ಅನಗತ್ಯ ಸುತ್ತಾಟಕ್ಕೂ ಬಳಕೆಯಾಗುತ್ತಿದೆ ಪಾಸ್?; ಪೊಲೀಸರಿಗೆ ಆರಂಭವಾಯ್ತು ಹೊಸ ತಲೆನೋವು

Lockdown Live News: ಡಿಸಿಪಿ ಕಚೇರಿಗೆ ತೆರಳಿ ಯಾವ ಉದ್ದೇಶಕ್ಕೆ ಪಾಸ್​ ಬೇಕು ಎಂದು ಹೇಳಿದರೆ ನಿಮಗೆ ಪಾಸ್​ ನೀಡುತ್ತಾರೆ. ಆದರೆ, ಅನೇಕರು ಅನಗತ್ಯವಾಗಿ ಪಾಸ್​ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ವಾಹನ ಓಡಾಟ ಕೂಡ ಹೆಚ್ಚಾಗಿದೆ.

news18-kannada
Updated:March 30, 2020, 9:30 AM IST
ಅನಗತ್ಯ ಸುತ್ತಾಟಕ್ಕೂ ಬಳಕೆಯಾಗುತ್ತಿದೆ ಪಾಸ್?; ಪೊಲೀಸರಿಗೆ ಆರಂಭವಾಯ್ತು ಹೊಸ ತಲೆನೋವು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾ.30): ಕೊರೋನಾ ವೈರಸ್​ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್​ಡೌನ್​ ಆದೇಶ ಹೊರಡಿಸಿದ್ದಾರೆ. ಈ ಆದೇಶ ಏಪ್ರಿಲ್​ 14ರವರೆಗೆ ಮುಂದುವರಿಯಲಿದೆ. ಆಸ್ಪತ್ರೆಗೆ ತೆರಳುವವರಿಗೆ, ಅಗತ್ಯವಸ್ತುಗಳ ಪೂರೈಕೆ ಮಾಡುವವರಿಗೆ ಸಹಕಾರಿಯಾಗಲಿ ಎಂದು ಪಾಸ್​ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅನೇಕರು ಅನಗತ್ಯ ಸುತ್ತಾಟಕ್ಕೂ ಪಾಸ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಹೌದು, ಬೆಂಗಳೂರಿನಲ್ಲಿ ಪಾಸ್​ ದುರ್ಬಳಕೆ ಆಗುತ್ತಿರುವ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಜನರ ಅನುಕೂಲಕ್ಕಾಗಿ ಪಾಸ್​ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ ಕಚೇರಿಗೆ ತೆರಳಿ ನಿಮ್ಮ ಓಡಾಟದ ಉದ್ದೇಶ ಹೇಳಿದರೆ ಪಾಸ್​ ನೀಡುತ್ತಾರೆ. ಆದರೆ, ಅನೇಕರು ಅನಗತ್ಯವಾಗಿ ಪಾಸ್​ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ನಗರದಲ್ಲಿ ವಾಹನ ಓಡಾಟ ಕೂಡ ಹೆಚ್ಚಾಗಿದೆ.

ಅನೇಕ ಸಂಸ್ಥೆಗಳು ತಮ್ಮ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ಆಯ್ಕೆ ನೀಡಿವೆ. ಇಂಥ ಸಂಸ್ಥೆಗಳು ಕೂಡ ಉದ್ಯೋಗಿಗಳಿಗಾಗಿ 100-150 ಪಾಸ್​ಗಳನ್ನು ಪಡೆದುಕೊಳ್ಳುತ್ತಿವೆ ಎನ್ನಲಾಗಿದೆ. “ಯಾವುದಾದರೂ ವಾಹನ ತಡೆದರೆ ನಮಗೆ ಆಸ್ಪತ್ರೆಗೆ ಹೋಗುವುದಿದೆ ಎಂದು ಪಾ​ಸ್​ ತೋರಿಸುತ್ತಾರೆ. ಅವರು ಪುಡಾರಿಗಳು ಎಂದು ಗೊತ್ತಾಗುತ್ತದೆ. ಆದರೂ ನಾವು ಏನು ಮಾಡದ ಸ್ಥಿತಿಯಲ್ಲಿದ್ದೇವೆ. ಪಾಸ್​ ತೋರಿದರೆ ಅನಿವಾರ್ಯವಾಗಿ ಬಿಡಲೇಬೇಖು,” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೆಸರು ಹೇಳಲಿಚ್ಛಿಸದ ಪೊಲೀಸರೊಬ್ಬರು.

ಇದನ್ನೂ ಓದಿ: ಅಮೆರಿಕದಲ್ಲಿ ಒಂದೇ ದಿನ 16 ಸಾವಿರ ಕೊರೋನಾ ಪ್ರಕರಣ; ವಿಶ್ವಾದ್ಯಂತ 33 ಸಾವಿರ ಸಾವು

ಪಾಸ್​​ಗಳಿಂದಲೇ ಲಾಕ್ ಡೌನ್ ಫೇಲ್ಯೂರ್​ನತ್ತ ಸಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಎಲ್ಲರಿಗೂ ಪಾಸ್ ಹಂಚುತ್ತಿರುವುದರಿಂದ ಲಾಕ್​ಡೌನ್ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ಹೀಗಾಗಿ ಈ ಬಗ್ಗೆ ಅಧಿಕಾರಿಗಳು ಗಮನಹರಿಸುವ ಅಗತ್ಯವಿದೆ.
First published: March 30, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading