HOME » NEWS » Coronavirus-latest-news » CORONA WARRIORS WHO CROSSED THREE DISTRICTS AND DELIVERED THE MEDICINE HK

ಮೂರು ತಿಂಗಳ ಮಗುವಿಗೆ ತುರ್ತು ಔಷಧಿ - ಮೂರು ಜಿಲ್ಲೆಗಳ ಗಡಿ ದಾಟಿಸಿ ಔಷಧ ತಲುಪಿಸಿದ ಕೊರೋನಾ ವಾರಿಯರ್ಸ್

ಕೊರೋನಾ ವಾರಿಯರ್ಸ್ ತಂಡ ಇದೀಗ ಹೊನ್ನಾವರದಲ್ಲಿ ಮೂರು ವರ್ಷದ ಮಗುವಿಗೆ ತುರ್ತಾಗಿ ಅವಶ್ಯವಿದ್ದ ಔಷಧಿಯನ್ನು ಮಂಗಳೂರಿನಿಂದ ಸಮಯಕ್ಕೆ ಸರಿಯಾಗಿ ತಲುಪಿಸಿ ಸಾರ್ಥಕತೆ ಮೆರೆದಿದೆ

news18-kannada
Updated:April 23, 2020, 6:16 PM IST
ಮೂರು ತಿಂಗಳ ಮಗುವಿಗೆ ತುರ್ತು ಔಷಧಿ - ಮೂರು ಜಿಲ್ಲೆಗಳ ಗಡಿ ದಾಟಿಸಿ ಔಷಧ ತಲುಪಿಸಿದ ಕೊರೋನಾ ವಾರಿಯರ್ಸ್
ಕೊರೋನಾ ವಾರಿಯರ್ಸ್
  • Share this:
ಕಾರವಾರ(ಏ.23): ಮೂರು ತಿಂಗಳ‌ ಮಗುವಿಗೆ ತುರ್ತಾಗಿ ಅವಶ್ಯವಿದ್ದ ಔಷಧಿಯೊಂದನ್ನು ಕೊರೋನಾ ವಾರಿಯರ್ಸ್ ತಂಡ ಮೂರು ಜಿಲ್ಲೆಗಳ ಗಡಿದಾಟಿಸಿ ಸಮಯಕ್ಕೆ ಸರಿಯಾಗಿ ತಲುಪಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಹೌದು, ಸಂಕಷ್ಟದ ಕಾಲದಲ್ಲಿ ಆಪತ್ಬಾಂಧವ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ನೇತೃದಲ್ಲಿ ಅಸ್ತಿತ್ವಕ್ಕೆ ಬಂದ ಕೊರೋನಾ ವಾರಿಯರ್ಸ್ ತಂಡ ಇದೀಗ ಹೊನ್ನಾವರದಲ್ಲಿ ಮೂರು ವರ್ಷದ ಮಗುವಿಗೆ ತುರ್ತಾಗಿ ಅವಶ್ಯವಿದ್ದ ಔಷಧವನ್ನು ಮಂಗಳೂರಿನಿಂದ ಸಮಯಕ್ಕೆ ಸರಿಯಾಗಿ ತಲುಪಿಸಿ ಸಾರ್ಥಕತೆ ಮೆರೆದಿದೆ.

ಮಂಗಳೂರಿನ ತೊಕ್ಕೊಟ್ಟು ಕಲ್ಲಾಪು ನಿವಾಸಿ ರಾಬಿನ್ ಡಿಸೋಜಾ ಅವರ ಹೆಂಡತಿ ಮತ್ತು ಮಗು ಹೊನ್ನಾವರದಲ್ಲಿದ್ದರು. ಆದರೆ, ಮಗುವಿಗೆ ಅವಶ್ಯವಿದ್ದ ಔಷಧ ತೊಕ್ಕೊಟ್ಟು ಕಲ್ಲಾಪುವಿನಲ್ಲಿತ್ತು. ಲಾಕ್ ಡೌನ್ ಇರುವ ಕಾರಣ ಅದನ್ನು ತಲುಪಿಸಲು ಸಾಧ್ಯವಾಗದೆ ರಾಬಿನ್ ಚಡಪಡಿಸುತ್ತಿದ್ದರು. ಕೊನೆಗೆ ಬೆಂಗಳೂರಿನ ಕೊರೋನಾ ವಾರಿಯರ್ಸ್ ತಂಡದ ಕಂಟ್ರೋಲ್ ರೂಮ್ ಕರೆ ಮಾಡಿದ್ದರು. ಸಮಸ್ಯೆ ಹೇಳಿ ತಕ್ಷಣ ಮಂಗಳೂರಿನಿಂದ ಹೊನ್ನಾವರಕ್ಕೆ ಔಷಧಿಯನ್ನು ತಲುಪಿಸಲು ನೆರವಾಗುವಂತೆ ಮನವಿ ಮಾಡಿದ್ದರು.

ಅದರಂತೆ ಮಂಗಳೂರು, ಉಡುಪಿ ಜಿಲ್ಲೆಯ ಕೊರೊನಾ ವಾರಿಯರ್ಸ್ ಗಳಿಗೆ ಅಲರ್ಟ್ ಮಾಡಿ ರಾಬಿನ್ ನಿಂದ ಔಷಧಿ ಪಡೆದು ಉಡುಪಿ ತಲುಪಿಸಲಾಗಿತ್ತು. ಆದರೆ ಕೊರೊನಾ ವಾರಿಯರ್ಸ್ ಗೆ ಉಡುಪಿ ಶಿರೂರು ಚೆಕ್ ಪೋಸ್ಟ್ ಬಳಿ ತಡೆದ ಪೊಲೀಸರು ಉತ್ತರಕನ್ನಡಕ್ಕೆ ತೆರಳಿದರೆ ಮತ್ತೆ ಬರದಂತೆ ಎಚ್ಚರಿಸಿದ್ದರು. ಇದರಿಂದ ಚಿಂತಿತರಾದ ಕೊರೋನಾ ವಾರಿಯರ್ಸ್ ಹಲವರನ್ನು ಸಂಪರ್ಕಿಸಿ ಕೊನೆಗೆ ಹೊನ್ನಾವರದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು. ಅವರ ಸೂಚನೆಯಂತೆ ಪೊಲೀಸರ ಬಳಿ ನೀಡಿ ವಾಪಸ್ ತೆರಳಿದ್ದರು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಹೊನ್ನಾವರದಲ್ಲಿರುವ ಮಗುವಿನ ತಾಯಿ ಬಳಿ ತಲುಪಿಸಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್ ನಿಂದ ಅದ್ಧೂರಿ ಮದುವೆಗೆ ಬ್ರೇಕ್ - ಸರಳ ವಿವಾಹವಾಗಿ ಮಾದರಿಯಾದ ಅಂತಾರಾಷ್ಟ್ರೀಯ ಕುಸ್ತಿಪಟು

ಒಟ್ಟಿನಲ್ಲಿ ಕೊರೋನಾ ವಾರಿಯರ್ಸ್ ಕೊಂಡಿಯಿಂದಾಗಿ ಮಗುವಿಗೆ ಅವಶ್ಯವಿದ್ದ ಔಷಧಿಯನ್ನು ತಲುಪಿದ್ದು, ಕೊರೋನಾ ವಾರಿಯರ್ಸ್ ಗೆ ಇದೀಗ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.

( ವರದಿ : ದರ್ಶನ್​​ ನಾಯ್ಕ)
First published: April 23, 2020, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories