ಆಕೆ ಗರ್ಭಿಣಿ, ರಮ್ಜಾನ್ ಉಪವಾಸದಲ್ಲಿದ್ದಾರೆ, ಆದರೂ ಕೋವಿಡ್ ರೋಗಿಗಳ ಸೇವೆ ನಿಲ್ಲಿಸಿಲ್ಲ: ಗುಜರಾತ್​ನ ಈ ನರ್ಸ್ ನಿಜವಾದ Corona Warrior

ರೋಜಾ ಉಪವಾಸ ಮಾಡುತ್ತಲೇ, ಗುಜರಾತ್‌ನ ಸೂರತ್‌ನ ಕೋವಿಡ್‌ ಆರೈಕೆ ಕೇಂದ್ರವೊಂದರಲ್ಲಿ ರೋಗಿಗಳಿಗೆ ದಣಿವೆಯಿಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನ ಎಂಟರಿಂದ ಹತ್ತು ಗಂಟೆಗಳ ಕಾಲ, ಮಿಸ್ತ್ರಿ ಆಲ್ಥಾನ್ ಸಮುದಾಯ ಭವನದಲ್ಲಿ ಅಟಲ್ ಕೋವಿಡ್‌ - 19 ಕೇಂದ್ರದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಾರೆ.

ಕೃಪೆ: ANI

ಕೃಪೆ: ANI

  • Share this:
Corona Effect: ಕೋವಿಡ್‌ ಎರಡನೇ ಅಲೆಗೆ ದೇಶ ತತ್ತರಿಸಿದ್ದು, ಕೊರೊನಾ ವಾರಿಯರ್ಸ್‌ಗಳಂತೂ ತಮ್ಮ ಪ್ರಾಣ ಪಣಕ್ಕಿಟ್ಟು ರೋಗಿಗಳ ಜೀವ ಕಾಪಾಡುತ್ತಿದ್ದಾರೆ. ಈ ನಡುವೆ ಗುಜರಾತ್‌ನಲ್ಲಿ ನರ್ಸ್‌ ಒಬ್ಬರು ಗರ್ಭಿಣಿಯಾಗಿದ್ದರೂ ರೋಜಾ ಮಾಡುತ್ತಿದ್ದಾರೆ. ಆದರೂ, ನರ್ಸ್‌ ಆಗಿರುವ ಅವರು ಕೋವಿಡ್‌ ಕರ್ತವ್ಯವನ್ನು ಮುಂದುವರಿಸಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಕ್ಕಾಗಿ ಈ ದಾದಿ ಆನ್‌ಲೈನ್‌ನಲ್ಲಿ ನೆಟ್ಟಿಗರ ಹೃದಯ ಗೆದ್ದಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತವು ಮತ್ತೊಂದು ಜಾಗತಿಕ ದಾಖಲೆಯನ್ನು 349,691 ಹೊಸ ದೈನಂದಿನ ಕೋವಿಡ್ -19 ಸೋಂಕುಗಳೊಂದಿಗೆ ವರದಿ ಮಾಡಿದೆ. ಒಂದೇ ದಿನ 2,767 ಸಾವುನೋವುಗಳನ್ನು ದಾಖಲಿಸಿದೆ. ಭಾರತದ ಪರಿಸ್ಥಿತಿ ಕಠೋರವಾಗಿ ಮುಂದುವರಿದರೆ, ಬಿಕ್ಕಟ್ಟನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡಲು ಭರವಸೆಯ ಕಥೆಗಳು ಗೂಚರಿಸುತ್ತಿವೆ. ನ್ಯಾನ್ಸಿ ಆಯೆಜಾ ಮಿಸ್ತ್ರಿ ಗರ್ಭಿಣಿ ಮಾತ್ರವಲ್ಲ, ಪವಿತ್ರ ರಂಜಾನ್ ತಿಂಗಳು ಉಪವಾಸ ಮಾಡುತ್ತಿದ್ದಾರೆ.

ರೋಜಾ ಉಪವಾಸ ಮಾಡುತ್ತಲೇ, ಗುಜರಾತ್‌ನ ಸೂರತ್‌ನ ಕೋವಿಡ್‌ ಆರೈಕೆ ಕೇಂದ್ರವೊಂದರಲ್ಲಿ ರೋಗಿಗಳಿಗೆ ದಣಿವೆಯಿಲ್ಲದೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನ ಎಂಟರಿಂದ ಹತ್ತು ಗಂಟೆಗಳ ಕಾಲ, ಮಿಸ್ತ್ರಿ ಆಲ್ಥಾನ್ ಸಮುದಾಯ ಭವನದಲ್ಲಿ ಅಟಲ್ ಕೋವಿಡ್‌ - 19 ಕೇಂದ್ರದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕಳೆದ ವರ್ಷವೂ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಕೆಲಸ ಮಾಡಿದ್ದರು. ಆದರೆ ಈ ವರ್ಷ, ಅವರು ಗರ್ಭಿಣಿಯಾಗಿದ್ದಾರೆ. ಆದರೂ, ತಮ್ಮ ಕರ್ತವ್ಯ ಮಾಡುವುದನ್ನು ಅವರು ನಿಲ್ಲಿಸಿಲ್ಲ.

“ನಾನು ದಾದಿಯಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಜನರಿಗೆ ಸೇವೆ ಮಾಡುವುದನ್ನು ನಾನು ಪ್ರಾರ್ಥನೆ ಎಂದು ಪರಿಗಣಿಸುತ್ತೇನೆ" ಎಂದು ಎಎನ್‌ಐ ಜೊತೆ ಮಾತನಾಡಿದ ನ್ಯಾನ್ಸಿ ಆಯೆಜಾ ಮಿಸ್ತ್ರಿ ಹೇಳಿದ್ದಾರೆ.

ಇತ್ತೀಚೆಗೆ, 5 ತಿಂಗಳ ಗರ್ಭಿಣಿ ಕೈಯಲ್ಲಿ ಲಾಠಿ ಹಿಡಿದು ರಸ್ತೆಯಲ್ಲಿ ಜನರನ್ನು ನಿಯಂತ್ರಿಸುತ್ತಾ ನಿಂತಿರುವ ವೈರಲ್ ಚಿತ್ರಗಳು ಗಮನ ಸೆಳೆದಿದ್ದವು. ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ವಾಹನ ಸವಾರರಿಗೆ ಮನೆಯಲ್ಲೇ ಇರಬೇಕೆಂದು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನು ಗಳಿಸಿತು.

ಇದನ್ನೂ ಓದಿ: https://kannada.news18.com/news/explained/explained-covishield-and-covaxin-which-is-better-what-are-the-side-effects-and-why-sktv-556325.htmlದಾಂತೇವಾಡಾದ ಡಿಎಸ್‌ಪಿ ಶಿಲ್ಪಾ ಸಾಹು ಎಂಬ ಮಹಿಳೆ ವಿಶೇಷ ನಕ್ಸಲ್ ಪಡೆಗಳ ವಿರೋಧಿ ಪಡೆ ‘ದಾಂತೇಶ್ವರಿ ಫೈಟರ್ಸ್’ನ ನಾಯಕಿ. ಸಾಹು ಅವರು ಗರ್ಭಧರಿಸಿದ ನಂತರ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದ ವಿರಾಮ ಪಡೆದರು. ಆದರೂ, ಈಗ ಕೊರೊನಾ ಯೋಧರಾಗಿ ಹೋರಾಡಲು ಹೊರಟಿದ್ದಾರೆ.

“ನಾನು ಇಲಾಖೆಯಲ್ಲಿದ್ದೇನೆ. ಆದರೆ ಮಗು ಕಾರ್ಯಪಡೆಯಲ್ಲಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು, ನಾನು ಮಾಸ್ಕ್‌ ಧರಿಸುತ್ತೇನೆ ಮತ್ತು ಇತರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ದೂರದಿಂದಲೇ ಜನರಿಗೆ ಸೂಚನೆ ನೀಡುತ್ತೇನೆ. ಅದಕ್ಕಾಗಿಯೇ ನಾನು ಲಾಠಿಯನ್ನು ಸಹ ಇಟ್ಟುಕೊಂಡು ಜನರನ್ನು ದೂರವಿರಿಸಲು ಇದನ್ನು ಬಳಸುತ್ತೇನೆ" ಎಂದು ಅವರು ನ್ಯೂಸ್ 18 ಗೆ ತಿಳಿಸಿದ್ದರು.

ಹೆಚ್ಚುವರಿ ಸಾರಿಗೆ ಕಮಿಷನರ್ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್‌ ಮಾಡಿಕೊಂಡ ನಂತರ ಶಿಲ್ಪಾ ಅವರ ಫೋಟೋಗಳು ವೈರಲ್ ಆಗಿವೆ ಮತ್ತು ಬಳಕೆದಾರರು ಅವುಗಳ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು.
Published by:Soumya KN
First published: