ಅಮೆರಿಕದಲ್ಲಿ ಒಂದೇ ದಿನ 16 ಸಾವಿರ ಕೊರೋನಾ ಪ್ರಕರಣ; ವಿಶ್ವಾದ್ಯಂತ 33 ಸಾವಿರ ಸಾವು

Coronavirus In America: ಇಟಲಿಯಲ್ಲಿ ಈವರೆಗೆ 97 ಸಾವಿರ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸತ್ತವರ ಸಂಖ್ಯೆ 11 ಸಾವಿರದ ಗಡಿ ಸಮೀಪಿಸಿದೆ. ಸ್ಪೇನ್​ನಲ್ಲಿ ಕೂಡ ಕೊರೋನಾ ಹಾವಳಿ ಮಿತಿ ಮೀರುತ್ತಿದೆ.

news18-kannada
Updated:March 30, 2020, 9:23 AM IST
ಅಮೆರಿಕದಲ್ಲಿ ಒಂದೇ ದಿನ 16 ಸಾವಿರ ಕೊರೋನಾ ಪ್ರಕರಣ; ವಿಶ್ವಾದ್ಯಂತ 33 ಸಾವಿರ ಸಾವು
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಮಾ.30): ಕೊರೋನಾ ವೈರಸ್​ಗೆ ಇಡೀ ವಿಶ್ವವೇ ಕಂಗಾಲಾಗಿದೆ. ಅಮೆರಿಕದಲ್ಲಿ ನಿನ್ನೆ ಒಂದೇ ದಿನ 16 ಸಾವಿರ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. 

ಅಮೆರಿಕ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುತ್ತದೆ. ಆದಾಗ್ಯೂ ಅವರ ಬಳಿ ಕೊರೋನಾ ನಿಯಂತ್ರಣ ಅಸಾಧ್ಯವಾಗಿದೆ. ಇನ್ನು, ಅಮೇರಿಕ ಗಾತ್ರದಲ್ಲಿ ತುಂಬಾನೇ ದೊಡ್ಡದಿದೆ. ಹೀಗಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಈ ವರೆಗೆ ಅಮೇರಿಕದಲ್ಲಿ ಕೊರೋನಾ ವೈರಸ್​ಗೆ 2497 ಜನರು ಮೃತಪಟ್ಟಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಟ್ರಂಪ್ ಮುಂದಾಗಿದ್ದಾರೆ.

ಇಟಲಿಯಲ್ಲಿ ಈವರೆಗೆ 97 ಸಾವಿರ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸತ್ತವರ ಸಂಖ್ಯೆ 11 ಸಾವಿರದ ಗಡಿ ಸಮೀಪಿಸಿದೆ. ಸ್ಪೇನ್​ನಲ್ಲಿ ಕೂಡ ಕೊರೋನಾ ಹಾವಳಿ ಮಿತಿ ಮೀರುತ್ತಿದೆ. ಈವರೆಗೆ ಸ್ಪೇನ್​ನಲ್ಲಿ 6083 ಜನರು ಅಸುನೀಗಿದ್ದಾರೆ. ಇದು ವಿಶ್ವದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದಲ್ಲಿ 1 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ; 27 ಮಂದಿ ಸಾವು

ದೇಶಾದ್ಯಂತ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,024ಕ್ಕೆ ಮುಟ್ಟಿದೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, 901 ಮಂದಿಯಲ್ಲಿ ಈಗ ಕೊರೋನಾ ಸೋಂಕು ಇರುವುದು (Active cases) ಪತ್ತೆಯಾಗಿದೆ. 27 ಮಂದಿ ಸಾವನ್ನಪ್ಪಿದ್ದಾರೆ. 96 ಮಂದಿ ಸೋಂಕಿನಿಂದ ಮುಕ್ತಗೊಂಡು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ.

ವಿಶ್ವಾದ್ಯಂತ ಕೊರೋನಾ ವೈರಸ್​ ಹರಡಿರುವ ರೀತಿ ತೀವ್ರ ಆತಂಕ ಸೃಷ್ಟಿಸುತ್ತದೆ. ಈವರೆಗೆ ವಿಶ್ವದಲ್ಲಿ 7,22,183 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 34 ಸಾವಿರ ಜನರು ಕೊರೋನಾಗೆ ಬಲಿಯಾಗಿದ್ದಾರೆ. 1.52 ಲಕ್ಷ ಜನರು ಕೊರೋನಾ ವೈರಸ್​ನಿಂದ ಚೇತರಿಕೆ ಕಂಡಿದ್ದಾರೆ.
First published: March 30, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading