ರಾಜ್ಯದಲ್ಲಿ 18 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ; ಬೆಂಗಳೂರಿನಲ್ಲಿ ಶತಕ ದಾಖಲಿಸಿದ ಸಾವಿನ ಸಂಖ್ಯೆ

ಇವತ್ತು 271 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖವಾದವರ ಸಂಖ್ಯೆ 8,334 ಆಗಿದೆ. ಈ ಮೂಲಕ ಆ್ಯಕ್ಟಿವ್ ಕೇಸ್ಗಳು 9,406ಕ್ಕೆ ಬಂದು ನಿಂತಿದೆ. ಐಸಿಯುನಲ್ಲಿರುವವರ ಸಂಖ್ಯೆ ನಿನ್ನೆಗೆ ಹೋಲಿಸಿದರೆ ಇವತ್ತು ಇಳಿಕೆಯಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು(ಜುಲೈ 02): ರಾಜ್ಯದ ಪಾಲಿಗೆ ರಾಜಧಾನಿ ಬೆಂಗಳೂರು ಮಹಾಕಂಟಕವಾಗುತ್ತಿದೆ. ಮುಂಬೈಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ನಗರದಲ್ಲಿ ಸೋಂಕು ವ್ಯಾಪಿಸುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 889 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ನಗರದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 6,179 ಮುಟ್ಟಿದೆ. ರಾಜ್ಯಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ ಬೆಂಗಳೂರಿನ 889 ಸೇರಿ ಒಟ್ಟು 1,502 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 18,016 ಆಗಿದೆ. ಒಂದೇ ದಿನ 19 ರೋಗಿಗಳು ಸಾವನ್ನಪ್ಪಿದ್ದು ಈವರೆಗೆ ಸಾವಿನ ಸಂಖ್ಯೆ 272 ಆಗಿದೆ.

ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಶತಕ ಮುಟ್ಟಿದೆ. ಈವರೆಗೂ ಬೆಂಗಳೂರಿನಲ್ಲಿ 100 ಮಂದಿ ಕೋವಿಡ್ ರೋಗಿಗಳು ಸತ್ತಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಗರದಲ್ಲಿ ಕೊರೋನಾ ಸೋಂಕು ಸಾಮುದಾಯಿಕವಾಗಿ ಹರಡುತ್ತಿರುವುದರಿಂದ ನಿಯಂತ್ರಣ ಕಷ್ಟಸಾಧ್ಯವಾಗುತ್ತಿದೆ. ರೋಗಿಗಳ ಸೋಂಕಿನ ಮೂಲ ಹುಡುಕುವುದೂ ಅಸಾಧ್ಯವಾಗಿದೆ.

ಇದೇ ವೇಳೆ, ಇವತ್ತು 271 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖವಾದವರ ಸಂಖ್ಯೆ 8,334 ಆಗಿದೆ. ಈ ಮೂಲಕ ಆ್ಯಕ್ಟಿವ್ ಕೇಸ್​ಗಳು 9,406ಕ್ಕೆ ಬಂದು ನಿಂತಿದೆ. ಐಸಿಯುನಲ್ಲಿರುವವರ ಸಂಖ್ಯೆ ನಿನ್ನೆಗೆ ಹೋಲಿಸಿದರೆ ಇವತ್ತು ಇಳಿಕೆಯಾಗಿದೆ. ಈಗ 161 ಮಂದಿ ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಕೋವಿಡ್ ರೋಗಿಗಳು ಮತ್ತು ವಯೋವೃದ್ಧರಿಗೆ ಅಂಚೆ ಮತಕ್ಕೆ ಅವಕಾಶಇನ್ನು, ಬೆಂಗಳೂರಿನಲ್ಲಿ ಸೋಂಕು ಸಾಮುದಾಯಿಕವಾಗಿ ವ್ಯಾಪಿಸುತ್ತಿರುವುದು ಕಳವಳಕಾರಿ ಅಂಶ. ಆದರೆ, ಬೆಂಗಳೂರು ನಗರವು ರಾಜ್ಯದ ಇತರ ಭಾಗಗಳಿಗೂ ಕಂಟಕವಾಗಿ ಪರಿಣಮಿಸುತ್ತಿರುವುದು ಬಹಳ ಸ್ಪಷ್ಟವಾಗಿದೆ. ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಧಾರವಾಡ, ವಿಜಯಪುರ, ರಾಮನಗರ, ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ ಮೈಸೂರು, ದಾವಣಗೆರೆ, ರಾಮನಗರ, ತುಮಕೂರು ಮೊದಲಾದ ಜಿಲ್ಲೆಗಳಿಗೆ ಬೆಂಗಳೂರೇ ವಿಲನ್ ಆಗಿದೆ. ಬೆಂಗಳೂರಿಗೆ ಬಂದು ಹೋದ ಆ ಜಿಲ್ಲೆಯ ಜನರಿಗೆ ಸೋಂಕು ತಗುಲುತ್ತಿದೆ. ಇದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.
First published: