ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಮತ್ತೊಂದು ರಾಷ್ಟ್ರ; ವಿಶ್ವಾದ್ಯಂತ 21 ಸಾವಿರ ಸಾವು

ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಕೊರೋನಾ ವೈರಸ್​ಗೆ ತತ್ತರಿಸಿದೆ. ಬುಧವಾರ ಒಂದೇ ದಿನ ಅಮೆರಿಕದಲ್ಲಿ 7,676 ಪ್ರಕರಣ ದಾಖಲಾಗಿದೆ. ಈ ವರೆಗೆ  67,770 ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ

news18-kannada
Updated:March 26, 2020, 7:57 AM IST
ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಮತ್ತೊಂದು ರಾಷ್ಟ್ರ; ವಿಶ್ವಾದ್ಯಂತ 21 ಸಾವಿರ ಸಾವು
ಈ ನಡುವೆ ಆಸ್ಟ್ರೇಲಿಯಾದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಕೆಯಾಗುತ್ತಿದೆ.
  • Share this:
ನವದೆಹಲಿ (ಮಾ.26): ಕೊರೋನಾ ವೈರಸ್​ ಹಾವಳಿ ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರವಾಗುತ್ತಿಲ್ಲ. ಕಳೆದ ಡಿಸೆಂಬರ್​ ಅಂತ್ಯಕ್ಕೆ ತನ್ನ ಪ್ರಭಾವ ತೋರಿಸಲು ಆರಂಭಿಸಿದ್ದ ಈ ವೈರಸ್​ ನಾಲ್ಕು ತಿಂಗಳಲ್ಲಿ 21 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. 4.7 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಅಲ್ಲದೆ, ಇನ್ನು ಮುಂದಿನ ದಿನಗಳಲ್ಲಿ ಜನರು ಮತ್ತಷ್ಟು ಸಂಕಷ್ಟಕದ ದಿನಗಳನ್ನು ಎಣಿಸಬಹುದಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈವರೆಗೆ ಒಟ್ಟು 21,363 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಯುರೋಪ್​ ರಾಷ್ಟ್ರವೊಂದರಲ್ಲೇ 14 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಚೀನಾದಲ್ಲಿ ಸದ್ಯ, ಕೊರೋನಾ ವೈರಸ್​ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಚೀನಾದಲ್ಲಿ 3,281 ಜನರು ಬಲಿಯಾಗಿದ್ದಾರೆ.

ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರು ಲಕ್ಷಣ ಗೋಚರವಾಗುತ್ತಿಲ್ಲ. ಈಗಾಗಲೇ ಇಟಲಿಯಲ್ಲಿ ಕೊರೋನಾ ವೈರಸ್​ಗೆ 7,503 ಜನರು ಬಲಿಯಾಗಿದ್ದಾರೆ. ಒಟ್ಟು 74 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್​ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್​ನಲ್ಲಿ ಈವರೆಗೆ 3,647 ಸಾವುಗಳು ಸಂಭವಿಸಿವೆ. ಇನ್ನು, ಕೊರೋನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿ ಸಮೀಪಿಸಿದೆ.

ಇದನ್ನೂ ಓದಿ: ಇಂದು ಸೌದಿ ಅರೇಬಿಯಾ ರಾಜ ಸಲ್ಮಾನ್ ಅಧ್ಯಕ್ಷತೆಯಲ್ಲಿ ಶೃಂಗಸಭೆ; ಪ್ರಧಾನಿ ಮೋದಿ ಸೇರಿದಂತೆ ವಿಶ್ವ ನಾಯಕರು ಭಾಗಿ

ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಕೊರೋನಾ ವೈರಸ್​ಗೆ ತತ್ತರಿಸಿದೆ. ಬುಧವಾರ ಒಂದೇ ದಿನ ಅಮೆರಿಕದಲ್ಲಿ 7,676 ಪ್ರಕರಣ ದಾಖಲಾಗಿದೆ. ಈ ವರೆಗೆ  67,770 ಜನರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಅಮೆರಿಕದಲ್ಲಿ ಕೊರೋನಾ ಸೋಂಕಿತರಿಗೆ ಹೋಲಿಸಿದರೆ ಸಾವಿನ ಸಂಖ್ಯೆ ತುಂಬಾನೇ ಕಡಿಮೆ. ಈವರೆಗೆ ಅಮೆರಿಕದಲ್ಲಿ 1000 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ನಿಧಾನವಾಗಿ ಕೊರೋನಾ ಹರಡಲು ಆರಂಭಿಸಿದೆ. ಈವರೆಗೆ 606 ಪ್ರಕರಣ ದಾಖಲಾಗಿದ್ದು, 10 ಜನರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನಾ ಮತ್ತಷ್ಟು ಜನರನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading