ಸುಳ್ಳು ಹೇಳುತ್ತಿರುವ ಕೇಂದ್ರ ಸರ್ಕಾರ; ಸಮುದಾಯಕ್ಕೆ ಹರಡಿರುವ ಕೊರೋನಾ: ವೈದ್ಯಕೀಯ ಕ್ಷೇತ್ರದ ಕಳವಳ

ನಗರ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯಗಳು ಬಹಳ ಕಡಿಮೆ. ಸೌಕರ್ಯಗಳಿಲ್ಲದ ಕಡೆ ಪರಿಸ್ಥಿತಿ ನಿರ್ವಹಣೆ ಮಾಡುವುದು‌ ಕಷ್ಟವಾಗಲಿದೆ. ಇದರಿಂದ ಕೊರೋನಾ ಕಷ್ಟ ಇನ್ನೂ ಹೆಚ್ಚಾಗಲಿದೆ. ಆದುದರಿಂದ ಜಿಲಾ ಮಟ್ಟದಲ್ಲಿ ಹೆಚ್ಚಿನ ಕ್ರಮಕೈಗೊಳ್ಳಬೇಕಾಗಿದೆ. ಜಿಲ್ಲಾಡಳಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಿ ಎಂದು ಸಲಹೆ ನೀಡಿದೆ.

news18-kannada
Updated:June 2, 2020, 11:03 AM IST
ಸುಳ್ಳು ಹೇಳುತ್ತಿರುವ ಕೇಂದ್ರ ಸರ್ಕಾರ; ಸಮುದಾಯಕ್ಕೆ ಹರಡಿರುವ ಕೊರೋನಾ: ವೈದ್ಯಕೀಯ ಕ್ಷೇತ್ರದ ಕಳವಳ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂ.02): ಮಾರಕ ರೋಗ ಕೊರೋನಾ ಕಮ್ಯುನಿಟಿ ಸ್ಪ್ರೆಡ್ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಆದರೆ ಕೊರೋನಾ ರೋಗ ಕಮ್ಯುನಿಟಿ ಸ್ಪ್ರೆಡ್ ಆಗಿದೆ. ಈ ಬಗ್ಗೆ ಜಾಗರೂಕರಾಗಿರಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಇಪಿಹೆಚ್ ಎ), ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ (ಐಎಇ) ಪತ್ರ ಬರೆದಿವೆ.

ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸಮರ್ಪಕವಾಗಿಲ್ಲ ಎಂದು ತಮ್ಮ ಪತ್ರದಲ್ಲಿ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್, ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ ಸಂಸ್ಥೆಗಳು ಖಡಕ್ ಆಗಿ ಹೇಳಿವೆ.

ಮೊದಲ ಹಂತದ ಲಾಕ್ಡೌನ್ ಜಾರಿಗೊಳಿಸಿದಾಗಲೇ ವಲಸೆ ಕಾರ್ಮಿಕರನ್ನು ಅವರವ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿತ್ತು. ಸೋಂಕು ಹರಡುವಿಕೆ ಹೆಚ್ಚಾದ ಮೇಲೆ ಕಳುಹಿಸಿದ್ದು ತಪ್ಪು ನಿರ್ಧಾರವಾಗಿದೆ. ಅವರನ್ನು ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದ ಮೇಲೆ ಕಳುಹಿಸಲಾಗಿದೆ. ಇದರಿಂದ ಕೊರೊನಾ ಇನ್ನಷ್ಟು ಹರಡುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಆತಂಕವನ್ನು ತೋಡಿಕೊಳ್ಳಲಾಗಿದೆ.

ಕೊರೋನಾ ವಾರಿಯರ್ ಸೇವಾ ನಿವೃತ್ತಿ: ಕುದುರೆಯ ಮೇಲೆ ಮೆರವಣಿಗೆ ಮಾಡಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಮೇಲಾಧಿಕಾರಿ

ನಗರ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯಗಳು ಬಹಳ ಕಡಿಮೆ. ಸೌಕರ್ಯಗಳಿಲ್ಲದ ಕಡೆ ಪರಿಸ್ಥಿತಿ ನಿರ್ವಹಣೆ ಮಾಡುವುದು‌ ಕಷ್ಟವಾಗಲಿದೆ. ಇದರಿಂದ ಕೊರೋನಾ ಕಷ್ಟ ಇನ್ನೂ ಹೆಚ್ಚಾಗಲಿದೆ. ಆದುದರಿಂದ ಜಿಲಾ ಮಟ್ಟದಲ್ಲಿ ಹೆಚ್ಚಿನ ಕ್ರಮಕೈಗೊಳ್ಳಬೇಕಾಗಿದೆ. ಜಿಲ್ಲಾಡಳಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಿ ಎಂದು ಸಲಹೆ ನೀಡಿದೆ.

ಗ್ರಾಮೀಣ ಭಾಗದಲ್ಲಿ ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿ ಹರಡುವುದನ್ನು ತಡೆಯಲು ಕೂಡಲೇ ಕ್ಲಸ್ಟರ್​ ಮಟ್ಟದಲ್ಲಿ ಲಾಕ್ಡೌನ್ ಜಾರಿ ಮಾಡಬೇಕು. ಜೊತೆಗೆ ಸೋಂಕಿತರನ್ನು ಬಹಳ ಬೇಗ ಪತ್ತೆ ಹಚ್ಚಬೇಕು. ಸೂಕ್ತ ಐಸೋಲೇಷನ್ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್, ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ ಸಂಸ್ಥೆಗಳು ಉಲ್ಲೇಖಿಸಿವೆ.
First published: June 2, 2020, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading