Coronavirus: ಅಮೆರಿಕಾ ಬಿಟ್ಟರೆ ದಿನವೊಂದಕ್ಕೆ ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ ಆಗಿದ್ದು ಭಾರತದಲ್ಲೇ..!

ದೇಶದಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಸುಮಾರು ಶೇಕಡಾ 50ರಷ್ಟು ಮಹಾರಾಜ್ಯ ಒಂದರಲ್ಲೇ ಕಂಡು ಬಂದಿವೆ. ಉದಾಹರಣೆಗೆ ಭಾನುವಾರ ಇಡೀ ದೇಶದಲ್ಲಿ 1,03,844 ಪ್ರಕರಣಗಳು ಪತ್ತೆ ಆಗಿದ್ದರೆ ಮಹಾರಾಷ್ಟ್ರ ಒಂದರಲ್ಲಿ 57,074 ಪ್ರಕರಣಗಳು ಕಂಡು ಬಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಏ.‌ 5): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದ್ದು, ಈಗ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಂಡುಬರಲು ಆರಂಭಿಸಿವೆ.‌ ಅಮೇರಿಕಾ ಬಿಟ್ಟರೆ ಈ ರೀತಿ ಒಂದು ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವುದು ಭಾರತದಲ್ಲಿ ಮಾತ್ರ. ಆ ಮೂಲಕ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಹರಡುತ್ತಿರುವ ಪೈಕಿ ಭಾರತ ಎರಡನೇ ದೇಶವಾಗಿದೆ.

ಭಾರತವನ್ನು‌ ನಿಜಕ್ಕೂ ಬೆಚ್ಚಿ ಬೀಳಿಸುವ ವಿಷಯ ಏನೆಂದರೆ ಕೊರೋನಾ ಸೋಂಕು ಹರಡುತ್ತಿರುವ ವೇಗ. ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.

ಸಿಡಿ ಯುವತಿಗೂ ನನಗೂ ಸಂಬಂಧವಿಲ್ಲ, ನಾನು‌ ಒಂದು‌ ರೂಪಾಯಿ ಕೂಡಾ ಕೊಟ್ಟಿಲ್ಲ; ಮಾಜಿ ‌ಸಚಿವ ಡಿ.ಸುಧಾಕರ್ ಸ್ಪಷ್ಟನೆ

ಆದರೆ ಈಗ ಎರಡನೇ ಅಲೆಯಲ್ಲಿ ಕೊರೋನಾ ಶುರುವಾಗಿ ಕೇವಲ 52 ದಿನಗಳ ಅಂತರದಲ್ಲೇ ಭಾರತದಲ್ಲಿ 1,03,844 ಪ್ರಕರಣಗಳು ಪತ್ತೆ ಆಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ‌ಇದೇ ಫೆಬ್ರವರಿ 11ರಂದು ಕೇವಲ 11,364 ಪ್ರಕರಣಗಳು ಕಂಡುಬಂದಿದ್ದವು. ಇನ್ನು ಕೊರೋನಾದ ಮೊದಲ ಅಲೆ ಇದ್ದಾಗ 2020ರ ಸೆಪ್ಟೆಂಬರ್ 17ರಿಂದ 28ರವರೆಗೆ 5.5 ಲಕ್ಷ ಪ್ರಕರಣಗಳು ಕಂಡು ಬಂದಿದ್ದವು. ಈಗ ಎರಡನೇ ಅಲೆಯ ವೇಳೆ 2021ರ ಏಪ್ರಿಲ್ 29ರಿಂದ ಮಾರ್ಚ್ಬ 4ರವರೆಗೆ 5,48,625 ಪ್ರಕರಣಗಳು ಪತ್ತೆ ಆಗಿವೆ.

ದೇಶದಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಸುಮಾರು ಶೇಕಡಾ 50ರಷ್ಟು ಮಹಾರಾಜ್ಯ ಒಂದರಲ್ಲೇ ಕಂಡು ಬಂದಿವೆ. ಉದಾಹರಣೆಗೆ ಭಾನುವಾರ ಇಡೀ ದೇಶದಲ್ಲಿ 1,03,844 ಪ್ರಕರಣಗಳು ಪತ್ತೆ ಆಗಿದ್ದರೆ ಮಹಾರಾಷ್ಟ್ರ ಒಂದರಲ್ಲಿ 57,074 ಪ್ರಕರಣಗಳು ಕಂಡು ಬಂದಿವೆ.

ದೇಶದಲ್ಲಿ ಕಳೆದ ಶನಿವಾರ 93,249 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ ಗುಣ ಆಗಿರುವವರು 60,048 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,24,85,509ಕ್ಕೆ ಏರಿಕೆ ಆಗಿದೆ.‌ ಶನಿವಾರ ಒಂದೇ ದಿನ ಕೊರೋನಾಗೆ 513 ಜನರು ಸಾವಿಗೀಡಾಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 1,64,623ಕ್ಕೆ ಏರಿಕೆ ಆಗಿದೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಈವರೆಗೆ ದೇಶಾದ್ಯಂತ ಒಟ್ಟು 7,59,79,651 ಜನರಿಗೆ ಲಸಿಕೆ ಹಾಕಲಾಗಿದೆ. ಏಪ್ರಿಲ್ 1ರಿಂದ 45 ವರ್ಷದ ಮೇಲಿನ ಎಲ್ಲರಿಗೂ ಕೊರೋನಾ ಲಸಿಕೆ ಹಾಕಲಾಗುತ್ತಿದೆ.
Published by:Latha CG
First published: