Bangalore Coronavirus: ಕೊರೋನಾದಿಂದ ಬೆಂಗಳೂರಿನ ಎಎಸ್​ಐ ಸಾವು; ನಗರದಲ್ಲಿ ಒಟ್ಟು 6 ಪೊಲೀಸರನ್ನು ಬಲಿ ಪಡೆದ ಕೋವಿಡ್

ಬೆಂಗಳೂರಿನ ವಿಧಾನಸೌಧದಲ್ಲಿ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್​ಐ ಇಂದು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೂ ಕೊರೋನಾ 6 ಪೊಲೀಸರನ್ನು ಬಲಿ ಪಡೆದಿದೆ.

news18-kannada
Updated:July 6, 2020, 11:45 AM IST
Bangalore Coronavirus: ಕೊರೋನಾದಿಂದ ಬೆಂಗಳೂರಿನ ಎಎಸ್​ಐ ಸಾವು; ನಗರದಲ್ಲಿ ಒಟ್ಟು 6 ಪೊಲೀಸರನ್ನು ಬಲಿ ಪಡೆದ ಕೋವಿಡ್
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 6): ಕೊರೋನಾ ಸೋಂಕಿನಿಂದ ಬೆಂಗಳೂರಿನಲ್ಲಿ ಆತಂಕ ಹೆಚ್ಚಾಗಿದೆ. ಕರ್ನಾಟಕದ ಕೊರೋನಾ ಹಾಟ್​ಸ್ಪಾಟ್​ ಆಗಿ ಬದಲಾಗಿರುವ ಬೆಂಗಳೂರನ್ನು ಸೀಲ್​ಡೌನ್ ಮಾಡಬೇಕು ಎಂಬ ಒತ್ತಾಯ ರಾಜ್ಯಾದ್ಯಂತ ಕೇಳಿಬರುತ್ತಿದೆ. ಕೊರೋನಾ ಸೋಂಕಿನಿಂದ ಜನರ ರಕ್ಷಣೆಗಾಗಿ ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಮತ್ತೋರ್ವ ಪೊಲೀಸ್ ಅಧಿಕಾರಿ ಕೊರೋನಾಗೆ ಬಲಿಯಾಗಿದ್ದಾರೆ.

ಈ ಮೂಲಕ ಕೊರೋನಾ ಮತ್ತೋರ್ವ ಕೊರೋನಾ ವಾರಿಯರ್​ನನ್ನು ಬಲಿ ಪಡೆದಿದೆ. ಬೆಂಗಳೂರಿನ ಕೊರೋನಾ ಸೋಂಕಿತ ಎಎಸ್​ಐ ಒಬ್ಬರು ಇಂದು ಕೊರೋನಾಗೆ ಬಲಿಯಾಗಿದ್ದಾರೆ. ವಿಧಾನಸೌಧದಲ್ಲಿ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್​ಐಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅವರು ಇಂದು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ವೈರಸ್ ಇದುವರೆಗೂ 6 ಪೊಲೀಸರನ್ನು ಬಲಿ ಪಡೆದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸಮುದಾಯಕ್ಕೆ ಹರಡೇಬಿಟ್ಟಿತು ಕೊರೋನಾ; 9,352 ರೋಗಿಗಳ ಸೋಂಕಿನ ಮೂಲ ಇನ್ನೂ ನಿಗೂಢ!

ಕೊರೋನಾ ಸೋಂಕಿತರಿಂದಾಗಿ ಬೆಂಗಳೂರಿನ ಸುಮಾರು 40ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,925 ಕೊರೋನಾ ಕೇಸ್​ಗಳು ದಾಖಲಾಗಿವೆ. ಇದರಲ್ಲಿ ಬೆಂಗಳೂರಿನ ಸೋಂಕಿತರ ಸಂಖ್ಯೆ 1,235. ಬೆಂಗಳೂರಿನ ವೈದ್ಯರು, ನರ್ಸ್​ಗಳು, ಪೊಲೀಸರು, ಕಾನ್​ಸ್ಟೇಬಲ್​ಗಳು ಸೇರಿದಂತೆ ಎಲ್ಲರಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ ಎನ್ನಲಾಗುತ್ತಿದೆ.
Published by: Sushma Chakre
First published: July 6, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading