• Home
  • »
  • News
  • »
  • coronavirus-latest-news
  • »
  • ಸದ್ಯ ದೇಶದಲ್ಲಿ ಹತೋಟಿಯಲ್ಲಿರುವ ಕೊರೋನಾ; 10 ವಾರ ಲಾಕ್​ಡೌನ್ ಮಾಡಿದರೆ ಮಾತ್ರ ಸಂಪೂರ್ಣ ನಿಯಂತ್ರಣ!

ಸದ್ಯ ದೇಶದಲ್ಲಿ ಹತೋಟಿಯಲ್ಲಿರುವ ಕೊರೋನಾ; 10 ವಾರ ಲಾಕ್​ಡೌನ್ ಮಾಡಿದರೆ ಮಾತ್ರ ಸಂಪೂರ್ಣ ನಿಯಂತ್ರಣ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

'ಭಾರತದಲ್ಲಿ ಕನಿಷ್ಠ 10 ವಾರಗಳ ಲಾಕ್​ಡೌನ್ ಅವಶ್ಯಕ.‌ ಈ ಹಂತದಲ್ಲಿ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿದರೆ ಮುಂದೆ ಅನಾಹುತ ಆಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿವೆ. ಕೇಂದ್ರ ಸರ್ಕಾರ ಹೊರಡಿಸುವ ಹೆಲ್ತ್ ಜರ್ನಲ್ "ದಿ ಲ್ಯಾನ್ಸೆಟ್" ಸಂಪಾದಕ ರಿಚರ್ಡ್ ಹಾರ್ಟನ್ ಇಂಥದೊಂದು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಮಾರಣಾಂತಿಕ ಕೊರೋನಾವನ್ನು ಕೊನೆಗಾಣಿಸಲೇಬೇಕೆಂದು ಒಂದಲ್ಲ, ಎರಡು ಬಾರಿ ಲಾಕ್​ಡೌನ್ ಮಾಡಲಾಯಿತು. ಈಗಾಗಲೇ ದೇಶ ಸ್ಥಬ್ದವಾಗಿ ಬರೊಬ್ಬರಿ ತಿಂಗಳಾಯಿತು. ಆದರೂ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದರ ನಡುವೆಯೂ ಇತರೆ ದೇಶಗಳಿಗೆ ಹೊಲಿಸಿಕೊಂಡರೆ ಭಾರತದ ಸಾಧನೆ ತುಸು ಸಮಾಧಾನಕರವಾಗಿಯೇ ಇದೆ.


ಮೂವತ್ತು ದಿನದಲ್ಲಿ ಭಾರತದಲ್ಲಿ ಆಗಿದ್ದೇನು? 'ಮಿಷನ್ ಲಾಕ್​ಡೌನ್ ಯಶಸ್ವಿಯಾಯಿತೋ ಇಲ್ಲವೋ? ಲಾಕ್​ಡೌನ್ ಸಮಯದಲ್ಲಿ ಕೊರೋನಾ ನಿಯಂತ್ರಣದ ಪ್ರಮಾಣ ಹೇಗಿದೆ? ಎಂಬಿತ್ಯಾದಿ ಸಂಗತಿಗಳನ್ನು ಬೆನ್ನುಹತ್ತಿದರೆ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಭಾರತವು ಸೋಂಕು ಹರಡುವಿಕೆ ತಡೆಯುವುದರಲ್ಲಿ ಸ್ವಲ್ಪ ಮಟ್ಟಗಿನ ಯಶಸ್ಸು ಸಾಧಿಸಿದೆ.


ಭಾರತದಲ್ಲಿ ಇತರೆ ದೇಶಗಳಿಂತ ಕೊರೋನಾ ಸೋಂಕು ಪೀಡಿತರ ಪ್ರಮಾಣ ಕಡಿಮೆ ಎಂಬುದಕ್ಕೆ ಇಲ್ಲಿ ಕೆಲ ಉದಾಹರಣೆಗಳಿವೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಮೊದಲ ಬಾರಿಗೆ ಲಾಕ್​ಡೌನ್ ಘೋಷಣೆ ಮಾಡುವ ಮುನ್ನ ಮಾರ್ಚ್ 19ರಂದು ಇಡೀ ದೇಶದಲ್ಲಿ ಇದ್ದ ಕೊರೋನಾ ಪೀಡಿತರ ಸಂಖ್ಯೆ 166. ತಿಂಗಳ ಬಳಿಕ ಭಾರತದಲ್ಲಿ 5 ಲಕ್ಷ ಮಂದಿಗೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಲಾಗಿದೆ. ಈಗಿರುವ ಕೊರೋನಾ ಪೀಡಿತರ ಸಂಖ್ಯೆ 24,506.


ಅಮೇರಿಕಾ ವಿಷಯಕ್ಕೆ ಬಂದರೆ ಅದು ಮಾರ್ಚ್ 24ರ ವೇಳೆಗೆ 5 ಲಕ್ಷ ಜನರಿಗೆ ಕೊರೋನಾ ಸೋಂಕು ಪರೀಕ್ಷೆ ಮಾಡಿತ್ತು. ಅಲ್ಲಿ 5 ಲಕ್ಷ ಜನರಿಗೆ ಪರೀಕ್ಷೆ ನಡೆಸಿದಾಗ ಸುಮಾರು 80.000 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಮಾರ್ಚ್ 31ಕ್ಕೆ ಇಟಲಿಯಲ್ಲೂ 5 ಲಕ್ಷ ಜನರಿಗೆ ಕೊರೋನಾ ಸೋಂಕು ಪರೀಕ್ಷೆ ಮಾಡಲಾಗಿತ್ತು. ಆಗ ಒಂದು ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿತ್ತು. ಇಂಗ್ಲೆಡ್ ಏಪ್ರಿಲ್ 20ರ ವೇಳೆಗೆ 5 ಲಕ್ಷ ಟೆಸ್ಟ್ ಮಾಡಿಸಿತ್ತು. ಅಲ್ಲಿ ಒಟ್ಟು 1.20 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಇರಾನ್ ದೇಶ ಏಪ್ರಿಲ್ 12ರವರೆಗೆ 5 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ಮಾಡಿಸಿತ್ತು. 80.000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.


ಈ ಅಂಕಿ ಅಂಶಗಳಿಂದ ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆ ತಹಬದಿಯಲ್ಲಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ. ಸದ್ಯ ಮೇ 3ರವರೆಗೆ ಭಾರತದಲ್ಲಿ ಎರಡನೇ ಹಂತದ ಲಾಕ್​ಡೌನ್ ಇದ್ದು, ಇದನ್ನು ಮುಂದುವರೆಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ‌.


ಇದಕ್ಕೆ ಪೂರಕವಾಗಿ 'ಭಾರತದಲ್ಲಿ ಕನಿಷ್ಠ 10 ವಾರಗಳ ಲಾಕ್​ಡೌನ್ ಅವಶ್ಯಕ.‌ ಈ ಹಂತದಲ್ಲಿ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿದರೆ ಮುಂದೆ ಅನಾಹುತ ಆಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿವೆ. ಕೇಂದ್ರ ಸರ್ಕಾರ ಹೊರಡಿಸುವ ಹೆಲ್ತ್ ಜರ್ನಲ್ "ದಿ ಲ್ಯಾನ್ಸೆಟ್" ಸಂಪಾದಕ ರಿಚರ್ಡ್ ಹಾರ್ಟನ್ ಇಂಥದೊಂದು ಎಚ್ಚರಿಕೆ ನೀಡಿದ್ದಾರೆ.


ರಿಚರ್ಡ್ ಹಾರ್ಟನ್ ಅವರ ಪ್ರಕಾರ ಕೊರೋನಾ ಸಾಂಕ್ರಾಮಿಕ ರೋಗಗಳನ್ನು ನಿಭಾಯಿಸಲು ಭಾರತಕ್ಕೆ 10 ವಾರಗಳ ಅವಶ್ಯಕವಿದೆ. ಮೇ 3ರ ಬಳಿಕ ಲಾಕ್​ಡೌನ್ ವಿಸ್ತರಿಸದೇ ಇದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪೀಡಿತವಾಗಿರುವ ರಾಷ್ಟ್ರಗಳು ಕೇವಲ ಎಂಟು ವಾರ ಲಾಕ್​ಡೌನ್ ಮಾಡಿವೆ. ಭಾರತದಲ್ಲಿ ಮೇ 3ಕ್ಕೆ ಲಾಕ್​ಡೌನ್ ಗೆ 40 ದಿನ ಆಗಲಿದೆ. ಆದುದರಿಂದ ಮೇ 3ರ ಬಳಿಕವೂ ವಿನಾಯತಿ ನೀಡದೆ ಇನ್ನೂ ಒಂದು ತಿಂಗಳು ವಿಸ್ತರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಒಂದೇ ದಿನ ಕೊರೋನಾಗೆ 18 ಬಲಿ: ಸಾವಿನ ಸಂಖ್ಯೆ 301ಕ್ಕೇರಿಕೆ, ಒಟ್ಟು 6817 ಮಂದಿಗೆ ಸೋಂಕು


ಜೂನ್ ತಿಂಗಳ ಮೊದಲ ವಾರದಲ್ಲಿ ಲಾಕ್​ಡೌನ್ ವಿನಾಯತಿ ನೀಡಬೇಕು. ಮೇ 3ರ ಬಳಿಕ ಜನರು ಮನೆಯಿಂದ ಹೊರಗಡೆ ಬಂದರೆ ಎರಡನೇ ಹಂತದಲ್ಲಿ ಸೋಂಕು ಹರಡುವಿಕೆ ಆರಂಭವಾಗುವ ಸಾಧ್ಯತೆ ಇದೆ‌. ಸದ್ಯ ಭಾರತದಲ್ಲಿ ಲಾಕ್​ಡೌನ್ ಇರುವುದರಿಂದ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದ್ದು ಪರಿಸ್ಥಿತಿ ಹೀಗೆ ಮುಂದುವರೆಯಬೇಕಾದರೆ ಲಾಕ್​ಡೌನ್ ವಿಸ್ತರಿಸಬೇಕು ಎಂದು ರಿಚರ್ಡ್ ಹಾರ್ಟನ್ ಹೇಳಿದ್ದಾರೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು