ಕೊರೊನಾ ವೈರಸ್​​ ಭೀತಿ: ವಿಮಾನದ ಮೂಲಕ ಚೀನಾದಿಂದ 324 ಭಾರತೀಯರ ಸ್ಥಳಾಂತರ

Corona Virus Latest News: ಚೀನಾದಲ್ಲಿ ಈವರೆಗೆ 213 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಸುಮಾರು 9,692 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹುಬೈ ಪ್ರಾಂತ್ಯ ಒಂದರಲ್ಲೇ 5,806 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 

ವಿಶೇಷ ವಿಮಾನದಲ್ಲಿ ಭಾರತೀಯರು

ವಿಶೇಷ ವಿಮಾನದಲ್ಲಿ ಭಾರತೀಯರು

  • Share this:
ನವದೆಹಲಿ(ಫೆ. 01): ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್​​ಗೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿದೆ. ಈ ಕೊರೊನಾ ವೈರಸ್​ ಭಾರತದಲ್ಲೂ ಹರಡುವ ಭೀತಿ ಹೆಚ್ಚಾಗಿದೆ. ಚೀನಾದಲ್ಲಿರುವ ಭಾರತೀಯರನ್ನು ಇಂದು ಬೆಳಗ್ಗೆ ಏರ್​ ಇಂಡಿಯಾದ ಜಂಬೋ ಬಿ747 ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ. ಕೊರೊನಾ ವೈರಸ್​ ಭೀತಿ ಹಿನ್ನೆಲೆ ಸುಮಾರು 324 ಭಾರತೀಯರನ್ನು ಚೀನಾದ ವುಹಾನ್​​ ವಿಮಾನ ನಿಲ್ದಾಣದಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ.

"ವಿಶೇಷ ವಿಮಾನದಲ್ಲಿ ಒಟ್ಟು 324 ಪ್ರಯಾಣಿಕರನ್ನು ವುಹಾನ್​​ನಿಂದ ಭಾರತಕ್ಕೆ ಕರೆತಂದೆವು. ಬೆಳಗ್ಗೆ ಸುಮಾರು 7.30ಕ್ಕೆ ದೆಹಲಿ ತಲುಪಿದೆವು," ಎಂದು ಏರ್​​ ಇಂಡಿಯಾ ವಕ್ತಾರ ಹೇಳಿದ್ದಾರೆ.

"ಮುನ್ನೆಚ್ಚರಿಕಾ ಕ್ರಮವಾಗಿ ರಾಮ ಮನೋಹರ ಲೋಹಿಯಾ ಆಸ್ಪತ್ರೆಯ 5 ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಸಹ ನಮ್ಮ ಜೊತೆಗಿದ್ದರು. ಮಾಸ್ಕ್​​​​ಗಳು, ಪ್ಯಾಕ್​ ಮಾಡಿದ ಆಹಾರ ಪದಾರ್ಥಗಳು ವಿಮಾನದಲ್ಲಿ ಲಭ್ಯವಿದ್ದವು. ಎಂಜಿನಿಯರ್​​ಗಳ ತಂಡ, ಭದ್ರತಾ ಸಿಬ್ಬಂದಿ ಕೂಡ ಫ್ಲೈಟ್​​​ನಲ್ಲಿ ನಮ್ಮ ಜೊತೆಗಿದ್ದರು," ಎಂದು ಅವರು ತಿಳಿಸಿದರು.

Budget 2020 | ಇಂದು ಕೇಂದ್ರ ಬಜೆಟ್ ಮಂಡನೆ, ಮೋದಿ ಸರ್ಕಾರಕ್ಕೆ ಸತ್ವಪರೀಕ್ಷೆ

ಏರ್​ ಇಂಡಿಯಾ ವಿಮಾನವು ಚೀನಾದಲ್ಲಿರುವ ಭಾರತೀಯರನ್ನು ಕರೆತರಲು ಶುಕ್ರವಾರ ಮಧ್ಯಾಹ್ನ 1.17ಕ್ಕೆ ದೆಹಲಿ ಏರ್​​ಪೋರ್ಟ್​​ನಿಂದ ಚೀನಾಗೆ ತೆರಳಿತ್ತು.

ಚೀನಾದಲ್ಲಿ ಈವರೆಗೆ 213 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಸುಮಾರು 9,692 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹುಬೈ ಪ್ರಾಂತ್ಯ ಒಂದರಲ್ಲೇ 5,806 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ವೈರಸ್​​ ಭೀತಿ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

ಭಾರತ, ಬ್ರಿಟನ್​, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಫ್ರಾನ್ಸ್​​ ಸೇರಿದಂತೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್​​​ ಪ್ರಕರಣಗಳು ಪತ್ತೆಯಾಗಿರುವುದು ದೃಢಪಟ್ಟಿದೆ.

2018-19ನೇ ಸಾಲಿನ ವರ್ಷದಲ್ಲಿ ಜಿಡಿಪಿ ಪ್ರಗತಿ ಶೇ. 6.8 ಅಲ್ಲ, ಶೇ. 6.1 – ಕೇಂದ್ರದಿಂದ ಪರಿಷ್ಕೃತ ದರ

 
First published: