HOME » NEWS » Coronavirus-latest-news » CORONA WARRIORS PROTESTED AGAINST AT HEALTH AND FAMILY WELFARE DEPARTMENT OFFICE IN YADGIRI GNR

‘ನೌಕರಿ ಖಾಯಂಗೊಳಿಸಿ‘ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಮುಂದೆ ಕೊರೋನಾ ವಾರಿಯರ್ಸ್​ ಧರಣಿ

ನಗರದ ಸಪ್ನಾ ಮೈದಾನದ ಸಮೀಪವಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮುಂಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಣೆ ಮಾಡುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇಂದು ಕೆಲಸ ಬಹಿಷ್ಕಾರ ಮಾಡಿ ಧರಣಿ ಕೂತಿದ್ದರು.

news18-kannada
Updated:July 28, 2020, 4:27 PM IST
‘ನೌಕರಿ ಖಾಯಂಗೊಳಿಸಿ‘ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಮುಂದೆ ಕೊರೋನಾ ವಾರಿಯರ್ಸ್​ ಧರಣಿ
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ(ಜು.28): ಕೋವಿಡ್-19 ಸಂಕಷ್ಟದ ಸಂದರ್ಭದಲ್ಲೂ ಕಡಿಮೆ ವೇತನಕ್ಕೆ ಆರೋಗ್ಯ ಸಹಾಯಕಿಯರು ಹಗಲಿರುಳು ದುಡಿಯುತ್ತಿದ್ಧಾರೆ. ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಕೊರೋನಾ ವಾರಿಯರ್ಸ್​ ತಮ್ಮ ನೌಕರಿ ಖಾಯಂಗೊಳಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಧರಣಿ ನಡೆಸಿದರು.

ನಗರದ ಸಪ್ನಾ ಮೈದಾನದ ಸಮೀಪವಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಮುಂಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಣೆ ಮಾಡುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಇಂದು ಕೆಲಸ ಬಹಿಷ್ಕಾರ ಮಾಡಿ ಧರಣಿ ಕೂತಿದ್ದರು.

ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನೇದಿನೇ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕಂಟೈನ್ಮೆಂಟ್​ ಜೋನ್​​, ಬಫರ್ ಜೋನ್ ವಲಯದಲ್ಲಿ ಕೂಡ ಆರೋಗ್ಯ ಸಹಾಯಕಿಯರು ಕೋವಿಡ್-19 ಕರ್ತವ್ಯ ಜೊತೆ ಇನ್ನಿತರ ಆರೋಗ್ಯ ಇಲಾಖೆಯ ಲಸಿಕಾ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಒತ್ತಡದ ನಡುವೆ ಈಗ ಕರ್ತವ್ಯ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 35 ಜನ ಕಿರಿಯ ಆರೋಗ್ಯ ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಕೋವಿಡ್ ಕರ್ತವ್ಯದಲ್ಲಿ ಹಗಲಿರುಳು ತೊಡಗಿದ್ದಾರೆ. ಸಮಾನ ಕೆಲಸಕ್ಕೆ ಸರಕಾರ ಸಮಾನ ವೇತನ ಪಾವತಿ ಮಾಡುತ್ತಿಲ್ಲ. ಕೇವಲ 10 ಸಾವಿರ ರೂ ವೇತನ ಪಾವತಿ ಮಾಡುತ್ತಿದ್ದು, ಅದು ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ.

ಇದನ್ನೂ ಓದಿ: Central Cabinet Meeting: ಅನ್​ಲಾಕ್​​ -3.0: ನಾಳೆ ಕೇಂದ್ರ ಸಚಿವ ಸಂಪುಟ ಮಹತ್ವದ ಸಭೆ

ಈ ಬಗ್ಗೆ ನ್ಯೂಸ್-18 ಕನ್ನಡಕ್ಕೆ ಪ್ರತಿಭಟನೆ ನಿರತ ಆರೋಗ್ಯ ಸಹಾಯಕಿ ಸುಚಿತ್ರಾ ಮಾತನಾಡಿ, ನಾವು ಕೋವಿಡ್ ಕರ್ತವ್ಯ ಜೊತೆ ಸರ್ಕಾರದ ಎಲ್ಲಾ ಲಸಿಕಾ ಕಾರ್ಯಕ್ರಮ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಕಡಿಮೆ ವೇತನ ನೀಡುತ್ತಿದೆ. ಇದರಿಂದ ಕುಟುಂಬ ನಡೆಸುವದು ಕಷ್ಟವಾಗಿದೆ. ಹೀಗಾಗಿ ಸರ್ಕಾರ ನೌಕರಿ ಖಾಯಂ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Published by: Ganesh Nachikethu
First published: July 28, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading