ಕೊರೋನಾ ಭೀತಿ: ಬೆಂಗಳೂರಿಗೆ ಬಿಗ್​ ರಿಲೀಫ್​, ರಾಜೀವ್​ ಗಾಂಧಿ ಆಸ್ಪತ್ರೆ ದಾಖಲಾಗಿದ್ದವರಿಗಿಲ್ಲ ಸೋಂಕು

ಶಂಕಿತರನ್ನು ಪ್ರತ್ಯೇಕವಾಗಿ ಸುದೀರ್ಘ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರಲ್ಲಿ ಯಾವುದೇ ರೋಗದ ಸೋಂಕು ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದ ಬೆಂಗಳೂರಿಗರಿಗೆ ನೆಮ್ಮದಿ ಸಿಕ್ಕಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮಾ.05): ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ಸೋಂಕು ಭಾರತೀಯರ ನಿದ್ದೆಗೆಡಿಸಿದೆ. ಇದುವರೆಗೂ ದೇಶದಲ್ಲಿ 30 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಸೋಂಕು ದೃಢಪಟ್ಟಿದ್ದ ತೆಲಂಗಾಣ ಟೆಕ್ಕಿ ಬೆಂಗಳೂರಿನಲ್ಲಿದ್ದು ಹೋಗಿದ್ದ ಹಿನ್ನೆಲೆ ರಾಜ್ಯದಲ್ಲಿ ಈ ಬಗ್ಗೆ ಕಟ್ಟೆಚ್ಚರವಹಿಸಲಾಗಿದೆ. 

ಕೊರೋನಾ ಸೋಂಕು ಶಂಕೆ ಹಿನ್ನೆಲೆ ರಾಜೀವ್​ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಐವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅವರಿಗೆ ಯಾವುದೇ ಸೊಂಕು ಇಲ್ಲ ಎಂಬ ಕುರಿತು ವರದಿಯಾಗಿದೆ. ಈ ಹಿನ್ನೆಲೆ ವಿಶೇಷ ವಾರ್ಡ್​​ನಿಂದ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಈ ಕುರಿತು ಮಾತನಾಡಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ಶಂಕಿತರನ್ನು ಪ್ರತ್ಯೇಕವಾಗಿ ಸುದೀರ್ಘ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರಲ್ಲಿ ಯಾವುದೇ ರೋಗದ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಇದರಲ್ಲಿ ಇಬ್ಬರು ಇತ್ತೀಚೆಗಷ್ಟೇ ಸೌದಿ ಅರೇಬಿಯಾ ಹಾಗೂ ಜಪಾನ್​ನಿಂದ ರಾಜ್ಯಕ್ಕೆ ಮರಳಿದ್ದರು.

ಇನ್ನು ನಿನ್ನೆ ಒಂದೇ ದಿನಕ್ಕೆ ಸುಮಾರು  153 ಜನರ ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಈ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾ ವೈರಸ್ ತಡೆಯಲು ಫೇಸ್ ಮಾಸ್ಕ್ ಬಳಸಿದರೆ ಸೋಂಕು ಹೆಚ್ಚುವ ಸಾಧ್ಯತೆ: ವರದಿ

ತೆಲಂಗಾಣ ಮತ್ತು ದೆಹಲಿ ಸೋಂಕಿತರನ್ನು ನಿರಂತರ ತಪಾಣೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಟಲಿಯ 14 ಪ್ರವಾಸಿಗರು ಸೇರಿದಂತೆ ಆರು ಭಾರತೀಯರಲ್ಲಿ ಈ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಇಂದು ಕೂಡ ಪೇಟಿಎಂ ಉದ್ಯೋಗಿಯೊಬ್ಬರು ಈ ಸೋಂಕಿಗೆ ತುತ್ತಾಗಿದ್ದು, ಈ ಸಂಖ್ಯೆ 30ಕ್ಕೆ ಏರಿದೆ.
First published: