ಹುಬ್ಬಳ್ಳಿ - ಒಂದೇ ಕುಟುಂಬದ ನಾಲ್ವರನ್ನು ಕೊರೋಬಾ ಬಲಿ ಪಡೆದ ಹೃದಯ ವಿದ್ರಾವಕ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ನಾಲ್ವರ ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕ ಗುಂಜಳ ಗ್ರಾಮದಲ್ಲಿ ಘಟನೆ ನಡೆದಿದೆ. ಮುವ್ವರು ಸಹೋದರರು ಮತ್ತು ತಾಯಿ ಕೊರೋನಾಕ್ಕೆ ಬಲಿಯಾಗಿದ್ದಾರೆ. 80 ವರ್ಷದ ವೃದ್ಧನಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡಿತ್ತು. ಇದರ ಬೆನ್ನಹಿಂದೆಯೇ ವೃದ್ಧನ ಪತ್ನಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ಉಸಿರಾಟದ ತೊಂದರೆಯಿಂದ ವೃದ್ಧೆ ಸಾವನ್ನಪ್ಪಿದ್ದಳು. ನಂತರ ಮನೆಯ ಹಿರಿಯ ಪುತ್ರ ಮತ್ತು ಇಬ್ಬರು ಕಿರಿಯ ಸಹೋದರರಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮುವರೂ ಸಾವನ್ನಪ್ಪಿದ್ದಾರೆ.
ತಾಯಿ ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದು, 80 ವರ್ಷದ ವೃದ್ಧನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಾಲ್ವರ ಸಾವಿನಿಂದ ಕುಟುಂಬ ಕಣ್ಣೀರ ಕೋಡಿಯಲ್ಲಿ ಮುಳುಗಿದಿದೆ. ಗ್ರಾಮಸ್ಥರಲ್ಲಿಯೂ ಕೊರೋನಾ ಆತಂಕ ಸೃಷ್ಟಿಸಿದೆ. 80 ವರ್ಷದ ವೃದ್ಧನಾದ್ರೂ ಗುಣಮುಖನಾಗಿ ಮನೆಗೆ ಬರಲಿ ಎಂದು ಜನ ಆಶಿಸುತ್ತಿದ್ದಾರೆ.
ಬ್ಲಾಕ್ ಫಂಗಸ್ ಔಷಧ ಅಕ್ರಮ ಮಾರುತ್ತಿದ್ದವರ ಬಂಧನ:
ರೆಮಿಡಿಸಿವರ್ ಆಯ್ತು... ಈಗ ಬ್ಲಾಕ್ ಫಂಗಸ್ ಔಷಧಿ ಸರದಿ.. ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಅಕ್ರಮ ಮಾರಾಟ ದಂಧೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಕ್ರಮವಾಗಿ ಬ್ಲಾಕ್ ಫಂಗಸ್ ಗೆ ಸಂಬಂಧಿಸಿದ ಔಷಧ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಕಿಮ್ಸ್ ಆಸ್ಪತ್ರೆಯ ವ್ಯಾಪ್ತಿಯ ಔಷಧಿ ಅಂಗಡಿಯಲ್ಲಿ ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ.
ಇದನ್ನೂ ಓದಿ: Pinarayi Vijayan: ಬಜೆಟ್ನಲ್ಲಿ 20,000 ಕೋಟಿ ವಿಶೇಷ ಕೋವಿಡ್ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!
ಔಷಧ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಸೀರ್ ಹುಸೇನ್ ಅಕ್ತಾರ, ರಾಘವೇಂದ್ರ ಉಣಕಲ್ ಹಾಗೂ ನಾಗರಾಜ ನಡವಲಕೇರಿ ಬಂಧಿತ ಆರೋಪಿಗಳು. 4 ವಯಲ್ಸ್ ಔಷಧಿ ಯೊಂದಿಗೆ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಸೀರ್ ಹುಸೇನ್ ಎಂಬುವವನಿಂದ 7 ಸಾವಿರಕ್ಕೆ ಒಂದು ಇಂಜೆಕ್ಷನ್ ತಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿತ್ತು. ಅಂಪೋಟೆರಿಸನ್ ಬಿ ಇಂಜೆಕ್ಷನ್ ನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳು. ಸದ್ಯ ಅಕ್ರಮ ಮಾರಾಟ ಮಾಡುವ ಜಾಲವನ್ನ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರೋ ಆರೋಗ್ಯ ಸಚಿವ ಸುಧಾಕರ್, ರಾಜ್ಯದಲ್ಲಿ ಈ ರೀತಿ ಔಷಧ ಮಾರಾಟದ ಪ್ರಕರಣ ಬೆಳಕಿಗೆ ಬಂದಿರಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ಅಕ್ರಮ ಮಾರಾಟ ಮಾಡಿರೋದಾಗಿ ಇದೀಗ ತಿಳಿದು ಬಂದಿದೆ. ಯಾರೇ ಇದ್ದರೂ ಅವರನ್ನು ಬಿಡೋಲ್ಲ. ಕಾನೂನಿನ ಪ್ರಕರಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಸುಧಾಕರ್ ತಿಳಿಸಿದ್ದಾರೆ.
(ವರದಿ – ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ