ಚಿಕ್ಕೋಡಿ(ಏ.13): ದೇಶಾದ್ಯಂತ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಇನ್ನೇನು ಕೊರೊನಾ ಹತೋಟಿಗೆ ಬರುತ್ತೆ ಎನ್ನುವಷ್ಟರಲ್ಲೆ ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಇಡೀ ದೇಶಕ್ಕೆ ಕಂಟಕವಾಗಿದೆ ಪರಿಣಮಿಸಿದೆ. ಕಳೆದ ಒಂದು ವಾರದ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಒಂದೆ ಒಂದು ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿರಲಿಲ್ಲ. ಆದರೆ, ನಿಜಾಮುದ್ದೀನ್ಗೆ ಹೋಗಿ ವಾಪಸ್ ಬಂದವರನ್ನ ತಪಾಸಣೆಗೆ ಒಳಪಡಿಸಲಾಗಿದ್ದಾಗ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ.
ಇನ್ನು ದೆಹಲಿಗೆ ಹೋಗಿದ್ದವರ ಜಾಡು ಹಿಡಿದ ಜಿಲ್ಲಾಡಳಿತ ಕುಡಚಿ ಪಟ್ಟಣದ 12 ಜನ ದೆಹಲಿಗೆ ಹೋಗಿ ಬಂದವರನ್ನ ಗುರುತಿಸಿತ್ತು.12 ಜನರ ಪೈಕಿ ನಾಲ್ವರಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ನಾಲ್ಕು ಜನರು ಒಂದೆ ಕುಟುಂಬವರಾಗಿದ್ದು. ಸದ್ಯ ಇವತ್ತು ಸಹ ಕುಡಚಿ ಪಟ್ಟಣ ಒಂದರಲ್ಲೇ ಮತ್ತೆ ಮೂರು ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಕುಡಚಿಯಲ್ಲಿ ಸದ್ಯ 10 ಪ್ರಕರಣ ಕಾಣಿಸಿಕೊಂಡಿದ್ದು, ಕುಡಚಿ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಇನ್ನು ಕುಡಚಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ದೆಹಲಿಗೆ ಹೋಗಿ ಬಂದಿದ್ದ 12 ಜನರು ಸಹ ಕುಡಚಿ ಪಟ್ಟಣದ ಕೆಲ ಮಸೀದಿಗಳಲ್ಲಿ ನಮಾಜ್ ಮಾಡಿದ್ದಾರೆ. ಅಲ್ಲದೆ ಲಾಕ್ ಡೌನ್ ಆದ ಸಂದರ್ಭದಲ್ಲೂ ಹಲವರನ್ನ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ 12 ಜನರ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದ 46 ಜನರನ್ನ ಪ್ರತ್ಯೇಕವಾಗಿ ಕ್ವಾರಂಟೈನ ಮಾಡಿ ಕುಡಚಿ ಪಟ್ಟಣದವನ್ನ ಸೀಲ್ ಡೌನ್ ಮಾಡಲಾಗಿದೆ.
ಇದನ್ನೂ ಓದಿ: ಲಾಕ್ ಡೌನ್ ನಿಂದ ಬೀದಿ ಪಾಲಾಗುತ್ತಿರುವ ಕಾರ್ಮಿಕರು - ನರೇಗಾ ಯೋಜನೆಯಡಿ ಕೆಲಸ ಕೊಡಲು ಮುಂದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ
ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅಲ್ಲದೆ ಕುಡಚಿ ಪಟ್ಟಣದ ಸುತ್ತಲೂ ಮೂರು ಕಿಲೋಮೀಟರ್ ವ್ಯಾಪ್ತಿಯನ್ನ ಕಂಟೊನ್ಮೇಂಟ ಝೋನ್ ಎಂದು ಘೋಷಣೆ ಮಾಡಿ ಯಾರನ್ನು ಸಹ ಒಳಗೆ ಹೊರಗಡೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
(ವರದಿ : ಲೋಹಿತ್ ಶಿರೋಳ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ