ದುಬೈನಿಂದ ಬಂದಿದ್ದ ಚಿಕ್ಕಮಗಳೂರಿನ ಮಹಿಳೆಯೊಬ್ಬರಿಗೆ ಕೊರೋನಾ ಶಂಕೆ; ಆಸ್ಪತ್ರೆಗೆ ದಾಖಲು

ಮಹಿಳೆ ಮಾರ್ಚ್​ 13ರಂದು ದುಬೈನಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿತ್ತು. ಮಹಿಳೆಗೆ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

news18-kannada
Updated:March 17, 2020, 6:55 PM IST
ದುಬೈನಿಂದ ಬಂದಿದ್ದ ಚಿಕ್ಕಮಗಳೂರಿನ ಮಹಿಳೆಯೊಬ್ಬರಿಗೆ ಕೊರೋನಾ ಶಂಕೆ; ಆಸ್ಪತ್ರೆಗೆ ದಾಖಲು
ತರಿಕೇರೆ ಸರ್ಕಾರಿ ಆಸ್ಪತ್ರೆ
  • Share this:
ಚಿಕ್ಕಮಗಳೂರು(ಮಾ. 17): ಮಹಿಳೆಗೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡ  ಹಿನ್ನೆಲೆಯಲ್ಲಿ ಕೊರೋನಾ ಶಂಕೆಯಲ್ಲಿಇಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆಗೆ ತರಿಕೇರೆ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್​​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಹಿಳೆ ಮಾರ್ಚ್​ 13ರಂದು ದುಬೈನಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿತ್ತು. ಮಹಿಳೆಗೆ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಂಕಿತ ಮಹಿಳೆಯ ರಕ್ತ, ಗಂಟಲು ಧ್ರವ  ಸಂಗ್ರಹಿಸಿ ಶಿವಮೊಗ್ಗದ ಲ್ಯಾಬ್​​ ಗೆ ಕಳುಹಿಸಲಾಗಿದೆ. ಮಂಗನ ಕಾಯಿಲೆಯಿಂದ ಜರ್ಜರಿತರಾಗಿದ್ದ ಜಿಲ್ಲೆಯ ಜನರು ಈಗ ಮಹಿಳೆಯೊಬ್ಬರಿಗೆ ಕೊರೋನಾ ವೈರಸ್​​ ಶಂಕೆ ಕಂಡು ಬಂದಿರುವುದರಿಂದ ಆತಂಕ ಮನೆ ಮಾಡಿದೆ.

ವಿದೇಶದಿಂದ ಬಂದ 48 ಜನರ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ನಿಗಾವಹಿಸಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ನಾಲ್ಕು ಶಂಕಿತ ಕೊರೋನಾ ಕೇಸ್ ಗಳು ಪತ್ತೆಯಾಗಿವೆ. ಮೂವರಲ್ಲಿ ಕೊರೋನಾ ನೆಗೆಟಿವ್ ಅಂಶ ಪತ್ತೆಯಾಗಿದ್ದು, ಇನ್ನೊಬ್ಬರ ವರದಿ ಬರಬೇಕಾಗಿದೆ.ಸದ್ಯ ಆಸ್ಪತ್ರೆಯಲ್ಲಿ ಓರ್ವ ಮಹಿಳೆ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.

ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​​ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿಯವರೆಗೂ ಈ ಮಾರಕ ರೋಗಕ್ಕೆ ಸಿಲುಕಿ 100ಕ್ಕೂ ಅಧಿಕ ಭಾರತೀಯರು ನರಳುತ್ತಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ಮಹಾರಾಷ್ಟ್ರದಂತೆ ಕರ್ನಾಟಕದ ವಾತಾವರಣವೂ ಹದಗೆಟ್ಟಿದೆ. ಮೊದಲಿಗೆ ನಿರಾತಂಕವಾಗಿದ್ದ ಕರ್ನಾಟಕದಲ್ಲೂ ಈಗ ಕೊರೊನಾ ಕೋಲಾಹಲ ಸೃಷ್ಟಿಸಿದೆ. ರಾಜ್ಯದಲ್ಲಿ 10 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರ ವೈದ್ಯಕೀಯ ತಪಾಸಣೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ : ಹೆಚ್ಚುತ್ತಿರುವ ಕೊರೋನಾ ಭೀತಿ; ಹೋಟೆಲ್​ಗಳನ್ನು ಆಸ್ಪತ್ರೆ, ನಿಗಾ ಕೇಂದ್ರಗಳನ್ನಾಗಿ ಮಾರ್ಪಡಿಸಲು ಸಜ್ಜಾದ ಸರ್ಕಾರ

ಕರ್ನಾಟಕದ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಬಲಿಯಾದರು. ಇವರ ನಂತರ ದೆಹಲಿಯಲ್ಲಿ 68 ವರ್ಷದ ಮತ್ತೋರ್ವ ವ್ಯಕ್ತಿ ಈ ಮಾರಕಕ್ಕೆ ಮೃತರಾದರು. ಇದೀಗ ಮುಂಬೈನಲ್ಲಿ 64 ವರ್ಷದ ಮತ್ತೊಬ್ಬ ವ್ಯಕ್ತಿ ಕೊರೊನಾದಿಂದ ಅಸುನೀಗಿದ್ದಾನೆ. ಈ ಮಧ್ಯೆಯೇ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಎಷ್ಟು ಮಂದಿ ಕೊರೋನಾದಿಂದ ನರಳುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

 
First published:March 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading