Bangalore Coronavirus: 20 ದಿನಗಳ ಸೀಲ್​ಡೌನ್ ಬಳಿಕ ಇಂದು ಮತ್ತೆ ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆ ಓಪನ್

Bengaluru Coronavirus Updates: ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 26 ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು 7 ಜನ ಪೊಲೀಸರು ಅಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆ

ಕಲಾಸಿಪಾಳ್ಯ ಪೊಲೀಸ್ ಠಾಣೆ

  • Share this:
ಬೆಂಗಳೂರು (ಜು. 9): ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ವಿಪರೀತವಾಗಿ ಹೆಚ್ಚಾಗುತ್ತಿದೆ. ಇದರಿಂದಾಗಿ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳನ್ನು ಕೂಡ ಸೀಲ್​ಡೌನ್ ಮಾಡಲಾಗಿದೆ. ಹೀಗೆ 20 ದಿನಗಳ ಕಾಲ ಸೀಲ್​ಡೌನ್ ಆಗಿದ್ದ ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್ ಇಂದು ಓಪನ್ ಆಗಿದೆ.

ಕೊರೊನಾ ಸೋಂಕಿನಿಂದ ಸೀಲ್ ಡೌನ್ ಆಗಿದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆ ಇಂದಿನಿಂದ ಮತ್ತೆ ಕಾರ್ಯ ನಿರ್ವಹಣೆ ಮಾಡಲಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಭೇಟಿ ನೀಡಿ, ಠಾಣೆಯ ಸಿಬ್ಬಂದಿಗೆ ಧೈರ್ಯ ತುಂಬಿ ಹೆಚ್ಚು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 26 ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇಂದು 7 ಜನ ಪೊಲೀಸರು ಅಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಇದನ್ನೂ ಓದಿ: ಹರ್ಬಲ್ ಮೈಸೂರ್ ಪಾಕ್​ನಿಂದ ಕೊರೋನಾ ಗುಣವಾಗುತ್ತೆ ಎಂದ ಸ್ವೀಟ್​ ಅಂಗಡಿ ಬಾಗಿಲಿಗೆ ಬೀಗ!

ಪೊಲೀಸ್ ಠಾಣೆಯಲ್ಲಿ ಎಲ್ಲ ಸಿಬ್ಬಂದಿ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಕಡ್ಡಾಯ ಬಳಕೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದರು. ಅನಗತ್ಯವಾಗಿ ಓಡಾಡುವುದು, ವಸ್ತುಗಳನ್ನ ಮುಟ್ಟುವುದು, ಜನರ ಬಳಿ ಓಡಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮಾಸ್ಕ್, ಶೀಲ್ಡ್ ಹಾಕದೆ ಇದ್ದಲ್ಲಿ ಕಠಿಣ ಕ್ರಮ ವಹಿಸಲಾಗುವುದು. ಕೊರೋನಾ ಪಾಸಿಟಿವ್ ಆದವರು ಗುಣಮುಖರಾಗಿದ್ದಾರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭಾಸ್ಕರ್ ರಾವ್ ಧೈರ್ಯ ತುಂಬಿದ್ದಾರೆ.
Published by:Sushma Chakre
First published: