• Home
 • »
 • News
 • »
 • coronavirus-latest-news
 • »
 • Coronavirus: ಡೆಡ್ಲಿ ವೈರಸ್​ ಭಯದಿಂದ ಆನ್​​ಲೈನ್​ನಲ್ಲಿ ಮದುವೆ ಆದ ಜೋಡಿ.!

Coronavirus: ಡೆಡ್ಲಿ ವೈರಸ್​ ಭಯದಿಂದ ಆನ್​​ಲೈನ್​ನಲ್ಲಿ ಮದುವೆ ಆದ ಜೋಡಿ.!

.

.

Coronavirus: ಸಿಂಗಾಪುರ ಈ ಜೋಡಿ  ಇತ್ತೀಚೆಗೆ ಚೀನಾದ ವುಹಾನ್​ ಪ್ರಾಂತದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಹೀಗಾಗಿ ತಮ್ಮ ಮದುವೆಯಂದು ಬೇರೆಯವರಿಗೂ ಈ ಸೋಂಕು ತಗುಲಿದರೆ ಕಷ್ಟವೆಂಬ ಕಾರಣಕ್ಕೆ ನೇರ ಪ್ರಸಾರದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.

 • Share this:

  ಕೊರೊನಾ ವೈರಸ್​ ಭೀತಿಗೆ ದೇಶವೇ ಬೆಚ್ಚಿ ಬಿದ್ದಿದೆ. ಚೀನಾದಲ್ಲಂತೂ ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಹಾಗಾಗಿ ಅಲ್ಲಿನ ಪರಿಸ್ಥಿತಿ ತಿಳಿದರೆ ಆಫೀಸು, ಸ್ಕೂಲ್​, ಮನೆ ಅತ್ತಿಂದಿತ್ತ ಒಡಾಡಲು ಆಗದ ಪರಿಸ್ಥಿತಿ ಎದುರಾಗಿದೆ. ಮಾತ್ರವಲ್ಲದೆ, ಈ ವೈರಸ್​ ಭೀತಿಯೂ ಇತರೆ ದೇಶಗಳಿಗೂ ಹರಡಿದೆ.


  ಚೀನಾದಲ್ಲಿ ಈ ಡೆಡ್ಲಿ ವೈರಸ್​ನಿಂದಾಗಿ ಮಾತನಾಡದಂತ ಪರಿಸ್ಥಿತಿ ಎದುರಾಗಿದೆ. ಎಲ್ಲಡೆಯೂ ಮುಖಕ್ಕೆ ಮಾಸ್​​ ಹಾಕಿಕೊಂಡು ಓಡಾಡುತ್ತಿದ್ದಾರೆ. ಇತ್ತ ಜೋಡಿಯೊಂದು ವಿವಾಹವಾದ ರೀತಿ ನೋಡಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ. ಅಷ್ಟಕ್ಕೂ ಆ ಜೋಡಿಗಳು ಮದುವೆ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ


  ಮದುವೆ ನಿಶ್ಚಯಗೊಂಡ ಜೋಡಿಗಳಿಬ್ಬರು ವಿವಾಹವಾದ ರೀತಿ ಭಿನ್ನವಾಗಿದೆ. ಕೊರೊನಾ ವೈರಸ್​ ಭೀತಿಯಿಂದ ಜೋಡಿಗಳಿಬ್ಬರು ಆನ್​ಲೈನ್​ ಸ್ಟೀಮಿಂಗ್ ಮೂಲಕ ಮದುವೆ ಆಗಿದ್ದಾರೆ.
  ಸಿಂಗಾಪುರ ಈ ಜೋಡಿ  ಇತ್ತೀಚೆಗೆ ಚೀನಾದ ವುಹಾನ್​ ಪ್ರಾಂತದ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಹೀಗಾಗಿ ತಮ್ಮ ಮದುವೆಯಂದು ಬೇರೆಯವರಿಗೂ ಈ ಸೋಂಕು ತಗುಲಿದರೆ ಕಷ್ಟವೆಂಬ ಕಾರಣಕ್ಕೆ ನೇರ ಪ್ರಸಾರದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಸಿಂಗಾಪುರದ ಕ್ಯಾರಂಟೈನ್​ನಿಂದ ಇವರು ತಮ್ಮ ಮದುವೆಯ ಲೈವ್​ ಸ್ಟ್ರೀಮ್​ ಮಾಡಿದ್ದರು.


  ವಿಭಿನ್ನವಾಗಿ ಈ ಜೋಡಿಗಳು ಮದುವೆ ಆಗಿದ್ದಾರೆ. ದೂರದ ಹೋಟೆಲಿನಲ್ಲಿ ಇದ್ದುಕೊಂಡು ಅಲ್ಲಿಂದ ಲೈವ್​ ಸ್ಟ್ರೀಮ್​ ಮಾಡಿದ್ದಾರೆ. ​ ಮದುವೆಗೆ ಆಗಮಿಸಿದ ಜನರು ದೊಡ್ಡ ಪರದೆಯ ಮೇಲೆ ಮದುವೆ ವೀಕ್ಷಿಸಿ ಜೊಡಿಗಳಿಗೆ ಶುಭ ಹಾರೈಸಿದ್ದಾರೆ. ಕೊರೊನಾ ವೈರಸ್​ ಭೀತಿ ಜೋಡಿಗಳ ಮದುವೆಯನ್ನು ಲೈವ್​ ಸ್ಟ್ರಿಮ್​ ಮಾಡಿಕೊಳ್ಳುವಂತೆ ಮಾಡಿದೆ.


  ಈ ಹಿಂದೆ ವರ ತನ್ನ ತಾಯಿಯನ್ನು ಭೇಟಿಯಾಗಲು ವಧುವನ್ನು ಕರೆದುಕೊಂಡು ಚೀನಾದ ಹ್ಯುನಾನ್​​​ ಪ್ರದೇಶಕ್ಕೆ ಹೋಗಿದ್ದನು. ಹ್ಯುನಾನ್​ ಕೊರೊನಾ ವೈರಸ್​ ರೋಗ ಹುಟ್ಟಿಕೊಂಡ ನಗರದಲ್ಲೇ ಇದೆ. ಇಲ್ಲಿಗೆ ಭೇಟಿ ನೀಡಿದ್ದ ಪರಿಣಾಮ ಎಲ್ಲಾದರೂ ಸೋಂಕು ತಗುಲಿದರೆ ಅದು ಬೇರೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು  14 ದಿನಗಳವರೆಗೆ ಯಾರನ್ನು ನೇರವಾಗಿ ಭೇಟಿಯಾದಗೆ ಪ್ರತ್ಯೇಕವಾಗಿ ಇರಲು ನಿರ್ಧರಿಸದ್ದಾರೆ.


  ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾಗೆ ರೆಡಿಯಾಗುತ್ತಿದ್ದಾರೆ ಕಿಚ್ಚ ಸುದೀಪ್​!

  Published by:Harshith AS
  First published: