Coronavirus: ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕ್ಷಯ ರೋಗ ಪತ್ತೆ..!

ತೂಕ ನಷ್ಟ, ರಾತ್ರಿ ಬೆವರುವುದು ಅಥವಾ ಇತರ ಯಾವುದೇ ಲಕ್ಷಣಗಳು ಕಂಡು ಬಂದರೂ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೋವಿಡ್-19 ಸೋಂಕಿನಿಂದ ಬಳಲಿ ಚಿಕಿತ್ಸೆ ಪಡೆದುಕೊಂಡು ಚೇತರಿಕೊಳ್ಳುವಷ್ಟರಲ್ಲಿಯೇ ರೋಗಿಗಳಲ್ಲಿ ಕ್ಷಯ ರೋಗ ಕಾಣಿಸುತ್ತಿದ್ದು, ಈ ಪ್ರಕರಣಗಳ ಸಂಖ್ಯೆಯು ಏರುತ್ತಲೇ ಇರುವುದು ಹೊಸದೊಂದು ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿರುವ ಎರಡು ಖಾಸಗಿ ಆಸ್ಪತ್ರೆಯ ವೈದ್ಯರು ಕೋವಿಡ್​​ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಈಗ ಕ್ಷಯ ರೋಗ ಪತ್ತೆಯಾಗಿದ್ದು 60ರಷ್ಟು ಜನರು 40 ವರ್ಷ ವಯಸ್ಸಿಗಿಂತ ಚಿಕ್ಕವರಾಗಿದ್ದು, ಕಳೆದ ಆರು ವಾರಗಳಲ್ಲಿ 10 ಕ್ಷಯ ರೋಗ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.


ಮೂಲಚಂದ್ ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿಯ ಪ್ರಕಾರ ಈ ಕ್ಷಯ ರೋಗ ಪ್ರಕರಣಗಳು ಹೆಚ್ಚಾಗಿ ಕೋವಿಡ್ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕಾಣಿಸುತ್ತಿದೆಯಂತೆ. ಮೂಲಚಂದ್ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ. ಭಗವಾನ್ ಮಂತ್ರಿ ಕೋವಿಡ್ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕೆಲವೇ ವಾರಗಳಲ್ಲಿ ಕೆಮ್ಮು ಮತ್ತು ಸಂಜೆ ಜ್ವರ ಕಾಣಿಸುತ್ತಿದ್ದು ಆಸ್ಪತ್ರೆಗೆ ಬಂದಾಗ ಅವರ ಕಫ ಪರೀಕ್ಷೆ, ರಕ್ತ ಪರೀಕ್ಷೆಗಳನ್ನು ಮಾಡಿದಾಗ ಕ್ಷಯ ರೋಗ ಇರುವುದು ಕಂಡು ಬಂದಿದೆ.




ಈ ರೋಗಕ್ಕೆ ತುತ್ತಾದ ಹೆಚ್ಚು ಜನರು ಮಧುಮೇಹ ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವವರು ಮತ್ತು ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ಹೆಚ್ಚಾಗಿ ಸ್ಟಿರಾಯ್ಡ್‌ ಬಳಸಿರುವವರು ಆಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.


ಒಂದು ಪ್ರಕರಣವನ್ನು ಉಲ್ಲೇಖಿಸಿ, ವೈದ್ಯರು ಯುವಕನೊಬ್ಬನಿಗೆ ಕೋವಿಡ್ ಆಗಿತ್ತು. ನಂತರ ಕ್ಷಯರೋಗದಿಂದಾಗಿ ಆಸ್ಪತ್ರೆಗೆ ಮರಳಿ ಬರಬೇಕಾಯಿತು. ಈ ರೋಗಿಗಳಲ್ಲಿಶ್ವಾಸಕೋಶದ ಅಸ್ವಸ್ಥತೆಯನ್ನು ಸ್ಪಷ್ಟವಾಗಿ ನೋಡಬಹುದಾಗಿದೆ ಎಂದು ಹಿರಿಯ ವೈದ್ಯರು ಹೇಳಿದರು.


"ಕೋವಿಡ್ ನಂತರದ ರೋಗಿಗಳಲ್ಲಿ ಕ್ಷಯರೋಗ ಹೆಚ್ಚಾಗುವ ಸಾಧ್ಯತೆಯನ್ನು ಕಡಿಮೆ ರೋಗನಿರೋಧಕ ಶಕ್ತಿ, ಶ್ವಾಸಕೋಶದ ಉರಿಯೂತ ಮತ್ತು ಕೋವಿಡ್‌ನಿಂದ ಉಂಟಾಗುವ ಒತ್ತಡ, ಕೋವಿಡ್ ಚಿಕಿತ್ಸೆಗೆ ಸ್ಟಿರಾಯ್ಡ್‌ಗಳ ಬಳಕೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಹದಗೆಡುವುದು ಮುಂತಾದ ಅಂಶಗಳಿಂದ ವಿವರಿಸಬಹುದಾಗಿದೆ" ಎಂದು ಅವರು ವಿವರಿಸಿದರು.




ಕೋವಿಡ್ ನಂತರ ಯಾರಲ್ಲಿ ಜ್ವರ, ಕೆಮ್ಮು, ಹಸಿವು ಕಡಿಮೆಯಾದಂತಹ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳಿ ಮತ್ತು ಟಿಬಿ ಪರೀಕ್ಷಿಸಿಕೊಳ್ಳಿ. ತೂಕ ನಷ್ಟ, ರಾತ್ರಿ ಬೆವರುವುದು ಅಥವಾ ಇತರ ಯಾವುದೇ ಲಕ್ಷಣಗಳು ಕಂಡು ಬಂದರೂ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಹೇಳಿದರು.


ಆಕಾಶ್ ಹೆಲ್ತ್‌ಕೇರ್ ಪ್ರಕಾರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕ್ಷಯರೋಗ ಪ್ರಕರಣಗಳಲ್ಲಿ ಈ ವರ್ಷ 15ರಿಂದ 20ರಷ್ಟು ಏರಿಕೆ ಕಂಡಿದೆ. ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಇದು ಹೆಚ್ಚುತ್ತಿದ್ದು, ಕೋವಿಡ್ ನಂತರ ರೋಗಿಗಳಲ್ಲಿ ಆತಂಕ ಮನೆ ಮಾಡಿದೆ.



ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೊಸ ಮಾರ್ಗಸೂಚಿಗಳ ಪ್ರಕಾರ ಆಸ್ಪತ್ರೆಯು ಟಿಬಿ ಕೋವಿಡ್ ಮತ್ತು ಟಿಬಿ ಐಎಲ್ಐ ತಪಾಸಣೆಯನ್ನು ಹೊಸದಾಗಿ ಪರಿಚಯಿಸಿದೆ.ನಿರಂತರ ಕೆಮ್ಮು, ಜ್ವರ, ಗಾಯಗಳು, ಶ್ವಾಸಕೋಶದಲ್ಲಿ ತೊಂದರೆಯಾದರೆ ತಕ್ಷಣ ಕ್ಷಯರೋಗ ತಪಾಸಣೆ ಮಾಡಿಸಿಕೊಳ್ಳಿ ಮತ್ತು ಈ ಪರೀಕ್ಷೆಗಳನ್ನು ಸಾಮಾನ್ಯ ಒಪಿಡಿಗಳು ಮತ್ತು ಕೋವಿಡ್ ವಿಭಾಗದಲ್ಲಿ ನಡೆಸಲಾಗುತ್ತಿದೆ ಎಂದು ಹಿರಿಯ ಸಲಹೆಗಾರರು ಹೇಳಿದ್ದಾರೆ.






ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: