HOME » NEWS » Coronavirus-latest-news » CORONAVIRUS ARE YOU AGED ABOVE 45 HERE IS ALL YOU NEED TO KNOW BEFORE GETTING VACCINATED FOR COVID 19 SCT STG

Coronavirus Vaccine: ನಿಮಗೆ 45 ವರ್ಷ ದಾಟಿದೆಯಾ?; ಹಾಗಿದ್ದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ!

Coronavirus Vaccine: 45 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಲು ಏಪ್ರಿಲ್ 1ರಿಂದ CoWIN ಆ್ಯಪ್‌ನಲ್ಲಿ ರಿಜಿಸ್ಟ್ರೇಷನ್ ಮತ್ತು ಅಪಾಯಿಂಟ್​ಮೆಂಟ್​ ಬುಕ್ಕಿಂಗ್ ಆರಂಭವಾಗಲಿದೆ. ಅಲ್ಲದೇ ಆನ್​ ಸ್ಪಾಟ್​ ರಿಜಿಸ್ಟ್ರೇಷನ್ ಕೂಡ ಏಪ್ರಿಲ್​ 1ರಿಂದಲೇ ಆರಂಭವಾಗುತ್ತದೆ. 

news18-kannada
Updated:March 24, 2021, 11:40 AM IST
Coronavirus Vaccine: ನಿಮಗೆ 45 ವರ್ಷ ದಾಟಿದೆಯಾ?; ಹಾಗಿದ್ದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ!
ಕೊರೋನಾ ಲಸಿಕೆ.
  • Share this:
ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್​ಗೆ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟವರು ತಕ್ಷಣವೇ COWIN APP ನಲ್ಲಿ ರಿಜಿಸ್ಟರ್‌ ಆಗಿ, ಲಸಿಕೆ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದ್ದಾರೆ. 

ಇನ್ನು, ಕೋವಿನ್ ಆ್ಯಪ್‌ನಲ್ಲಿ 29ನೇ ದಿನದ ನಂತರ ನಿಮ್ಮ ಸೆಕೆಂಡ್​​ ಡೋಸ್​ ನೀವೇ ಶೆಡ್ಯೂಲ್ ಮಾಡಿಕೊಳ್ಳುವಂತೆ ತಿದ್ದುಪಡಿ ಮಾಡಲಾಗಿದೆ. 4ರಿಂದ 8 ವಾರಗಳ ಮಧ್ಯಂತರದಲ್ಲಿ ಸೆಕೆಂಡ್ ಡೋಸ್​​ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಡೋಸ್‌ ಲಸಿಕೆ ಪಡೆದ ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ.

ಮೊದಲ ಡೋಸ್ ಪಡೆದ ದಿನಾಂಕಕ್ಕೆ ಸರಿಯಾಗಿ 6ರಿಂದ 8ನೇ ವಾರದೊಳಗೆ ಎರಡನೇ ಡೋಸ್ ತೆಗೆದುಕೊಳ್ಳುವುದನ್ನು ಲಸಿಕೆ ಪಡೆದವರು ಮರೆಯಬಾರದು. ಯಾವುದೇ ಕಾರಣಕ್ಕೂ ತಡ ಮಾಡದೇ 8 ವಾರದೊಳಗೆ ನಿಮ್ಮ ಎರಡನೇ ಡೋಸ್​ ಹಾಕಿಸಿಕೊಳ್ಳಬೇಕು. ಅದಕ್ಕಿಂತಲೂ ಹೆಚ್ಚಿಗೆ ಮುಂದೂಡಿದರೆ ವ್ಯಾಕ್ಸಿನ್ ನಿಷ್ಪ್ರಯೋಜಕವಾಗಬಹುದು. WWW.COWIN.GOV.INನಲ್ಲಿ ರೀಶೆಡ್ಯೂಲ್ ಮಾಡಿಕೊಳ್ಳಿ ಒಂದು ವೇಳೆ ಎರಡನೇ ಡೋಸ್ ಆಟೋಮ್ಯಾಟಿಕ್​ ಆಗಿ ಶೆಡ್ಯೂಲ್ ಆಗಿದ್ದರೂ ನೀವು www.cowin.gov.in ವೆಬ್​ಸೈಟ್​ಗೆ ಭೇಟಿ ಕೊಟ್ಟು ನಿಮ್ಮ ಎರಡನೇ ಡೋಸ್ ದಿನ ಮತ್ತು ದಿನಾಂಕವನ್ನು ರೀ ಶೆಡ್ಯೂಲ್ ಮಾಡಬಹುದು.

ಇದನ್ನೂ ಓದಿ: Bangalore Coronavirus: ಪುರುಷರೇ ಎಚ್ಚರ!; ಬೆಂಗಳೂರಿನಲ್ಲಿ ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು ಕೊರೋನಾ ಸೋಂಕು

ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಅನ್ನು ಆರಂಭಿಸುತ್ತಿದ್ದು, ಕೋ ಮಾರ್ಬಿಡಿಟೀಸ್ ಇಲ್ಲದಿದ್ದರೂ ಸಹ ಅಂದರೆ ಇನ್ನಿತರ ಕಾಯಿಲೆ ಇರುವ ವ್ಯಕ್ತಿಗಳು ಅಥವಾ ಯಾವುದೇ ಕಾಯಿಲೆ ಇಲ್ಲದಿದ್ದರೂ ಸಹ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.  1977 ಜನವರಿ 1ರ ದಿನಾಂಕಕ್ಕಿಂತಲೂ ಮುಂಚಿತವಾಗಿ ಜನಿಸಿರುವ ವ್ಯಕ್ತಿಗಳೆಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಏಪ್ರಿಲ್ 1ರಿಂದ ರಿಜಿಸ್ಟ್ರೇಷನ್ ಆರಂಭ:

45 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಲು ಏಪ್ರಿಲ್ 1ರಿಂದ CoWIN ಆ್ಯಪ್‌ನಲ್ಲಿ ರಿಜಿಸ್ಟ್ರೇಷನ್ ಮತ್ತು ಅಪಾಯಿಂಟ್​ಮೆಂಟ್​ ಬುಕ್ಕಿಂಗ್ ಆರಂಭವಾಗಲಿದೆ. ಅಲ್ಲದೇ ಆನ್​ ಸ್ಪಾಟ್​ ರಿಜಿಸ್ಟ್ರೇಷನ್ ಕೂಡ ಏಪ್ರಿಲ್​ 1ರಿಂದಲೇ ಆರಂಭವಾಗುತ್ತದೆ.  ಭಾರತದಲ್ಲಿ ಲಸಿಕೆ ಕೊರತೆ ಇಲ್ಲದೇಶದಲ್ಲಿ ಲಸಿಕೆಯ ಕೊರತೆಯುಂಟಾಗಿಲ್ಲ. ಜನರು ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ.ಲಸಿಕೆ ಪಡೆದುಕೊಂಡ ನಂತರ ಪ್ರತಿಯೊಬ್ಬರು ತಪ್ಪದೇ ಡಿಜಿಟಲ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.  ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಶುಲ್ಕದಲ್ಲೇ ಇದು ಕೂಡ ಸೇರಿರುತ್ತದೆ. 30 ನಿಮಿಷಗಳ ಅಬ್ಸರ್​ವೇಷನ್ ಪೀರಿಯಡ್​ ನಂತರ ಮರೆಯದೇ ಸರ್ಟಿಫಿಕೇಟ್ ಕೇಳಿ ಪಡೆದುಕೊಳ್ಳಬೇಕು. ಸರ್ಟಿಫಿಕೇಟ್‌ನ ಹಾರ್ಡ್‌ ಕಾಪಿ, ಡಿಜಿಟಲ್ ಸರ್ಟಿಫಿಕೇಟ್ ಅಥವಾ ಲಿಂಕ್‌ - ಈ ಮೂರರಲ್ಲಿ ಯಾವುದಾದರೂ ಒಂದನ್ನು ಪಡೆದುಕೊಳ್ಳಲೇಬೇಕು.

ಒಂದು ವೇಳೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ನಂತರ ಸರ್ಟಿಫಿಕೇಟ್ ನೀಡಲಿಲ್ಲವೆಂದರೆ, ಲಸಿಕೆ ಪಡೆದವರು 1075 ಟೋಲ್​ ಫ್ರೀ ನಂಬರ್​ ಗೆ ಕರೆ ಮಾಡಿ ದೂರು ದಾಖಲಿಸಬಹುದು.

ದೂರು ದಾಖಲಿಸಲು 1075 ಕ್ಕೆ ಕರೆ ಮಾಡಿಲಸಿಕೆ ಪಡೆಯಲು CoWIN ನಲ್ಲಿ ಆನ್​ಲೈನ್​ ಅಪಾಯಿಂಟ್​ಮೆಂಟ್​ ಪಡೆದಿದ್ದರೆ ಸಾಕು. ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಅಪಾಯಿಟ್ಮೆಂಟ್​ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾವುದಾದರೂ ಆಸ್ಪತ್ರೆಯಲ್ಲಿ ಲಸಿಕೆಗೆ ಸಂಬಂಧಿಸಿದ ಮಾರ್ಗದರ್ಶನಗಳನ್ನು ಅನುಸರಿಸದಿದ್ದರೆ 1075ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.
Published by: Sushma Chakre
First published: March 24, 2021, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories