HOME » NEWS » Coronavirus-latest-news » CORONAVIRUS CHALLENGE MAN WHO LICKED TOILET COMMODE SEAT TESTS COVID19 POSITIVE SCT

Corona Challenge: ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆ!

Corona Challenge: ಒಬ್ಬರಿಂದ ಒಬ್ಬರಿಗೆ ಹರಡುವ ಕೊರೋನಾ ವೈರಸ್​ಗೆ ವಿಶ್ವಾದ್ಯಂತ 20 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:March 26, 2020, 12:52 PM IST
Corona Challenge: ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆ!
ಕೊರೋನಾ ಚಾಲೆಂಜ್ ವಿಡಿಯೋ ಮಾಡಿದ್ದ ಯುವಕ
  • Share this:
ನವದೆಹಲಿ (ಮಾ. 26): ಕೊರೋನಾ ವೈರಸ್​ ಗಂಭೀರತೆ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದ್ದರೂ ಕೆಲವು ಜನರು ಅದನ್ನು ತಮಾಷೆಯಾಗೇ ಪರಿಗಣಿಸಿದ್ದಾರೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಚಾಲೆಂಜ್ ವಿಡಿಯೋಗಳು ಹರಿದಾಡುತ್ತಿವೆ. ಟಾಯ್ಲೆಟ್​ ಸೀಟ್​ ನೆಕ್ಕುವ ಮೂಲಕ ಕೊರೋನಾಗೆ ಚಾಲೆಂಜ್ ಹಾಕಿರುವ ಅನೇಕ ವಿಡಿಯೋಗಳು ಭಾರೀ ವೈರಲ್ ಆಗಿದ್ದವು. ಕೊರೋನಾ ಚಾಲೆಂಜ್​ಗಾಗಿ ಕಮೋಡ್ ನೆಕ್ಕಿದ್ದ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಖಾತರಿಯಾಗಿದೆ.

#CoronaChallenge ಸ್ವೀಕರಿಸಿದ್ದ ಗೇಶಾನ್ ಮೆಂಡೆಸ್ ಎಂಬ ಯುವಕ ಟಾಯ್ಲೆಟ್ ಸೀಟ್ ನೆಕ್ಕುವ ವಿಡಿಯೋ ಮಾಡಿ ಟಿಕ್​ಟಾಕ್​ನಲ್ಲಿ ಹರಿಯಬಿಟ್ಟಿದ್ದ. ಆ ವಿಡಿಯೋ ನೋಡಿದ ಕೆಲವು ಸೆಲೆಬ್ರಿಟಿಗಳು ಕೂಡ ಈ ಸವಾಲನ್ನು ಸ್ವೀಕರಿಸಿ, ಕಮೋಡ್ ನೆಕ್ಕಿದ್ದರು. ಕೊರೋನಾ ವೈರಸ್​ ಸಾಂಕ್ರಾಮಿಕ ರೋಗವಲ್ಲ ಎಂದು ಸಾಬೀತುಪಡಿಸಲು ವಿಡಿಯೋ ಮಾಡಿದ್ದರು.
ಇದನ್ನೂ ಓದಿ: Viral Video: ದೇಶವೇ ಲಾಕ್​ಡೌನ್​ ಆದರೂ ಲೆಕ್ಕಕ್ಕಿಲ್ಲ; ಪೊಲೀಸರಿಗೇ ಮಚ್ಚು ತೋರಿಸಿದ ಸ್ವಘೋಷಿತ ದೇವಮಾತೆ!

ಆದರೆ, ಒಬ್ಬರಿಂದ ಒಬ್ಬರಿಗೆ ಹರಡುವ ಕೊರೋನಾ ವೈರಸ್​ಗೆ ವಿಶ್ವಾದ್ಯಂತ 20 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇದೀಗ ತಾನು ಆಸ್ಪತ್ರೆಯಲ್ಲಿ ಮಲಗಿರುವ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಗೇಶಾನ್ ಮೆಂಡೆಸ್ ನನಗೆ ಕೊರೋನಾ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದಾನೆ. ಆತನ ಟ್ವಿಟ್ಟರ್​ ಖಾತೆಯನ್ನು ಈಗ ಬ್ಲಾಕ್​ ಮಾಡಲಾಗಿದೆ.ಇದನ್ನೂ ಓದಿ: ಜೈಲುಗಳಲ್ಲೂ ಕೊರೋನಾ ವೈರಸ್ ಭೀತಿ; ಹರಿಯಾಣದ ಕೈದಿಗಳಿಗೆ 4 ವಾರ ರಜೆ ಘೋಷಣೆ

First published: March 26, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories