ಗೇಮ್ ಆಫ್ ಥ್ರೋನ್ಸ್ ನಟನಿಗೂ ಅಂಟಿದ ಕೊರೋನಾ ವೈರಸ್; ಆಸ್ಪತ್ರೆಯಲ್ಲಿ ಚಿಕಿತ್ಸೆ

kristofer Hivju: ಕ್ರಿಸ್ಟೋಫರ್ ಗೇಮ್​ ಆಫ್​ ಥ್ರೋನ್ಸ್​ನಲ್ಲಿ ಟಾರ್ಮಂಡ್ ಜೈಂಟ್ಸ್​ಬೇನ್ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಇವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಈಗ ಅವರು ತಮಗೆ ಕೊರೋನಾ ವೈರಸ್​ ಇರುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಕ್ರಿಸ್ಟೋಫರ್​ ಹಿವ್ಜು

ಕ್ರಿಸ್ಟೋಫರ್​ ಹಿವ್ಜು

 • Share this:
  ಹೆಚ್​ಬಿಒನಲ್ಲಿ ಪ್ರಸಾರವಾಗುತ್ತಿದ್ದ ‘ಗೇಮ್​ ಆಫ್​ ಥ್ರೋನ್ಸ್’​ ಸೀರಿಸ್​ ಕಳೆದ ವರ್ಷ ಪೂರ್ಣಗೊಂಡಿತ್ತು. ಈ ಸೀರೀಸ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕ್ರಿಸ್ಟೋಫರ್​ ಹಿವ್ಜು ಕೂಡ ನೋವಲ್​ ಕೊರೋನಾ ವೈರಸ್​ನ ಸಂತ್ರಸ್ತರಾಗಿದ್ದಾರೆ. ಇವರಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾಗಿದೆ.

  ಕ್ರಿಸ್ಟೋಫರ್ ಗೇಮ್​ ಆಫ್​ ಥ್ರೋನ್ಸ್​ನಲ್ಲಿ ಟಾರ್ಮಂಡ್ ಜೈಂಟ್ಸ್​ಬೇನ್ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಇವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಈಗ ಅವರು ತಮಗೆ ಕೊರೋನಾ ವೈರಸ್​ ಇರುವ ವಿಚಾರವನ್ನು ಖಚಿತಪಡಿಸಿದ್ದಾರೆ.

  ನಾರ್​ವೇನಲ್ಲಿರುವುದಾಗಿ ಹೇಳಿಕೊಂಡಿರುವ ಅವರು, “ನಮ್ಮ ಕುಟುಂಬದಲ್ಲಿ ಎಲ್ಲರೂ ಆರೋಗ್ಯಯುತವಾಗಿದ್ದಾರೆ. ನನಗೆ ಮಾತ್ರ ಸ್ವಲ್ಪ ನೆಗಡಿ ಇದೆ. ಕೊರೋನಾ ವೈರಸ್​ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಖಚಿತವಾಗಿದೆ. ಈ ವೈರಸ್​ ಬಗ್ಗೆ ಎಲ್ಲರೂ ಜಾಗರೂಕರಾಗಿರಿ. ಈ ವೈರಸ್​ ವಿರುದ್ಧ ನಾವು ಹೋರಾಡಬೇಕಿದೆ,” ಎಂದು ಹೇಳಿದ್ದಾರೆ.

  ಇನ್ನು, ಎರಡು ಬಾರಿ ಆಸ್ಕರ್​ ಪ್ರಶಸ್ತಿ ಮುಡಿಗೇರಿಸಿಕೊಂಡ ಟಾಮ್​ ಹ್ಯಾಂಕ್ಸ್​ಗೂ ಕೊರೋನಾ ತಗುಲಿರುವುದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಟಾಮ್​ ಇತ್ತೀಚೆಗೆ ಹೆಂಡತಿ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಈ ವೇಳೆ ಇಬ್ಬರಿಗೂ ಸುಸ್ತಾದಂತೆ ಭಾಸವಾಗಿತ್ತು. ನೆಗಡಿ ಜ್ವರ ಕೂಡ ಕಾಣಿಸಿಕೊಂಡಿತ್ತು. ನಂತರ ಪರೀಕ್ಷೆಗೆ ಒಳಪಟ್ಟಾಗ ಇಬ್ಬರಿಗೂ ಕೊರೋನಾ ಸೋಂಕು ಇರುವುದು ಖಚಿತವಾಗಿತ್ತು.

  ಇದನ್ನೂ ಓದಿ: ಆಸ್ಕರ್​ ಮುಡಿಗೇರಿಸಿಕೊಂಡಿದ್ದ ಹಾಲಿವುಡ್​ ನಟ ಟಾಮ್ ಹ್ಯಾಂಕ್ಸ್​ಗೂ ಅಂಟಿದ ಕೊರೋನಾ!
  First published: