ಭಯದಲ್ಲಿಯೇ ಆಶಾ ಕಾರ್ಯಕರ್ತೆಯರಿಂದ ಸರ್ವೇ; ಸಮೀಕ್ಷೆಗೆ ಬಂದವರ ಪಾದಪೂಜೆ ಮಾಡಿದ ಯುವಕ

ಪಾದಪೂಜೆ ಮಾಡುವ ಮೂಲಕ ಆಶಾ ಕಾರ್ಯಕರ್ತರ ಕಾರ್ಯಕ್ಕೆ ನಿಂಬರ್ಗಾ ಗ್ರಾಮದ ಯುವಕ ವಿಜಯಕುಮಾರ ಜಿಡಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. 

news18-kannada
Updated:April 27, 2020, 7:53 PM IST
ಭಯದಲ್ಲಿಯೇ ಆಶಾ ಕಾರ್ಯಕರ್ತೆಯರಿಂದ ಸರ್ವೇ; ಸಮೀಕ್ಷೆಗೆ ಬಂದವರ ಪಾದಪೂಜೆ ಮಾಡಿದ ಯುವಕ
ಆಶಾ ಕಾರ್ಯಕರ್ತೆಯೊಬ್ಬರಿಗೆ ಪಾದ ತೊಳೆಯುತ್ತಿರುವ ಯುವಕ
  • Share this:
ಕಲಬುರ್ಗಿ(ಏ.27): ದೇಶದೆಲ್ಲೆಡೆ ಕೊರೋನಾ ಅಟ್ಟಹಾಸ ಮರೆಯುತ್ತಿದೆ. ಕಲಬುರ್ಗಿ ಜಿಲ್ಲೆಯಲ್ಲಿಯೂ 38 ಕೊರೋನಾ ಪಾಸಿಟಿವ್ ಬಂದಿದ್ದು, ರೆಡ್ ಝೋನ್ ನಲ್ಲಿದೆ. ಇಂತಹ ಹೈ ಅಲರ್ಟ್ ಜಿಲ್ಲೆಯಲ್ಲಿಯೂ ಮನೆ ಮನೆ ಸರ್ವೇ ನಡೆದಿದ್ದು, ಅದರ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರಿಗೆ ವಹಿಸಲಾಗಿದೆ.

ದೇಶದ ಹಲವೆಡೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳು ನಡೆದಂತೆ, ಕಲಬುರ್ಗಿಯಲ್ಲಿಯೂ ಹಲ್ಲೆ ಯತ್ನ ನಡೆದಿತ್ತು. ಇಂತಹ ಭೀತಿಯಲ್ಲಿಯೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳ ಸರ್ವೇ ನಡೆಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಮನೆ ಮನೆ ಸರ್ವೇ ಮುಂದುವರೆದಿದ್ದು, ಸರ್ವೆಗೆ ಬಂದ ಆಶಾ ಕಾರ್ಯಕರ್ತೆಯರಿಗೆ ಯುವಕನೋರ್ವ ಪಾದಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾನೆ.

ಪಾದಪೂಜೆ ಮಾಡಿ ಗೌರವ ಸೂಚಿಸಿದ ಘಟನೆ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ನಡೆದಿದೆ. ಪಾದಪೂಜೆ ಮಾಡುವ ಮೂಲಕ ಆಶಾ ಕಾರ್ಯಕರ್ತರ ಕಾರ್ಯಕ್ಕೆ ನಿಂಬರ್ಗಾ ಗ್ರಾಮದ ಯುವಕ ವಿಜಯಕುಮಾರ ಜಿಡಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಕಲಬುರ್ಗಿ ಹೇಳಿಕೇಳಿ ಬಿಸಿಲೂರು. ಸದ್ಯಕ್ಕಂತೂ ಬಿಸಿಲಿನ ರೌದ್ರ ನರ್ತನ ನಡೆದಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ. ಇಂತಹ ಬಿಸಿಲಲ್ಲಿಯೂ ಊರೂರು ಸುತ್ತಿ ಸರ್ವೇ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಗೌರವ ಸಲ್ಲಿಸಲು ವಿಜಯಕುಮಾರ್ ಜಿಡಗಿ ಪಾದಪೂದೆ ಮಾಡಿದ್ದಾನೆ.

ಅವರ ಕಾಲುಗಳಿಗೆ ಸ್ಯಾನಿಟೈಜರ್ ನಿಂದ ಸ್ವಚ್ಛ ಮಾಡಿ, ನಂತರ ಪಾದಪೂಜೆ ಮಾಡಿದ್ದಾನೆ. ದೇಶದ ಕೆಲವೆಡೆ ಸರ್ವೆಗೆ ಹೋದವರ ಮೇಲೆ ಹಲ್ಲೆಗಳು ನಡೆದಿರೋ ವೇಳೆಯಲ್ಲಿ, ನಿಂಬರ್ಗಾದಲ್ಲಿ ಮಾತ್ರ ಅವರಿಗೆ ಪಾದಪೂಜೆ ಮಾಡಿ ಗೌರವ ಸಲ್ಲಿಸಲಾಗಿದೆ. ಮಾಹಿತಿಗಾಗಿ ಬಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುವಂತೆ ಯುವಕ ಮನವಿ ಮಾಡಿಕೊಂಡಿದ್ದಾನೆ.

ಸಿಮೆಂಟ್ ಕಾರ್ಖಾನೆಗಳು ಪುನರಾರಂಭ :

ಲಾಕ್ ಡೌನ್ ನಿಂದ ಕೆಲ ವಿನಾಯಿತಿಗಳು ನೀಡಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಕೆಲ ಸಿಮೆಂಟ್ ಕಾರ್ಖಾನೆಗಳು ಪುನರಾರಂಭಗೊಂಡಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅಳವಡಿಕೆ ಮಾಡಿಕೊಂಡು, ಕಡಿಮೆ ನೌಕರರ ಬಳಕೆ ಮಾಡಿಕೊಂಡು ಸಿಮೆಂಟ್ ಉತ್ಪಾದನೆಗೆ ಮುಂದಾಗಿವೆ. ಚಿಂಚೋಳಿ ತಾಲೂಕಿನಲ್ಲಿ ಎರಡು ಕಾರ್ಖಾನೆ ಆರಂಭಗೊಂಡಿವೆ. ಕೊಲ್ಲೂರು ಬಳಿಯ ಚೆಟ್ಟಿನಾಡು, ಚಿತ್ರಸಾಲ ಸಮೀಪದ ವಿಕಟ್ ಸಮೂಹದ ದಿ. ಕಲಬುರ್ಗಿ ಸಿಮೆಂಟ್ ಕಂಪನಿಗಳು ಉತ್ಪಾದನೆ ಆರಂಭಿಸಿವೆ.

ಸದ್ಯಕ್ಕೆ ಬೇಡಿಕೆ ಕಡಿಮೆ ಇರೋ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಸಿಮೆಂಟ್ ಉತ್ಪಾದನೆ ಮಾಡುತ್ತಿವೆ. ಜಿಲ್ಲೆಯ ಇತರೆ ಕಾರ್ಖಾನೆಗಳಲ್ಲಿಯೂ ಪುನರಾರಾರಂಭಕ್ಕೆ ಸಿದ್ಧತೆ ನಡೆದಿದೆ. ಕೆಲವೆಡೆ ಕೇವಲ ಸಿಮೆಂಟ್ ಪ್ಯಾಕ್ ಮಾಡಿ ಗೂಡ್ಸ್ ಮೂಲಕ ಸಾಗಾಟ ಮಾಡಲಾಗುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಸಿಮೆಂಟ್ ಕಾರ್ಖಾನೆಗಳು ಇದೀಗ ಮತ್ತೆ ಪುನರಾರಂಭಗೊಳ್ಳಲಾರಂಭಿಸಿವೆ.
First published: April 27, 2020, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading