Coronavirus: ದೆಹಲಿ, ಮುಂಬೈನಲ್ಲಿ ಕೊರೋನಾ ಇಳಿಮುಖ, ಕುಸಿಯುತ್ತಿದೆಯಾ ಕೋವಿಡ್ ಟೆಸ್ಟ್ ಪ್ರಮಾಣ?

Coronavirus India: ದೇಶದಲ್ಲಿ ಕೊರೊನಾ ಮಹಾಮಾರಿ ಅತಿ ಹೆಚ್ಚಾಗಿ ಕಾಡುತ್ತಿರೋ ರಾಜ್ಯಗಳಲ್ಲಿ ದೆಹಲಿ ಹಾಗೂ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಆದ್ರೆ ಇದೀಗ ದೆಹಲಿ, ಮುಂಬೈನಲ್ಲಿ ದಿಢೀರನೇ ಕೊರೊನಾ ಸಂಖ್ಯೆ ಇಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಷ್ಟ್ರ ರಾಜಧಾನಿ ದೆಹಲಿ(Delhi) ಹಾಗೂ ಮುಂಬೈ(Mumbai)ನಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದ್ದ ಕೊರೊನಾ ಕೇಸ್ ಗಳು ಶುಕ್ರವಾರ ದಿಢೀರನೆ ಇಳಿಕೆಯಾಗಿದೆ. ರಾಜ್ಯಗಳಲ್ಲಿ ಸೋಂಕುಗಳು ಕಡಿಮೆ ಆಗ್ತಿದೆಯಾ ಅಥವಾ ಪ್ರಮುಖ ನಗರಗಳಲ್ಲಿ ಕೋವಿಡ್ ಪರೀಕ್ಷೆಗಳ(COVID 19 Testing) ಮಟ್ಟ ಇಳಿಕೆಯಾಗಿದೆ ಅನ್ನೋದು ಸ್ಪಷ್ಟವಾಗಿಲ್ಲ. ಹಿಂದಿನ ದಿನ 2.70 ಲಕ್ಷ ಕೊರೊನಾ ಕೇಸ್(Corona case) ದಾಖಲಾಗಿತ್ತು. ಶುಕ್ರವಾರ 2.64 ಲಕ್ಷ ಕೇಸ್ ದಾಖಲಾಗಿದೆ. ಇನ್ನು ರಾಷ್ಟ್ರಾದ್ಯಂತ ಹಿಂದಿನ ದಿನ 18.86 ಲಕ್ಷವಿದ್ದ ಟೆಸ್ಟಿಂಗ್ ಪ್ರಮಾಣ 17.87ಕ್ಕೆ ಇಳಿದಿದೆ. ಕೆಲ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಇಳಿಕೆಯಾಗಿದ್ರೆ ಇನ್ನಷ್ಟು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿರೋದು ಆತಂಕ ಮೂಡಿಸಿದೆ.

ದೆಹಲಿಯಲ್ಲಿ ಕೊರೊನಾ ಕೇಸ್ ಏರಿಳಿತ

ದೆಹಲಿಯಲ್ಲಿ ಶುಕ್ರವಾರ 24,383 ಹೊಸ ಪ್ರಕರಣಗಳು ವರದಿಯಾಗಿದೆ. ಹಿಂದಿನ ದಿನ ದೆಹಲಿಯಲ್ಲಿ 28, 867 ಕೊರೊನಾ ಕೇಸ್ ದಾಖಲಾಗಿತ್ತು. ಒಂದೇ ದಿನಕ್ಕೆ ಸಾವಿರಾರು ಕೇಸ್ ಗಳು ಇಳಿಕೆಯಾಗಿರೋದು ಭಾರೀ ಅನುಮಾನ ಹುಟ್ಟಿಸಿದೆ. ಪ್ರಮುಖ ನಗರಗಳಲ್ಲಿ ಕೋವಿಡ್ ಪರೀಕ್ಷೆಗಳು ಕುಸಿದಿರೋದು ಸಹ ಇದಕ್ಕೆ ಕಾರಣ ಇರಬಹುದು ಅಂತ ಊಹಿಸಲಾಗ್ತಿದೆ.

ಇದನ್ನೂ ಓದಿ: Kerala Highcourt: ಪಾರ್ಕಿಂಗ್ ಶುಲ್ಕ ಸಂಗ್ರಹಿಸುವ ಹಕ್ಕು ಮಾಲ್‌ಗಳಿಗಿಲ್ಲ; ಕೇರಳ ಹೈಕೋರ್ಟ್

ಮುಂಬೈನಲ್ಲಿ ಕೊರೊನಾ ಕೇಸ್ ದಿಢೀರ್ ಇಳಿಕೆ

ಕೊರೊನಾ ಹಾರ್ಟ್ ಸ್ಪಾರ್ಟ್ ಆಗಿದ್ದ ಮುಂಬೈನಲ್ಲಿ ಈಗ ದಿಡೀರನೆ ಸಾವಿರಾರು ಕೇಸ್ ಗಳು ಇಳಿಕೆ ಕಂಡಿವೆ. ಗುರುವಾರ 13,702 ಹೊಸ ಕೇಸ್ ಗಳು ಪತ್ತೆಯಾಗಿತ್ತು. ಶುಕ್ರವಾರ 11,317 ಹೊಸ ಕೇಸ್ ದಾಖಲಾಗಿದೆ. ಕಳೆದ ಎಂಟು ದಿನಗಳಿಗೆ ಹೊಲಿಸಿದರೆ ಗುರುವಾರ ನಗರದಲ್ಲಿ ಗಣನೀಯವಾಗಿ ಕಡಿಮೆ ಸಂಖ್ಯೆಯ ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗಿದೆ ಎಂದು ವರದಿ ಮಾಡಲಾಗಿದೆ.

ಕಡಿಮೆಯಾಗ್ತಿದೆಯಾ ಕೋವಿಡ್ ಟೆಸ್ಟಿಂಗ್

ದೆಹಲಿ, ಮುಂಬೈ ನಗರಗಳ ಕೋವಿಡ್ ಡಾಟಾದಲ್ಲಿ ಪ್ರಮಖ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಕಳೆದ ಎಂಟು ದಿನಗಳಿಗೆ ಹೋಲಿಸಿದರೆ ಪರೀಕ್ಷಾ ಪಾಸಿಟಿವಿಟಿ ದರ (TPR- The percentage of tests turning positive for covid) ಮುಂಬೈನಲ್ಲಿ ಭಾರೀ ಇಳಿಕೆ ಕಂಡಿದೆ. ಮುಂಬೈನಲ್ಲಿ ಜನವರಿ 7 ರಂದು ಶೇ28.95ರಷ್ಟು ಪಾಸಿಟಿವಿಟಿ ಕೇಸ್ ದಾಖಲಾಗಿತ್ತು. ಆದ್ರೆ ಶುಕ್ರವಾರ TPR ರೇಟ್ ಶೇಕಡಾ 20.6ಕ್ಕೆ ಇಳಿದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟೆಸ್ಟಿಂಗ್ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿದೆ. ಪರೀಕ್ಷೆ ಹೆಚ್ಚಿಸುವುದರಿಂದ ಎರಡು ನಗರಗಳಲ್ಲಿ ವೇಗವಾಗಿ ಕೊರೊನಾ ಕೇಸ್ ಗಳನ್ನು ಪತ್ತೆಹಚ್ಚಬಹುದು. ಹೀಗಾಗಿ ಮುಂಬೈನಲ್ಲಿ ಕೋವಿಡ್ 19 ಟೆಸ್ಟಿಂಗ್ ಕಡಿಮೆ ಮಾಡಿರುವುದು ಭಾರೀ ಅನಾಹುತಕ್ಕೆ ಕಾರಣವಾಗಬಹುದು. ಮುಂಬೈನಲ್ಲಿ ಸೋಂಕಿತ ಸಂಖ್ಯೆ ಅತಿ ಹೆಚ್ಚಾಗಿದೆ ಅಂತಾನೆ ಭಾವಿಸಲಾಗಿದೆ. ಆದ್ರೆ ದೆಹಲಿಯಲ್ಲಿ ದೈನಂದಿನ ಟಿಪಿಆರ್ ಗಳು ಏರುತ್ತಲೆ ಇದೆ.

ಇದನ್ನೂ ಓದಿ: Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

ಸಾವಿನ ಪ್ರಮಾಣದಲ್ಲಿ ಏರಿಕೆ!

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆಯಲ್ಲಿ ಎರಡು ನಗರಗಳು ಹೆಚ್ಚಿನ ಸಂಖ್ಯೆಯ ಸಾವುಗಳನ್ನ ಕಂಡಿದೆ. ದೆಹಲಿಯಲ್ಲಿ ಶುಕ್ರವಾರ 34 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದ ಇತರೆ ರಾಜ್ಯಗಳಿಗಿಂತ ದೆಹಲಿಯಲ್ಲಿ ನಿನ್ನೆ ಹೆಚ್ಚಿನ ಸಾವು ಸಂಭವಿಸಿರೋದು ವರದಿಯಾಗಿದೆ. ಇತ್ತ ಮುಂಬೈನಲ್ಲಿ 7 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿರುವುದು ವರದಿಯಾಗಿದೆ. ಒಟ್ಟು ದೇಶದಲ್ಲಿ ನಿನ್ನೆ 217 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸತತ ಮೂರು ದಿನಗಳಿಂದ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
Published by:Latha CG
First published: