Bangalore Coronavirus: ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಿಮ್ಸ್​ ವೈದ್ಯೆಗೆ ಕೊರೋನಾ; ತನಿಖೆಗೆ ಆದೇಶಿಸಿದ ಸಚಿವ ಡಾ. ಕೆ. ಸುಧಾಕರ್

Bangalore Coronavirus Updates: ಕಿಮ್ಸ್​ ಆಸ್ಪತ್ರೆಯಲ್ಲಿ ಮಾಸ್ಕ್​, ಪಿಪಿಇ ಕಿಟ್​ಗಳ ಕೊರತೆ ಇರುವ ಬಗ್ಗೆ ಬಂದಿರುವ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

Sushma Chakre | news18-kannada
Updated:July 4, 2020, 1:34 PM IST
Bangalore Coronavirus: ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಿಮ್ಸ್​ ವೈದ್ಯೆಗೆ ಕೊರೋನಾ; ತನಿಖೆಗೆ ಆದೇಶಿಸಿದ ಸಚಿವ ಡಾ. ಕೆ. ಸುಧಾಕರ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 4): ಕೊರೋನಾ ಭೀತಿಯ ನಡುವೆಯೂ ರೋಗಿಗಳ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಿರುವ ವೈದ್ಯರಿಗೆ ಸರ್ಕಾರ ಸೂಕ್ತವಾದ ಸುರಕ್ಷಾ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬ ಆರೋಪ ಆರಂಭದಿಂದಲೂ ಕೇಳಿಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ಕಿಮ್ಸ್​ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಅಲ್ಲಿನ ವೈದ್ಯೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಿಮ್ಸ್​ ಆಸ್ಪತ್ರೆಯ ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆದೇಶಿಸಿದ್ದಾರೆ.

ಬೆಂಗಳೂರಿನ ಕಿಮ್ಸ್​ ಆಸ್ಪತ್ರೆಯ ವೈದ್ಯೆ ಅಮೂಲ್ಯ ತಮ್ಮ ಆಸ್ಪತ್ರೆಯಲ್ಲಿ ಪಿಪಿಇ ಕಿಟ್, ಎನ್​-95 ಮಾಸ್ಕ್ ಕೊರತೆ ಇರುವ ಬಗ್ಗೆ ಧ್ವನಿಯೆತ್ತಿದ್ದರು. ಆದರೆ, ಆಡಳಿತ ಮಂಡಳಿ ಆಕೆಯನ್ನೇ ದೂಷಿಸಿದ್ದರು. ಬಳಿಕ, ಅವರು ತಮ್ಮದೇ ಖರ್ಚಿನಲ್ಲಿ ಮಾಸ್ಕ್​ಗಳನ್ನು ಖರೀದಿಸಿ, ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇದಕ್ಕೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸೂಕ್ತ ಸುರಕ್ಷತೆ, ಸೌಲಭ್ಯಗಳು ಇಲ್ಲಿರುವುದೇ ಕಾರಣ ಎಂದು ಆಕೆಯ ಅಣ್ಣ ಟ್ವಿಟ್ಟರ್​ನಲ್ಲಿ ಆರೋಪಿಸಿದ್ದರು.




ಆ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಡಾ. ಕೆ. ಸುಧಾಕರ್, ಕೊರೋನಾ ವಾರಿಯರ್​​ಗಳಾದ ವೈದ್ಯರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್​ಗಳ ಸುರಕ್ಷತೆಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕಿಮ್ಸ್​ ಆಸ್ಪತ್ರೆಯಲ್ಲಿ ಮಾಸ್ಕ್​, ಪಿಪಿಇ ಕಿಟ್​ಗಳ ಕೊರತೆ ಇರುವ ಬಗ್ಗೆ ಬಂದಿರುವ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಿದ್ದೇವೆ. ಒಂದುವೇಳೆ ಕಿಮ್ಸ್​ ಆಸ್ಪತ್ರೆಯ ಆಡಳಿತ ಮಂಡಳಿಯ ತಪ್ಪು ಸಾಬೀತಾದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Published by: Sushma Chakre
First published: July 4, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading