• Home
  • »
  • News
  • »
  • coronavirus-latest-news
  • »
  • Covid 19: ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸಿತಾ ಕೋವಿಡ್‌: ಹೊಸ ಸಂಶೋಧನೆ ಹೇಳಿದ್ದೇನು?

Covid 19: ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸಿತಾ ಕೋವಿಡ್‌: ಹೊಸ ಸಂಶೋಧನೆ ಹೇಳಿದ್ದೇನು?

ಕೋವಿಡ್-‌19

ಕೋವಿಡ್-‌19

ಒತ್ತಡ ಅಥವಾ ಆಘಾತವನ್ನು ಉಂಟುಮಾಡುವ ನಮ್ಮ ವೈಯಕ್ತಿಕ ಜೀವನದ ಗಮನಾರ್ಹ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ಕೆಲವೊಮ್ಮೆ ಬದಲಾಯಿಸುತ್ತವೆ.

  • Share this:

    ಕೋವಿಡ್‌ (Covid) ಸಮಯದಲ್ಲಿ ಕೆಲವು ವಿಷಯಗಳು ಬದಲಾಗಿದ್ದವು ಅನ್ನೋದನ್ನ ನಾವೆಲ್ಲಾ ಒಪ್ಪಲೇಬೇಕು. ಆರೋಗ್ಯದ ಬಗ್ಗೆ ತೆಗೆದುಕೊಳ್ಳುವ ಕಾಳಜಿಯಾಗಲಿ, ಸಣ್ಣ ಜ್ವರವನ್ನೂ ಸಹ ನಿರ್ಲಕ್ಷ್ಯ ಮಾಡದಿರುವ ಮನೋಭಾವ, ಸಹಾಯ ಮಾಡುವ ಗುಣ ಹೀಗೆ ಕೆಲ ವಿಚಾರಗಳು ಸ್ವಲ್ಪ ಮಟ್ಟಿಗೆ ಬದಲಾಗಿವೆ ಎನ್ನಬಹುದು. ಹೊಸ ಅಧ್ಯಯನ ಇವೆಲ್ಲವನ್ನೂ ಮೀರಿ ಕೋವಿಡ್‌ ನಂತರದ ಈ ವರ್ಷಗಳಲ್ಲಿ ಮನುಷ್ಯನ ವ್ಯಕ್ತಿತ್ವ ಕೂಡ ಬದಲಾಗಿದೆ ಎಂದು ಹೇಳಿದೆ.


    ಮನುಷ್ಯನ ವ್ಯಕ್ತಿತ್ವವನ್ನು ಬದಲಿಸಿತಾ ಕೋವಿಡ್‌ ?
    ಒತ್ತಡ ಅಥವಾ ಆಘಾತವನ್ನು ಉಂಟುಮಾಡುವ ನಮ್ಮ ವೈಯಕ್ತಿಕ ಜೀವನದ ಗಮನಾರ್ಹ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ಕೆಲವೊಮ್ಮೆ ಬದಲಾಯಿಸುತ್ತವೆ. ಹೀಗೆ ಕೋವಿಡ್‌ ಮನುಷ್ಯರ ನಡವಳಿಕೆ ಮೇಲೆ ಪ್ರಭಾವ ಬೀರಿದೆ ಎಂದು PLOS ONE ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ತಿಳಿಸಿದೆ.


    ಈ ಸಂಶೋಧನೆಯು ಕೋವಿಡ್ ಸಾಂಕ್ರಾಮಿಕವು ವ್ಯಕ್ತಿತ್ವದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟುಮಾಡಿದೆ ಎಂದು ಸೂಚಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೋವಿಡ್‌ ಸಮಯ 2020ಕ್ಕೆ ಹೋಲಿಸಿದರೆ 2021 ಮತ್ತು 2022 ರಲ್ಲಿ ಜನರು ಕಡಿಮೆ ಬಹಿರ್ಮುಖತೆ, ಹೆಚ್ಚು ಓಪನ್‌ ಆಗದಿರುವುದು. ಕಡಿಮೆ ಬೆರೆಯುವಿಕೆ, ಆತ್ಮಸಾಕ್ಷಿ ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬದಲಾವಣೆ ಏಕೆ ಎಂಬುದಕ್ಕೆ ಕೆಲ ಕಾರಣಗಳನ್ನೂ ಸಹ ನೀಡಿದೆ. ಅವುಗಳೆಂದರೆ ವರ್ಕ್‌ ಫ್ರಮ್‌ ಹೋಮ್‌. ಕೋವಿಡ್‌ ಸಮಯದ ಆತಂಕ, ಖಿನ್ನತೆ, ಮನೆಯಲ್ಲಿಯೇ ಹೆಚ್ಚು ಕೆಲಸ ಹೀಗೆ ಈ ಅಂಶಗಳು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿವೆ ಎಂದಿದೆ ಅಧ್ಯಯನ.


    ಇದನ್ನು ಓದಿ: ಅಕ್ಟೋಬರ್‌ ನಲ್ಲಿ ಭಾರೀ ಮಳೆ ಸಾಧ್ಯತೆ! ಭತ್ತ-ಗೋಧಿ ಇಳುವರಿ ಮೇಲೆ ಪರಿಣಾಮ


    ಈ ಅಧ್ಯಯನವು ಯುಎಸ್‌ ನಲ್ಲಿ 18 ಮತ್ತು 109ರ ನಡುವಿನ ವಯಸ್ಸಿನ 7,000 ಜನರ ಆಧಾರದ ಮೇಲೆ ನಡೆದಿದೆ. ಅವರನ್ನು ಸಾಂಕ್ರಾಮಿಕ ರೋಗಕ್ಕೆ ಮೊದಲು (2014 ರಿಂದ), 2020 ರಲ್ಲಿ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಮತ್ತು ನಂತರ 2021 ಅಥವಾ 2022 ರಲ್ಲಿ ಹಂತ ಹಂತವಾಗಿ ಮೌಲ್ಯಮಾಪನ ಮಾಡಲಾಯಿತು.


    ಬಿಗ್ ಫೈವ್ ಇನ್ವೆಂಟರಿ ಆಯಾಮದಡಿ ಅಧ್ಯಯನ
    ಪ್ರತಿ ಸಮಯದಲ್ಲಿ, ಭಾಗವಹಿಸುವವರಿಗೆ "ಬಿಗ್ ಫೈವ್ ಇನ್ವೆಂಟರಿ" ಎಂಬ ಆಯಾಮದ ಕೆಳಗೆ ಪ್ರಶ್ನಿಸಲಾಯಿತು. ಎಂದರೆ ಈ ಮೌಲ್ಯಮಾಪನ ಸಾಧನವು ಐದು ಆಯಾಮಗಳಲ್ಲಿ ವ್ಯಕ್ತಿತ್ವವನ್ನು ಅಳೆಯುತ್ತದೆ. ಅವು ಬಹಿರ್ಮುಖತೆ ವಿರುದ್ಧ ಅಂತರ್ಮುಖಿ, ಒಪ್ಪಿಗೆ ಮತ್ತು ವಿರೋಧಾಭಾಸ, ಆತ್ಮಸಾಕ್ಷಿಯ ವಿರುದ್ಧ ದಿಕ್ಕಿನ ಕೊರತೆ, ನರರೋಗ ಮತ್ತು ಭಾವನಾತ್ಮಕ ಸ್ಥಿರತೆ ಮತ್ತು ಮುಕ್ತತೆ ಮತ್ತು ಅನುಭವಕ್ಕೆ ಮುಕ್ತತೆ ಎಂಬ ಐದು ಆಯಾಮಗಳಲ್ಲಿ ಪ್ರಶ್ನಿಸಲಾಯಿತು.


    ಪೂರ್ವ-ಸಾಂಕ್ರಾಮಿಕ ಮತ್ತು 2020ರ ವ್ಯಕ್ತಿತ್ವದ ಗುಣಲಕ್ಷಣಗಳ ನಡುವೆ ಹೆಚ್ಚಿನ ಬದಲಾವಣೆಗಳಿಲ್ಲ. ಸಾಂಕ್ರಾಮಿಕ ರೋಗದ ಸಮಯಕ್ಕೆ ಹೋಲಿಸಿದರೆ 2021 ಮತ್ತು 2022 ರಲ್ಲಿ ಬಹಿರ್ಮುಖತೆ, ಮುಕ್ತತೆ, ಒಪ್ಪಿಗೆ ಮತ್ತು ಆತ್ಮಸಾಕ್ಷಿಯಲ್ಲಿ ಗಮನಾರ್ಹ ಕುಸಿತವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬದಲಾವಣೆಗಳು ಒಂದು ದಶಕದ ಸಾಮಾನ್ಯ ಬದಲಾವಣೆಗೆ ಹೋಲುತ್ತವೆ, ಇದು COVID ಸಾಂಕ್ರಾಮಿಕದ ಆಘಾತವು ವ್ಯಕ್ತಿತ್ವ ಬದಲಾವಣೆಯ ನೈಸರ್ಗಿಕ ಪ್ರಕ್ರಿಯೆಯನ್ನು ವೇಗಗೊಳಿಸಿದೆ ಎಂದು ಸೂಚಿಸಿದೆ.


    ಇದನ್ನು ಓದಿ2025 ರ ವೇಳೆಗೆ 22 ಲಕ್ಷ ಭಾರತೀಯ ಐಟಿ ವೃತ್ತಿಪರರು ಕೆಲ್ಸ ಬಿಡ್ತಾರಂತೆ!


    ಕುತೂಹಲಕಾರಿಯಾಗಿ, ಅಧ್ಯಯನದಲ್ಲಿ ಕಿರಿಯ ವಯಸ್ಕರಲ್ಲಿ ವ್ಯಕ್ತಿತ್ವ ಬದಲಾವಣೆ ಗಮನಾರ್ಹವಾಗಿದೆ. ಇವರು ಒಪ್ಪಿಗೆ ಮತ್ತು ಆತ್ಮಸಾಕ್ಷಿಯಲ್ಲಿ ಕೊರತೆ ತೋರಿಸಿದರೆ ಮತ್ತು ಪೂರ್ವ-ಸಾಂಕ್ರಾಮಿಕತೆಗೆ ಹೋಲಿಸಿದರೆ 2021-2022 ರಲ್ಲಿ ನರರೋಗದಲ್ಲಿ ಹೆಚ್ಚಳವನ್ನು ತೋರಿಸಿದ್ದಾರೆ.


    ವ್ಯಕ್ತಿತ್ವ ಮತ್ತು ಯೋಗಕ್ಷೇಮ
    ಗಮನಾರ್ಹವಾಗಿ, ವ್ಯಕ್ತಿತ್ವವು ನಮ್ಮ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಅಧ್ಯಯನದಲ್ಲಿ ಪತ್ತೆಯಾದ ವ್ಯಕ್ತಿತ್ವ ಬದಲಾವಣೆಗಳು ಸಾಂಕ್ರಾಮಿಕ ಸಮಯದಲ್ಲಿ ನಾವು ನೋಡಿದ ಯೋಗಕ್ಷೇಮದ ಇಳಿಕೆಯನ್ನು ಸೂಚಿಸುತ್ತಿದೆ. ಕೋವಿಡ್‌ ಸಮಯದಲ್ಲಿ ವೇರೆಯವರ ಬಗ್ಗೆ ಸಹಾನುಭೂತಿ ತೋರುವ ಸಾಮರ್ಥ್ಯ (ಒಪ್ಪಿಕೊಳ್ಳುವಿಕೆ), ಹೊಸ ಪರಿಕಲ್ಪನೆಗಳಿಗೆ ತೆರೆದುಕೊಳ್ಳುವುದು (ಮುಕ್ತತೆ), ಬೇರೆಯವರ ಜೊತೆ ಬೆರೆಯುವುದು (ಬಹಿರ್ಮುಖತೆ), ಜವಾಬ್ದಾರಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು (ಆತ್ಮಸಾಕ್ಷಿಯ) ಇವುಗಳ ಕಡೆ ಹೆಚ್ಚು ಒಲವು ತೋರುತ್ತಿದ್ದರು. ಆದರೆ ಈ ಪ್ರವೃತ್ತಿ ಕೋವಿಡ್‌ ನಂತರ ಬದಲಾಗಿದೆ ಎಂದು ಸಂಶೋಧನೆಗಳು ಹೇಳುತ್ತಿವೆ.


    ಕಾಲಾನಂತರದಲ್ಲಿ, ನಮ್ಮ ವ್ಯಕ್ತಿತ್ವಗಳು ಸಾಮಾನ್ಯವಾಗಿ ವಯಸ್ಸಿಗೆ ಹೊಂದಿಕೊಳ್ಳಲು ಮತ್ತು ಜೀವನದ ಘಟನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ರೀತಿಯಲ್ಲಿ ಬದಲಾಗುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ನಮ್ಮ ಜೀವನದ ಅನುಭವಗಳಿಂದ ಕಲಿಯುತ್ತೇವೆ ಮತ್ತು ಇದು ತರುವಾಯ ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ, ನಾವು ಸಾಮಾನ್ಯವಾಗಿ ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ ಮತ್ತು ಭಾವನಾತ್ಮಕ ಸ್ಥಿರತೆಯಲ್ಲಿ ಹೆಚ್ಚಳವನ್ನು ನೋಡುತ್ತೇವೆ.

    Published by:Seema R
    First published: