ತುಮಕೂರಿನಲ್ಲಿ 50 ಕುರಿಗಳಿಗೂ ಕೊರೋನಾ ಸೋಂಕು?; ಪರೀಕ್ಷೆಗೆಂದು ಪ್ರಾಣಿಗಳ ಸ್ವಾಬ್ ಸಂಗ್ರಹಿಸಿ ಕ್ವಾರಂಟೈನ್!

ಜಿಲ್ಲಾಡಳಿತ ಕುರಿಗಾಹಿಯ 50 ಕ್ಕೂ‌ ಹೆಚ್ಚು ಕುರಿಗಳ ಸ್ವಾಬ್ ಸಂಗ್ರಹಿಸಲಾಗಿದೆ. ಪಶುಸಂಗೋಪನ ಇಲಾಖೆ ನಿರ್ದೇಶಕ ಡಾ. ನಂದೀಶ್ ಅವರ ಮುಂದಾಳತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆಂದು ಭೋಪಾಲ್​​ನಲ್ಲಿರುವ ಲ್ಯಾಬ್​ಗೆ ಕಳುಹಿಸಲಾಗಿದೆ.

news18-kannada
Updated:July 1, 2020, 7:37 AM IST
ತುಮಕೂರಿನಲ್ಲಿ 50 ಕುರಿಗಳಿಗೂ ಕೊರೋನಾ ಸೋಂಕು?; ಪರೀಕ್ಷೆಗೆಂದು ಪ್ರಾಣಿಗಳ ಸ್ವಾಬ್ ಸಂಗ್ರಹಿಸಿ ಕ್ವಾರಂಟೈನ್!
ಕೊರೋನಾ ಶಂಕಿತ ಕುರಿಗಳು.
  • Share this:
ತುಮಕೂರು: ಕೊರೋನಾ ಮಹಾಮಾರಿ ಇಷ್ಟುದಿನ ಮನುಷ್ಯನ ಜೀವನದಲ್ಲಿ ಮಾತ್ರ ಆಟವಾಡುತ್ತಿತ್ತು. ಆದರೆ, ಈಗ ಪ್ರಾಣಿಗಳ ಜೀವನದಲ್ಲೂ ಕೊರೋನಾ ತನ್ನ ಕಬಂದಬಾಹುವನ್ನು ಚಾಚಿದೆ. ಪರಿಣಾಮ ತುಮಕೂರಿನಲ್ಲಿ 50 ಕುರಿಗಳಿಗೆ ಶಂಕಿತ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಅವುಗಳನ್ನು ಪ್ರತ್ಯೇಕಿಸಲಾಗಿದೆ.

ವಿಶ್ವದಾದ್ಯಂತ ಈವರೆಗೆ ಶಂಕಿತ ವ್ಯಕ್ತಿಗಳನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆದರೆ, ಇದೀಗ ಕುರಿಗಳಿಗೂ ಕೂಡ ಕ್ವಾರಂಟೈನ್ ಮಾಡಿ ಜೊತೆಗೆ ಅವುಗಳ ಸ್ವಾಬ್ ಕೂಡಾ ಪಡೆಯಲಾಗಿದೆ ಎಂಬ ವಿಚಾರ ಹಲವರಲ್ಲಿ ಅಚ್ಚರಿಗೂ ಕಾರಣವಾಗಿದೆ.

ಹೌದು.. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 50 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡದಂತೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಈ  ಕುರಿಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು. ಈಗಾಗಲೇ ಸೋಂಕಿತ ಕುರಿಗಾಹಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈತ ಕಾಯುತ್ತಿದ್ದ ಕುರಿಗಳಲ್ಲಿ ಕೊರೋನಾ ವೈರಸ್ ವಿಭಿನ್ನ ಸ್ವರೂಪದಲ್ಲಿ ಇರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ‌ ಹಿನ್ನಲೆಯಲ್ಲಿ ಇಂದು ಜಿಲ್ಲಾಡಳಿತ ಕುರಿಗಾಹಿಯ 50 ಕ್ಕೂ‌ ಹೆಚ್ಚು ಕುರಿಗಳ ಸ್ವಾಬ್ ಸಂಗ್ರಹಿಸಲಾಗಿದೆ. ಪಶುಸಂಗೋಪನ ಇಲಾಖೆ ನಿರ್ದೇಶಕ ಡಾ. ನಂದೀಶ್ ಅವರ ಮುಂದಾಳತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆಂದು ಭೋಪಾಲ್​​ನಲ್ಲಿರುವ ಲ್ಯಾಬ್​ಗೆ ಕಳುಹಿಸಲಾಗಿದೆ.

ಈ ನಡುವೆ ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಸೂಚಿಸಲಾಗಿದೆ.  ಸಾಮಾನ್ಯವಾಗಿ ಕುರಿಗಳ ಮೂಲಕ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಕೂಡ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರಿಗಳ ಸ್ವ್ಯಾಬ್ ಸ್ಯಾಂಪಲ್​​ಗಳ ವರದಿ ಬಂದ ನಂತರವೇ ಕುರಿಗಳನ್ನು ಮೇಯಲು ಗುಂಪಿನಲ್ಲಿ ಬಿಡಬೇಕೆ ಬೇಡವೇ? ಎಂಬುದನ್ನು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಬಾಯಿ ಬಿಟ್ಟರೆ ಬಣ್ಣಗೇಡು, ಕೈಲಾಗದ ನಾಯಕ ಗೋಲಾಟದಂತಿದೆ ಪ್ರಧಾನಿ ಮೋದಿ ಭಾಷಣ; ಸಿದ್ದರಾಮಯ್ಯ ಕಿಡಿ
ಒಟ್ಟಾರೆ ಇಷ್ಟುದಿನ ಮನುಷ್ಯನ ಪ್ರಾಣವನ್ನಷ್ಟೆ ಹಿಂಡುತ್ತಿದ್ದ ಕೊರೋನಾ ಇದೀಗ ಪ್ರಾಣಿಗಳಲ್ಲೂ ಲಗ್ಗೆಇಟ್ಟು ಅವುಗಳಲ್ಲೂ ಆತಂಕ ಮೂಡಿಸಿರುವುದು ದುರಾದೃಷ್ಟಕರ. ಒಂದುವೇಳೆ ಅವುಗಳಲ್ಲೂ ಪಾಸಿಟಿವ್ ಬಂದದ್ದೇ ಆದರೆ, ಕುರಿಗಳಿಗೂ ಚಿಕಿತ್ಸೆ ಹೇಗೆ ನೀಡುವುದು? ಎಂಬದು ಇದೀಗ ಜಿಲ್ಲಾಡಳಿತದ ಮುಂದೆ ಪ್ರಶ್ನೆಯಾಗಿ ಕಾಡುತ್ತಿದೆ..
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading