Corona warriors: ಪಾಸಿಟಿವ್​ ಬಂದರೂ ಧೃತಿಗೆಡದ ಚಾಮರಾಜನಗರದ ಕೊರೋನಾ ವಾರಿಯರ್ಸ್

ಪ್ರಸ್ತುತ 20 ಮಂದಿ ಕೊರೋನಾ ವಾರಿಯರ್ಸ್ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ವಾರಿಯರ್ಸ್​ ಸಹ ಕರ್ತವ್ಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.


Updated:August 10, 2020, 11:28 AM IST
Corona warriors: ಪಾಸಿಟಿವ್​ ಬಂದರೂ ಧೃತಿಗೆಡದ ಚಾಮರಾಜನಗರದ ಕೊರೋನಾ ವಾರಿಯರ್ಸ್
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಆ.10): ಮಾರಕ ಕೋವಿಡ್​​-19 ವಿರುದ್ಧ ಹೋರಾಡುತ್ತಿರುವ ನೂರಾರು ಮಂದಿ ಕೊರೋನಾ ವಾರಿಯರ್ಸ್​ಗೆ​ ಪಾಸಿಟಿವ್​ ಬಂದರೂ ಧೃತಿಗೆಡದೇ ತಮ್ಮ ಕರ್ತವ್ಯ ಮೆರೆದಿದ್ದಾರೆ. ಚಾಮರಾಜನಗರದಲ್ಲಿ 100ಕ್ಕೂ ಹೆಚ್ಚು ಕೊರೋನಾ ವಾರಿಯರ್ಸ್​ಗೆ ಕೊರೋನಾ ಬಂದಿತ್ತು. ಹೀಗಾಗಿ ಇವರು ಕೊರೋನಾದಿಂದ ಗುಣಮುಖರಾದ ಬಳಿಕ ಯಾವುದೇ ಕಾರಣಕ್ಕೂ ಮತ್ತೆ ಆಸ್ಪತ್ರೆಯತ್ತ ಮುಖ ಮಾಡುವುದೇ ಇಲ್ಲ ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೀಗ, ಕೊರೋನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಕೋವಿಡ್​​-19 ವಾರಿಯರ್ಸ್ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ​


ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಎನ್ನದೇ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ, ಪೊಲೀಸ್, ಚೆಸ್ಕಾಂ, ಕೆಎಸ್​ಆರ್​ಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸದ ಸಂದರ್ಭದಲ್ಲಿ ಸಾರ್ವಜನಿಕವಾಗಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಅಧಿಕಾರಿ, ಸಿಬ್ಬಂದಿಗಿದೆ. ಪ್ರಸ್ತುತ ಎದುರಾಗಿರುವ ಕೋವಿಡ್-19 ಪರಿಸ್ಥಿತಿಯಲ್ಲೂ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆತಿಲ್ಲ. ಎಂದಿನಂತೆ ಸಾರ್ವಜನಿಕರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ  ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೋವಿಡ್ ಪರಿಸ್ಥಿತಿಯನ್ನು ಲೆಕ್ಕಿಸದೇ ವಿವಿಧ ಹಂತಗಳಲ್ಲಿ ಕೆಲಸದಲ್ಲಿ ತೊಡಗಿರುವ ಜಿಲ್ಲೆಯ 109 ಅಧಿಕಾರಿ, ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ ಆರೋಗ್ಯ ಇಲಾಖೆಯ 34 ಮಂದಿ ಸೇರಿದ್ದಾರೆ. ಈ ಪೈಕಿ ಐವರು ವೈದ್ಯರಾಗಿದ್ದು, ಇವರಿಗೂ ಸಹ ಸೋಂಕು ತಗುಲಿತ್ತು. ಪೊಲೀಸ್ ಇಲಾಖೆಯಲ್ಲಿ ನಾಲ್ವರು ಇನ್ಸ್​ಪೆಕ್ಟರ್, ಸಬ್​​ ಇನ್ಸ್​ಪೆಕ್ಟರ್​​ ಸೇರಿದಂತೆ ಇತರೆ 27 ಮಂದಿಗೆ ಕೊರೋನಾ ವಕ್ಕರಿಸಿತ್ತು. ಕೆಎಸ್​ಆರ್​​ಟಿಸಿಯ 24, ವಿದ್ಯುತ್ ಸರಬರಾಜು ನಿಗಮದ 5, ಕಂದಾಯ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಬ್ಯಾಂಕುಗಳ ನೌಕರರು ಸೇರಿ 20 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಈಗಾಗಲೇ 89ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೋಂ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿ ಬಹುತೇಕ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಮರಳಿ ಎಂದಿನಂತೆ ತೊಡಗಿಕೊಂಡಿದ್ದಾರೆ.
ಈ ಮೂಲಕ ಇತರರಿಗೂ ಕೋವಿಡ್-19 ಬಗೆಗಿನ ಅನಗತ್ಯ ಭೀತಿ ದೂರಮಾಡಿ ಆತ್ಮಸ್ಥೈರ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Karnataka SSLC Result 2020: ಇಂದು ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ; ವಿದ್ಯಾರ್ಥಿಗಳ ಮೊಬೈಲ್​ಗೆ ಬರಲಿದೆ ರಿಸಲ್ಟ್

ಪ್ರಸ್ತುತ 20 ಮಂದಿ ಕೊರೋನಾ ವಾರಿಯರ್ಸ್ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ವಾರಿಯರ್ಸ್​ ಸಹ ಕರ್ತವ್ಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಅವರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ.
Published by: Ganesh Nachikethu
First published: August 10, 2020, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading