ಒಂದೇ ದಿನ 2,200 ಕೊರೋನಾ ಪ್ರಕರಣ; ಭಾರತದಲ್ಲಿ 42 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ

ಭಾನುವಾರದಿಂದ ಸೋಮವಾರ ಮುಂಜಾನೆವರೆಗೆ ಒಟ್ಟು 2,270 ಕೊರೋನಾ ಪ್ರಕರಣ ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 42,533 ಆಗಿದೆ.

news18-kannada
Updated:May 4, 2020, 10:25 AM IST
ಒಂದೇ ದಿನ 2,200 ಕೊರೋನಾ ಪ್ರಕರಣ; ಭಾರತದಲ್ಲಿ 42 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಏ.27): ಭಾರತದಲ್ಲಿ ಲಾಕ್​ಡೌನ್​ ಆದೇಶದ ನಡುವೆಯೂ ಕೊರೋನಾ ವೈರಸ್ ಬಹಳ ವೇಗವಾಗಿ ಹಬ್ಬುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಇಂದಿನಿಂದ ಮೂರನೇ ಹಂತದ ಲಾಕ್​ಡೌನ್​ ಕೂಡ ಆರಂಭವಾಗಿದೆ. ಸರ್ಕಾರ ಎಷ್ಟೇ ಹರಸಾಹಸ ಪಟ್ಟರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಭಾನುವಾರ ಭಾರತದಲ್ಲಿ ದಾಖಲೆಯ ಕೊರೋನಾ ಪ್ರಕರಣ ದಾಖಲಾಗಿವೆ. ಒಂದೆ ದಿನ 2,200 ಸಾವಿರ ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. 

ಭಾನುವಾರದಿಂದ ಸೋಮವಾರ ಮುಂಜಾನೆವರೆಗೆ ಒಟ್ಟು 2,270 ಕೊರೋನಾ ಪ್ರಕರಣ ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 42,533 ಆಗಿದೆ. ಈ ಪೈಕಿ 11,707  ಜನರು ಗುಣಮುಖರಾಗಿದ್ದಾರೆ. 1,373 ಜನರು ಮೃತಪಟ್ಟಿದ್ದಾರೆ.

ಭಾರತದ 20 ಮಹಾ ನಗರಗಳಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮುಂಬೈ, ಅಹಮದಾಬದ್, ದೆಹಲಿ, ಚೆನ್ನೈ ನಗರಗಳಲ್ಲೇ ಹೆಚ್ಚು ಕೊರೋನಾ ಪೀಡಿತರಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ದೇಶದಾದ್ಯಂತ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರ ತುಂಬುವುದಾಗಿ ಘೊಷಿಸಿದ ಕಾಂಗ್ರೆಸ್

ಇನ್ನು, ವಿಶ್ವದ ದೊಡ್ಡಣ್ಣ ವಿಶ್ವದ ದೊಡ್ಡಣ್ಣ ಅಮೆರಿಕ ಕೊರೋನಾ ವೈರಸ್​​ ದಾಳಿಗೆ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 22 ಸಾವಿರ ಪ್ರಕರಣ ದಾಖಲಾಗಿದೆ. 1 ಸಾವಿರ ಮಂದಿ ಕೊರೋನಾ ವೈರಸ್​​ಗೆ ಬಲಿಯಾಗಿದ್ದಾರೆ.
First published: May 4, 2020, 10:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading