ಬೆಂಗಳೂರು: ಕೋವಿಡ್ ನಿಯಂತ್ರಣ ಮಾಡುವಲ್ಲಿ ಕರ್ನಾಟಕ ಸರ್ಕಾರ ಮುಂದಿದೆ. ಬೆಂಗಳೂರಲ್ಲಿ ಬೇರೆ ರಾಜ್ಯಗಳ ರಾಜಧಾನಿಗಳಿಗಿಂತ ಕೊರೋನಾ ಕಡಿಮೆ ಆಗಿದೆ. ಸರ್ಕಾರದ ಪರಿಶ್ರಮದಿಂದ ಕೋವಿಡ್ ಕಡಿಮೆಯಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಂಕಿ- ಅಂಶಗಳ ಸಮೇತ ವಿವರಿಸಿದರು.
ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ ಬಿಎಸ್ವೈ, ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಮುಂಬೈನಲ್ಲಿ 74,252 ಜನ ಕೊರೋನಾ ಸೋಂಕಿತರು ಇದ್ದಾರೆ. ಇದರಲ್ಲಿ 42,329 ಜನ ಗುಣಮುಖರಾಗಿದ್ದರೆ, 4284 ಸಾವಾಗಿದೆ. ನವದೆಹಲಿಯಲ್ಲಿ 80,188 ಜನ ಸೋಂಕಿತರಿದ್ದಾರೆ. ಗುಣಮುಖರಾದವರು 49,301, ಸತ್ತವರ ಸಂಖ್ಯೆ 2558. ಚೆನ್ನೈನಲ್ಲಿ 51,699 ಸೋಂಕಿತರು ಇದ್ದಾರೆ. 31,045 ಗುಣಮುಖರಾಗಿದ್ದಾರೆ. 733 ಮೃತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ 5402 ಜನರಿಗೆ ಪಾಸಿಟಿವ್ ಇದ್ದು, 3123 ಜನ ಗುಣಮುಖರಾಗಿದ್ದಾರೆ. 359 ಜನ ಸತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರು 3321 ಇದ್ದು, 81 ಮಂದಿ ಮೃತಪಟ್ಟಿದ್ದಾರೆ. ದೆಹಲಿ, ಚೆನ್ನೈ, ಕೊಲ್ಕತ್ತಾ, ಮುಂಬೈಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನಾವು ಶಕ್ತಿ ಮೀರಿ ಕೊರೋನಾ ಹಬ್ಬದಂತೆ ತಡೆದಿದ್ದೇವೆ. ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ. ಇಲ್ಲಿ ಶಂಕಿತರು ಕಂಡುಬಂದರೆ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನು ಓದಿ: Unlock 2.0 Guidelines: ನಾಳೆಗೆ ಅನ್ ಲಾಕ್ -1 ಮುಕ್ತಾಯ; ಜುಲೈ 1ರಿಂದ ಅನ್ ಲಾಕ್ -2 ಜಾರಿ, ಏನಿರಲಿದೆ? ಏನಿರಲ್ಲ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ