ಮಂಡ್ಯ (ಮಾರ್ಚ್ 19); ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸಿದ್ದ ವ್ಯಕ್ತಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮದ್ದೂರಿನ ಜನ ಇದೀಗ ಮಾರಣಾಂತಿಕ ಕೊರೋನಾ ಭೀತಿಗೆ ಒಳಗಾಗಿದ್ದಾರೆ.
ಕೊಡಗಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಯ ಜಾಡು ಹಿಡಿದು ಹೊರಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೊನೆಗೆ ಇದೀಗ ಮದ್ದೂರಿಗೆ ಬಂದು ನಿಂತಿದ್ದಾರೆ. ಅಸಲಿಗೆ ಆತ ಮದ್ದೂರಿನಿಂದ ಕೊಡಗಿಗೆ ರಾಜಹಂಸ ಬಸ್ನಲ್ಲಿ ಆಗಮಿಸಿದ್ದ. ಹೀಗೆ ಆತ ಕೊಡಗಿಗೆ ಬರುವ ಮುಂಚೆ ಒಂದಷ್ಟು ಕಾಲ ಮಂಡ್ಯ, ಮದ್ದೂರಿನಲ್ಲಿ ಕಾಲ ಕಳೆದಿದ್ದ ಎಂದು ತಿಳಿದುಬಂದಿದೆ.
ಅಲ್ಲದೆ, ಈತ ಬಸ್ನಲ್ಲಿ ಪ್ರಯಾಣಿಸುವ ವೇಳೆ ಬಸ್ ಮದ್ದೂರು ಬಸ್ ನಿಲ್ದಾಣದಲ್ಲಿ ಕಾಫಿ ಸಹ ಕುಡಿದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಮದ್ದೂರಿನ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ, ಕೂಡಲೇ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಮದ್ದೂರು ಬಸ್ ನಿಲ್ದಾಣಕ್ಕೆ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೆಸಿ ಜನರಲ್ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೋನಾ ಶಂಕೆ; ಟೆಕ್ಕಿಗೆ ಚಿಕಿತ್ಸೆ ನೀಡಿ ಫಜೀತಿಗೊಳಗಾದರಾ ಡಾಕ್ಟರ್?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ