COVID-19 | ಕೊರೋನಾ ಗೆದ್ದ ನ್ಯೂಜಿಲೆಂಡ್; ಕಿವೀಸ್ ನಾಡಲ್ಲಿ ಈಗ ಶೂನ್ಯ ಕೇಸ್

Zero active Corona cases in New Zealand - ನ್ಯೂಜಿಲೆಂಡ್​ನಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 1,504 ಇದೆ. ಇವರಲ್ಲಿ 22 ಮಂದಿ ಸಾವನ್ನಪ್ಪಿದ್ಧಾರೆ. ಇನ್ನುಳಿದವರೆಲ್ಲರೂ ಗುಣಮುಖರಾಗಿದ್ದಾರೆ.

Vijayasarthy SN | news18-kannada
Updated:June 8, 2020, 5:43 PM IST
COVID-19 | ಕೊರೋನಾ ಗೆದ್ದ ನ್ಯೂಜಿಲೆಂಡ್; ಕಿವೀಸ್ ನಾಡಲ್ಲಿ ಈಗ ಶೂನ್ಯ ಕೇಸ್
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್
  • Share this:
ವೆಲಿಂಗ್ಟನ್(ಜೂನ್ 08): ಕೊರೋನಾ ವೈರಸ್ ಪಿಡುಗನ್ನು ಹತೋಟಿಗೆ ತರುವಲ್ಲಿ ಉತ್ತಮ ಕ್ರಮಗಳನ್ನ ಕೈಗೊಂಡಿದ್ದಕ್ಕೆ ಮೆಚ್ಚುಗೆ ಗಳಿಸಿದ್ದ ನ್ಯೂಜಿಲೆಂಡ್ ದೇಶ ಈಗ ಇನ್ನೊಂದು ಮೈಲಿಗಲ್ಲು ಸಾಧಿಸಿದೆ. ಕಿವೀಡ್ ನಾಡಿನಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಬಂದಿದೆ. ಕೊನೆಯ ಸೋಂಕಿತ ವ್ಯಕ್ತಿ ಗುಣಮುಖನಾಗುವ ಮೂಲಕ ನ್ಯೂಜಿಲೆಂಡ್ ಈಗ ಕೊರೋನಾಮುಕ್ತ ದೇಶವಾಗಿದೆ. ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್ ಅವರು ಕೊರೋನಾ ಸೋಂಕು ಹರಡುವುದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್​ನಲ್ಲಿ ಕಳೆದ 17 ದಿನಗಳಿಂದ ಯಾವ ಹೊಸ ಪ್ರಕರಣಗಳೂ ಬೆಳಕಿಗೆ ಬಂದಿಲ್ಲ. 18 ದಿನದ ಹಿಂದೆ ಸೋಂಕು ಪತ್ತೆಯಾಗಿದ್ದ ವ್ಯಕ್ತಿ ಇದೀಗ ಗುಣಮುಖರಾಗಿದ್ದಾರೆ. ಈಗ ಆ ದೇಶದಲ್ಲಿ ಒಂದೂ ಸಕ್ರಿಯ ಪ್ರಕರಣಗಳಿಲ್ಲ.

ಆದರೆ, ಇಷ್ಟಕ್ಕೆ ಕೊರೋನಾ ನಿರ್ಮೂಲನೆಯಾಯ್ತು ಎನ್ನುವಂತಿಲ್ಲ. ಹಾಗೆಯೇ ಮುಂದೆ ಕೊರೋನಾ ಪ್ರಕರಣ ಬಂದರೆ ಹೋರಾಟದಲ್ಲಿ ಸೋಲಾಯ್ತು ಎನ್ನುವಂತಿಲ್ಲ ಎಂದು ನ್ಯೂಜಿಲೆಂಡ್ ಪ್ರಧಾನಿ ಹೇಳುತ್ತಾರೆ.

ಇದನ್ನೂ ಓದಿ: ಕೆಮ್ಮು, ಜ್ವರದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್; ನಾಳೆ ಕೋವಿಡ್-19 ಪರೀಕ್ಷೆ

“ಇಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಬರುವುದು ನಿಶ್ಚಿತ. ಇದನ್ನು ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಹಾಗೊಂದು ವೇಳೆ ಮತ್ತೆ ಕೊರೋನಾ ಸೋಂಕು ಹರಡಿದಾಕ್ಷಣ ನಾವು ವಿಫಲರಾದೆವು ಎನ್ನುವಂತಿಲ್ಲ. ಈ ವೈರಸ್​ನ ವಾಸ್ತವಿಕ ಸತ್ಯ ಅದು. ಮತ್ತೆ ಸೋಂಕು ಕಂಡುಬಂದರೆ ಅದನ್ನು ಎದುರಿಸಲು ನಾವು ಸಜ್ಜಾಗಿರುವುದು ಮುಖ್ಯ” ಎಂದು ಜಸಿಂಡಾ ಆರ್ಡೆರ್ನ್ ಹೇಳಿದ್ದಾರೆ.

ನ್ಯೂಜಿಲೆಂಡ್​ನಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 1,504 ಇದೆ. ಇವರಲ್ಲಿ 22 ಮಂದಿ ಸಾವನ್ನಪ್ಪಿದ್ಧಾರೆ. ಇನ್ನುಳಿದವರೆಲ್ಲರೂ ಗುಣಮುಖರಾಗಿದ್ದಾರೆ. ಸುಮಾರು 50 ಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ ಹತ್ತಿರ ಹತ್ತಿರ 3 ಲಕ್ಷ ಜನರ ಪರೀಕ್ಷೆ ನಡೆಸಲಾಗಿದೆ. ಕಳೆದ 17 ದಿನಗಳಲ್ಲಿ 40 ಸಾವಿರ ಪರೀಕ್ಷೆಗಳನ್ನ ಮಾಡಲಾಗಿದೆ. ಒಂದೂ ಸೋಂಕು ಕಂಡುಬಂದಿಲ್ಲ.

ನ್ಯೂಜಿಲೆಂಡ್​ನ ಈ ಕೊರೊನಾ ದಿಗ್ವಿಜಯಕ್ಕೆ ಹಲವಾರು ಕ್ರಮಗಳು ಕಾರಣವೆಂದು ಹೇಳುತ್ತಾರೆ. ಇಲ್ಲಿ ಸೋಂಕು ಕಾಣಿಸಿಕೊಂಡಿದ್ದು ತಡವಾಗಿಯೇ. ಅಷ್ಟರಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಈ ವೈರಾಣುವಿನ ಹರಡುವಿಕೆಯ ಗುಣವನ್ನು ಅವಲೋಕಿಸಲು ಸಾಧ್ಯವಾಯಿತು. ನ್ಯೂಜಿಲೆಂಡ್​ನಲ್ಲಿ ಕೊರೋನಾ ಕೇಸ್ ಪತ್ತೆಯಾದ ಕೆಲವೇ ದಿನಗಳಲ್ಲಿ ಅಲ್ಲಿ ಲಾಕ್​ಡೌನ್ ಮಾಡಲಾಯಿತು. ಇದರಿಂದಾಗಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿತೆನ್ನಲಾಗಿದೆ.ಇದನ್ನೂ ಓದಿ: ಹಿರಿಯ ಪಿಐಬಿ ಅಧಿಕಾರಿಗೆ ಕೊರೋನಾ ಸೋಂಕು; ನ್ಯಾಷನಲ್ ಮೀಡಿಯಾ ಸೆಂಟರ್ ಕಟ್ಟಡ ಬಂದ್

ಜಗತ್ತಿನಾದ್ಯಂತ 215 ದೇಶಗಳಲ್ಲಿ ಕೊರೋನಾ ಸೋಂಕು ವ್ಯಾಪಿಸಿರುವುದು ತಿಳಿದುಬಂದಿದೆ. ಅದರಲ್ಲಿ ನ್ಯೂಜಿಲೆಂಡ್ ಸೇರಿದಂತೆ ಸರಿಸುಮಾರು 20 ದೇಶಗಳಲ್ಲಿ ಆ್ಯಕ್ಟಿವ್ ಕೇಸ್​ಗಳು ಸೊನ್ನೆಗೆ ಬಂದಿವೆ. ಆದರೆ ಇವೆಲ್ಲವೂ ಸಣ್ಣಪುಟ್ಟ ದೇಶಗಳೇ ಆಗಿವೆ. ಕೊರೋನಾ ಸೋಂಕು ಮೊದಲು ಅಡಿ ಇಟ್ಟ ಚೀನಾದಲ್ಲಿ ಆ್ಯಕ್ಟಿವ್ ಕೇಸ್​ಗಳು 65ಕ್ಕೆ ಇಳಿದಿವೆ. ಭಾರತದಲ್ಲಿ ಇದು ಒಂದೂಕಾಲು ಲಕ್ಷ ಗಡಿದಾಟಿದೆ.

ವಿಶ್ವಾದ್ಯಂತ ಈವರೆಗೆ ದಾಖಲಾಗಿರುವ ಸೋಂಕು ಪ್ರಮಾಣ 71 ಲಕ್ಷ ಗಡಿ ದಾಟಿದೆ. ಸಾವಿನ ಸಂಖ್ಯೆ 4 ಲಕ್ಷ ದಾಟಿದೆ. ಆ್ಯಕ್ಟಿವ್ ಕೇಸ್​ಗಳು 32 ಲಕ್ಷ ಇವೆ.

First published: June 8, 2020, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading