ಭಯ ಬಿಡಿ ಭಗವದ್ಗೀತೆ ಓದಿ, ಕೊರೋನಾ ಕಾಲದಲ್ಲಿ ಹೀಗೊಂದು ಆತ್ಮವಿಶ್ವಾಸ ತುಂಬುವ ಕೆಲಸ!

ಕೊರೋನಾ ಸಮಯದಲ್ಲೂ ತಲೆಕೆಡಿಸಿಕೊಳ್ಳದೇ ತಮ್ಮ ವಾರ್ಡ್​​ನಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿರುವ ಖುದ್ದು ಡಾ. ತೇಜಸ್ವಿನಿ ಸೀತಾರಾಮಯ್ಯರಿಗೂ ಆಧ್ಯಾತ್ಮದ ಬಗ್ಗೆ ತುಂಬಾ ಆಸಕ್ತಿಯಿದೆ. ಆಧ್ಯಾತ್ಮ ಹಾಗೂ ಧ್ಯಾನಗಳಿಂದ ಪಾಸಿಟಿವಿಟಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಅವರ ನಂಬಿಕೆ.

ಡಾ. ತೇಜಸ್ವಿನಿ ಸೀತಾರಾಮಯ್ಯ.

ಡಾ. ತೇಜಸ್ವಿನಿ ಸೀತಾರಾಮಯ್ಯ.

  • Share this:
ವಿಶ್ವದಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಪ್ರಪಂಚದಾದ್ಯಂತ 2 ಕೋಟಿಗೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಈ ಕಣ್ಣಿಗೆ ಕಾಣದ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 25 ಲಕ್ಷ ಗಡಿ ದಾಟಿದ್ದು, ಬಲಿಯಾದವರ ಸಂಖ್ಯೆ 50 ಸಾವಿರ ಸಮೀಪಿಸಿದೆ. ಹಾಗೇ ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಎರಡು ಲಕ್ಷ ದಾಟಿದ್ದು, 3, 700 ಮಂದಿ ಅಸುನೀಗಿದ್ದಾರೆ.

ರಾಜಧಾನಿ ಬೆಂಗಳೂರು ರಾಜ್ಯದ ಕೊರೋನಾ ರಾಜಧಾನಿ ಕೂಡ ಆಗಿದೆ. ಬರೋಬ್ಬರಿ 85 ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತರಿದ್ದು, 1300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹೀಗೆ ದಿನೇ ದಿನೇ ಸೋಂಕಿತರ ಹಾಗೂ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸರಕಾರ, ಸಂಘ ಸಂಸ್ಥೆಗಳು ಮಾತ್ರವಲ್ಲ ಸೆಲೆಬ್ರಿಟಿಗಳೂ ಸಹ ನಾನಾ ರೀತಿ ಕೊವಿಡ್ 19 ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

SP Balasubramaniam: ಬೇಗ ಗುಣಮುಖರಾಗಿ ಎಸ್.ಪಿ.ಬಿ.; ಒಂದೇ ಧ್ವನಿಯಲ್ಲಿ ಪ್ರಾರ್ಥಿಸುತ್ತಿದೆ ಸಂಗೀತ ಕ್ಷೇತ್ರ!

ಇದರ ನಡುವೆಯೇ ಬೆಂಗಳೂರಿನ ಪಾಲಿಕೆ ಸದಸ್ಯೆಯೊಬ್ಬರು ವಿಭಿನ್ನ ರೀತಿಯಲ್ಲಿ ಜನರಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಅದೂ ಭಗವದ್ಗೀತೆ ಹಂಚುವ ಮೂಲಕ. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜ್ಞಾನ ಭಾರತಿ ವಾರ್ಡ್ ನಂಬರ್ 129ರ ಸದಸ್ಯರಾದ ಡಾ. ತೇಜಸ್ವಿನಿ ಸೀತಾರಾಮಯ್ಯ, ತಮ್ಮ ವಾರ್ಡ್ ಜನರಿಗೆ ಭಗವದ್ಗೀತೆ ಪುಸ್ತಕಗಳನ್ನು ಹಂಚುತ್ತಿದ್ದಾರೆ. ಆ ಮೂಲಕ ವಿಭಿನ್ನ ರೀತಿಯಲ್ಲಿ ಎರಡು ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಭಗವದ್ಗೀತೆ ಪುಸ್ತಕಗಳನ್ನು ಹಂಚುತ್ತಿರುವ ಡಾ. ತೇಜಸ್ವಿನಿ ಸೀತಾರಾಮಯ್ಯ.


ಕಳೆದ ನಾಲ್ಕೂವರೆ ತಿಂಗಳಿನಿಂದ ಲಾಕ್​ಡೌನ್​​ನಿಂದಾಗಿ ಶಾಲೆ, ಕಾಲೇಜುಗಳು ಹಾಗೂ ಕಂಪನಿಗಳೂ ಬಂದ್ ಆಗಿವೆ. ಇದರಿಂದಾಗಿ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರೆ. ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್​ನಲ್ಲಿ ಬ್ಯುಸಿ. ಇನ್ನು ಮನರಂಜನೆಗಾಗಿ ಓಟಿಟಿ ಪ್ಲ್ಯಾಟ್​ಫಾರ್ಮ್ ಇದ್ದು, ಥಿಯೇಟರ್ ಬದಲು ಹೊಸ ಹೊಸ ಸಿನಿಮಾಗಳು ನೇರವಾಗಿ ಈ ಡಿಜಿಟಲ್ ಪ್ಲ್ಯಾಟ್​ಫಾರ್ಮ್ ರಿಲೀಸ್ ಆಗುತ್ತಿವೆ.

ಹೀಗಾಗಿಯೇ ಮೊಬೈಲ್, ಲ್ಯಾಪ್​ಟಾಪ್, ಟಿವಿಯಲ್ಲೇ ಸಮಯ ಕಳೆದುಹೋಗುತ್ತಿದೆ. ಅವರನ್ನು ಮತ್ತೆ ಪುಸ್ತಕದತ್ತ ಕರೆತರಲು ಆಲೋಚಿಸಿದ ಡಾ. ತೇಜಸ್ವಿನಿ ಸೀತಾರಾಮಯ್ಯ ತಮ್ಮ ವಾರ್ಡ್​ನ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿಗೆ ಭಗವದ್ಗೀತೆ ಪುಸ್ತಕಗಳನ್ನು ನೀಡಿದ್ದಾರೆ. ಜೊತಗೆ ತಮ್ಮ ಮನೆಗೆ ಬರುವ ಹೆಣ್ಣುಮಕ್ಕಳಿಗೆ ಅರಿಶಿಣ, ಕುಂಕುಮದ ಜೊತೆ ಭಗವದ್ಗೀತೆಯನ್ನೂ ನೀಡುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ.

Coronavirus Update: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ: ಕಳೆದ 24 ಗಂಟೆಯಲ್ಲಿ 63,489 ಕೇಸ್​ ಪತ್ತೆ

ಕೊರೋನಾ ಸಮಯದಲ್ಲೂ ತಲೆಕೆಡಿಸಿಕೊಳ್ಳದೇ ತಮ್ಮ ವಾರ್ಡ್​​ನಲ್ಲಿ ಓಡಾಡಿಕೊಂಡು ಕೆಲಸ ಮಾಡುತ್ತಿರುವ ಖುದ್ದು ಡಾ. ತೇಜಸ್ವಿನಿ ಸೀತಾರಾಮಯ್ಯರಿಗೂ ಆಧ್ಯಾತ್ಮದ ಬಗ್ಗೆ ತುಂಬಾ ಆಸಕ್ತಿಯಿದೆ. ಆಧ್ಯಾತ್ಮ ಹಾಗೂ ಧ್ಯಾನಗಳಿಂದ ಪಾಸಿಟಿವಿಟಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಅವರ ನಂಬಿಕೆ.

ಇನ್ನು ಕೊರೋನಾ ಸೋಂಕು ತಗುಲಿದವರು ಭಯದಿಂದಾಗಿ ಹಾಗೂ ಆತ್ಮವಿಶ್ವಾಸದ ಕೊರತೆಯಿಂದಲೇ ಜೀವ ಕೈಚೆಲ್ಲಿದ ಹಲವು ಉದಾಹರಣೆಗಳಿವೆ. ಹೀಗಾಗಿಯೇ ಕೊರೋನಾ ಸೋಂಕು ತಗುಲಿದರೂ ಭಯಗೊಳ್ಳದೇ ಧೈರ್ಯದಿಂದ ಎದುರಿಸಬೇಕು ಎಂದು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕಾರಣದಿಂದಾಗಿಯೇ ತೇಜಸ್ವಿನಿ ಅವರು, ತಮ್ಮ ವಾರ್ಡ್​ನ ಜನರಿಗೆ ಭಗವದ್ಗೀತೆ ನೀಡುತ್ತಿದ್ದಾರೆ.
Published by:Vinay Bhat
First published: