್ತದೆ.
ಕಡಿಮೆ ತೀವ್ರತೆ ಇದ್ದಾಗ ಬೇಗ ಗುಣಮುಖವಾಗಬಹುದು. ಕಡಿಮೆ ಅಥವಾ ಲಕ್ಷಣ ರಹಿತವಾದ ಸೋಂಕು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೆಲವೊಮ್ಮೆ ತೀವ್ರವಾದ ಸೋಂಕು ಇದ್ದಾಗ ನೈಸರ್ಗಿಕ ರೋಗ ನಿರೋಧಕ ಶಕ್ತಿ ಕುಂಠಿತವಾಗಬಹುದು. ಈ ನಿಟ್ಟಿನಲ್ಲಿ ಕೋವಿಡ್ ಸೋಂಕಿತರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು.
7. ಲಸಿಕೆಯನ್ನು ನೀವು ಯಾವಾಗ ತೆಗೆದುಕೊಳ್ಳಬಹುದು?
ಲಸಿಕೆ ನಿಮಗೆ ದೇಹದಲ್ಲಿ ತಾತ್ಕಾಲಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಈಗಾಗಲೇ ಚೇತರಿಸಿಕೊಂಡ ರೋಗಿಗಳು ಲಸಿಕೆಯನ್ನು ಪಡೆಯುವುದನ್ನು ಮುಂದೂಡಬೇಕೆಂದು ಸೂಚನೆಯನ್ನು ನೀಡಲಾಗಿದೆ. ಎಷ್ಟೇ ತೀವ್ರವಾದ ಸೋಂಕನ್ನು ಒಳಗೊಂಡಿದ್ದರು ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ