ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನಡೆಸಿದ , ಅಧ್ಯಯನದ ಪ್ರಕಾರ ಸೋಂಕಿತ ವ್ಯಕ್ತಿಯ ಸುತ್ತ 10 ಅಡಿ ಅಥವಾ 3.048 ಮೀಟರ್ ಗಾಳಿಯಲ್ಲಿ ಕರೋನ ವೈರಸ್ ಪತ್ತೆಯಾಗಬಹುದು ಎಂದು ಸಂಸತ್ತಿಗೆ ಶುಕ್ರವಾರ ತಿಳಿಸಲಾಯಿತು. ಲೋಕಸಭೆಯಲ್ಲಿ ಎತ್ತಿದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಸಿಎಸ್ಐಆರ್ ಅಧ್ಯಯನದ ಫಲವಾಗಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಎಲ್ಲರ ಗಮನಕ್ಕೆ ತಂದರು.
ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ನಡೆಸಿದ ಅಧ್ಯಯನದ ಪ್ರಕಾರ ಸೋಂಕಿತ ವ್ಯಕ್ತಿಯ ಸುತ್ತ ಗಾಳಿಯಲ್ಲಿ 10 ಅಡಿ (3.048 ಮೀಟರ್) ಅಂತರದವರೆಗೆ ಕರೋನವೈರಸ್ ಕಂಡು ಬರುತ್ತದೆ ಎಂದು ಹೇಳಾಗಿದೆ. ಇದಲ್ಲದೆ ಗಾಳಿಯ ದಿಕ್ಕಿನ ಹರಿವು ಸಹ ಇಲ್ಲಿ ಪ್ರಮುಖ ಕಾರಣವಾಗುತ್ತದೆ, ಗಾಳಿಗುಳ್ಳೆಗಳ ಮೇಲೆ ವೈರಸ್ ಬಹು ದೂರದವರೆಗೆ ಮಾಡುವ ಸಾಧ್ಯತೆಯನ್ನು ಸಹ ನಿರಾಕರಿಸಲಾಗುವುದಿಲ್ಲ ಎಂದು ಈ ಅಧ್ಯಯನ ತಿಳಿಸಿದೆ "ಎಂದು ಸಿಂಗ್ ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ, ಮಾಸ್ಕ್ ಧರಿಸಿರುವುದರಿಂದ ಗಾಳಿಯ ಮೂಲಕ ಹರಡಬಹುದಾದ ಸೋಂಕನ್ನು ಆದಷ್ಟು ನಾವು ತಡೆ ಹಿಡಿಯಬಹುದು. ಈ ಮೂಲಕ ಅಪಾಯವನ್ನು ದೂರ ಮಾಡಬಹುದು, ಆದ ಕಾರಣ ಎಲ್ಲರೂ ಮಾಸ್ಕ್ ಧರಿಸುವುದು ಅತ್ಯವಶ್ಯಕ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHF & W) 28 ಜೀನೋಮ್ ಅನುಕ್ರಮ ಪ್ರಯೋಗಾಲಯಗಳ ಒಕ್ಕೂಟ. ), ಸಿಎಸ್ಐಆರ್, ಶಿಕ್ಷಣ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಜ್ಯ ಸರ್ಕಾರಗಳು - ಭಾರತದಲ್ಲಿ ಕರೋನ ವೈರಸ್ ಜೀನೋಮಿಕ್ ವ್ಯತ್ಯಾಸಗಳನ್ನು ಅಧ್ಯಯನ ಮಾಡುವುದು ಈ ಎಲ್ಲಾ ಸರ್ಕಾರದ ಒಟ್ಟಾರೆ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ತಿಂಗಳಿಗೆ 5000 ರೂ ಉಳಿತಾಯ ಮಾಡಿ, 5 ವರ್ಷಗಳಲ್ಲಿ ಸಂಪಾದಿಸಿ 3 ಲಕ್ಷಕ್ಕೂ ಅಧಿಕ ಹಣ..!
ಐಸಿಎಂಆರ್ ದತ್ತಾಂಶದ ಪ್ರಕಾರ, ಡಿಸೆಂಬರ್ 20 ರಿಂದ ಜುಲೈ 19 2021 ರ ನಡುವೆ 1,88,26,913 ಕೊರೋನಾ ಸೊಂಕು ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು. “INSACOG ಹೆಸರಿನಲ್ಲಿ ಅಧ್ಯಯನ ಒಕ್ಕೂಟ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ INSACOG ಒಕ್ಕೂಟವು 57,476 SARS-CoV-2 ಜೀನೋಮ್ಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಈ ಪೈಕಿ 44,334 ಮಾದರಿಗಳನ್ನು ವಿಶ್ಲೇಷಿಸಿ ಪ್ಯಾಂಗೊಲಿನ್ ವಂಶಾವಳಿಯನ್ನು ವರ್ಗೀಕರಿಸಲಾಗಿದೆ ಮತ್ತು ಸಾರ್ವಜನಿಕ ಆರೋಗ್ಯದ ಉದ್ದೇಶದಿಂದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್ಸಿಡಿಸಿ) ಈ ಎಲ್ಲಾ ಅಧ್ಯಯನ ಸಂಗತಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ ಹಾಗೂ ಗುಂಪುಗೂಡುವುದನ್ನು ನಿಯಂತ್ರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ