ಕ್ರಿಕೆಟ್ ದಕ್ಷಿಣ ಆಫ್ರಿಕಾದ ಏಳು ಹಾಗೂ ಪಾಕ್​ನ ಮೂವರು ಆಟಗಾರರಿಗೆ ಕೊರೋನಾ ಪಾಸಿಟಿವ್

ಕ್ರಿಕೆಟ್ ಸೌತ್​ ಆಫ್ರಿಕಾ ದೇಶಾದ್ಯಂತ 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಾಮೂಹಿಕವಾಗಿ ಕೊರೋನಾ ಪರೀಕ್ಷೆ ನಡೆಸಿತ್ತು. ಇದರಲ್ಲಿ ಅಂಗಸಂಸ್ಥೆ ಸಿಬ್ಬಂದಿ ಮತ್ತು ಕೆಲವು ಗುತ್ತಿಗೆ ಪಡೆದ ವೃತ್ತಿಪರ ಆಟಗಾರರು ಸೇರಿದ್ದಾರೆ ಎನ್ನಲಾಗಿದೆ.

news18-kannada
Updated:June 23, 2020, 9:29 AM IST
ಕ್ರಿಕೆಟ್ ದಕ್ಷಿಣ ಆಫ್ರಿಕಾದ ಏಳು ಹಾಗೂ ಪಾಕ್​ನ ಮೂವರು ಆಟಗಾರರಿಗೆ ಕೊರೋನಾ ಪಾಸಿಟಿವ್
ಪ್ರಾತಿನಿಧಿಕ ಚಿತ್ರ
  • Share this:
ಪಾಕಿಸ್ತಾನದಲ್ಲಿ ಕೊರೋನಾ ಆರ್ಭಟ ಜೋರಾಗಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಆಟಗಾರರಿಗೆ ವೈರಸ್ ಹಬ್ಬುತ್ತಿರುವುದು ಆತಂಕಕ್ಕೀಡು ಮಾಡಿದೆ. ಇದೀಗ ಪಾಕಿಸ್ತಾನದ ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ಲೇಯರ್ಸ್​ಗೆ ಯಾವುದೇ ಲಕ್ಷಣ ಕಾಣದೆ ಕೋವಿಡ್​​ ಮಹಾಮಾರಿ ವಕ್ಕರಿಸಿರುವುದು ಖಚಿತಗೊಂಡಿದೆ.

ಇದರಿಂದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಇರಾದೆಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಹಿನ್ನಡೆಯಾದಂತಾಗಿದೆ. ಶಾದಬ್ ಖಾನ್, ಹ್ಯಾರಿಸ್ ರೌಫ್ ಹಾಗೂ ಹೈದರ್ ಅಲಿಗೆ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!

'ಈ ಮೂವರು ಆಟಗಾರರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ. ಇಂಗ್ಲೆಂಡ್​ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರನ್ನು ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಮೂವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮೂವರನ್ನು ಹೊರತುಪಡಿಸಿ ಉಳಿದವರದ್ದು ನೆಗೆಟಿವ್ ಬಂದಿದೆ' ಪಿಸಿಬಿ ಮಾಹಿತಿ ನೀಡಿದೆ.

ಸೋಂಕಿತ ಮೂವರನ್ನು ತಕ್ಷಣವೇ ಸಂಪರ್ಕಿಸಿದ ಪಿಸಿಬಿ ವೈದ್ಯಕೀಯ ತಂಡ, ಕ್ವಾರಂಟೈನ್‌ಗೆ ಒಳಪಡಲು ಸೂಚಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ ತಂಡ ಮಾಜಿ ನಾಯಕ ಶಾಹಿದ್ ಅಫ್ರಿದಿಗೂ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಅಫ್ರಿದಿ ಸದ್ಯ ಕರಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆಯಲ್ಲಿ ಏಳು ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಕ್ರಿಕೆಟ್​​ ಸಂಸ್ಥೆಯ ಸಿಇಒ ಜಾಕ್ವೆಸ್ ಫೌಲ್ ತಿಳಿಸಿದ್ದಾರೆ. ಕ್ರಿಕೆಟ್ ಸೌತ್​ ಆಫ್ರಿಕಾ ದೇಶಾದ್ಯಂತ 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಾಮೂಹಿಕವಾಗಿ ಕೊರೋನಾ ಪರೀಕ್ಷೆ ನಡೆಸಿತ್ತು. ಇದರಲ್ಲಿ ಅಂಗಸಂಸ್ಥೆ ಸಿಬ್ಬಂದಿ ಮತ್ತು ಕೆಲವು ಗುತ್ತಿಗೆ ಪಡೆದ ವೃತ್ತಿಪರ ಆಟಗಾರರು ಸೇರಿದ್ದಾರೆ ಎನ್ನಲಾಗಿದೆ.

IPL ಆಡದ ಕಾರಣ 10 ಕೋಟಿ ರೂ.ಗೆ ಬೇಡಿಕೆಯಿಟ್ಟ ಮಾಜಿ RCB ಆಟಗಾರ

ಕೊರೋನಾ ಪರೀಕ್ಷೆ ಪಾಸಿಟಿವ್ ಬಂದಿದ್ದರಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಆಟಗಾರರಿದ್ದಾರೆಯೆ ಎಂಬುದನ್ನು ಫೌಲ್ ತಿಳಿಸಿಲ್ಲ. 'ನಮ್ಮ ವೈದ್ಯಕೀಯ ನೈತಿಕ ಪ್ರೋಟೋಕಾಲ್ ಪ್ರಕಾರ ಪಾಸಿಟಿವ್ ಫಲಿತಾಂಶ ಬಂದ ಜನರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ನಮಗೆ ಅನುಮತಿಯಿರುವುದಿಲ್ಲ,' ಎಂದು ಅವರು ಹೇಳಿದ್ದಾರೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading