ಕೊರೋನಾ ಗೆದ್ದ ಕಾರವಾರದ ಯುವಕ; ಜಪಾನ್​ ಹಡಗಿನಲ್ಲಿ 18 ದಿನ ಸಿಲುಕಿ ಸುರಕ್ಷಿತವಾಗಿ ಊರಿಗೆ ಬಂದ ಅಭಿಷೇಕ್

ಕೊರೋನಾ ಭಯದಲ್ಲಿ ಆತಂಕಿತನಾಗಿದ್ದ ಕಾರವಾರ ಮೂಲದ ಯುವಕ ಅಭಿಷೇಕ್ ಕೊನೆಗೂ ಆರೋಗ್ಯಕರವಾಗಿ ಸುರಕ್ಷಿತವಾಗಿ ತನ್ನ ಕುಟುಂಬ ಸೇರಿಕೊಂಡಿದ್ದಾನೆ.

ಕಾರವಾರದ ಯುವಕ ಆಭಿಷೇಕ್​​​​

ಕಾರವಾರದ ಯುವಕ ಆಭಿಷೇಕ್​​​​

 • Share this:
  ಕಾರವಾರ(ಮಾ.17) : ಕಳೆದ ಒಂದೂವರೆ‌ ತಿಂಗಳಿಂದ ಜಪಾನಿನ ಯೊಕೋಮಾದಲ್ಲಿ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಕೊರೋನಾ ಭಯದಲ್ಲಿ ಆತಂಕಿತನಾಗಿದ್ದ ಕಾರವಾರ ಮೂಲದ ಯುವಕ ಅಭಿಷೇಕ್ ಕೊನೆಗೂ ಆರೋಗ್ಯಕರವಾಗಿ ಸುರಕ್ಷಿತವಾಗಿ ತನ್ನ ಕುಟುಂಬ ಸೇರಿಕೊಂಡಿದ್ದಾನೆ.

  ಏನಾಗಿತ್ತು ಅಭಿಷೇಕ್ ಗೆ?

  ಕಳೆದೆರಡು ತಿಂಗಳ ಹಿಂದೆ ಚೀನಾದಿಂದ ಜಪಾನ್‌ಗೆ ಮರಳುತ್ತಿದ್ದ ಡೈಮಂಡ್ ಪ್ರಿನ್ಸಸ್ ಕ್ರೂಜ್ ಹಡಗಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅಲ್ಲಿನ ಭದ್ರತಾ ಪಡೆಗಳು ಕ್ರೂಜ್‌ನಲ್ಲಿದ್ದವರನ್ನ ಕೆಳಗಿಳಿಸದೇ ಜಲದಿಗ್ಭಂದನ ದಲ್ಲಿರಿಸಿದ್ದು, ಅದರಲ್ಲಿದ್ದ ಸಿಬ್ಬಂದಿ ಸೇರಿದಂತೆ ಸಾವಿರಾರು ಮಂದಿ ಪ್ರಯಾಣಿಕರೂ ಹಡಗಿನಲ್ಲೇ ಉಳಿದುಕೊಳ್ಳುವಂತಾಗಿತ್ತು. ಇದರಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ಮೂಲಕ ಅಭಿಷೇಕ್ ಮಗರ್ ಎಂಬಾತ ಸಹ ಸಿಲುಕಿಕೊಂಡಿದ್ದು ಭಾರತಕ್ಕೂ ಮರಳಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು.

  ಸುಮಾರು 18 ದಿನಗಳು ಹಡಗಿನಲ್ಲೇ ದಿಗ್ಬಂಧನ ಅನುಭವಿಸಿದ ಬಳಿಕ ಫೆಬ್ರುವರಿ 27ರಂದು ಹಡಗಿನಲ್ಲಿದ್ದ ಅಭಿಷೇಕ್ ಸೇರಿದಂತೆ 136 ಮಂದಿ ಭಾರತೀಯನ್ನ ವಾಪಸ್ ಭಾರತಕ್ಕೆ ಕರೆತರಲಾಗಿತ್ತು. ಆದರೆ ಅವರನ್ನ ಮನೆಗೆ ಕಳುಹಿಸುವ ಮೊದಲು ಹರಿಯಾಣದ ಸೈನಿಕರ ಕ್ಯಾಂಪ್‌ನಲ್ಲಿ 14 ದಿನಗಳ ಕಾಲ ತೀವ್ರ ತಪಾಸಣೆಗೊಳಪಡಿಸಲಾಗಿತ್ತು. ಅದರಲ್ಲಿ ಕ್ರೂಜ್‌ನಿಂದ ಬಂದಿದ್ದ ಯಾವೊಬ್ಬ ಭಾರತೀಯನಲ್ಲೂ ಕೊರೊನಾ ಸೋಂಕು ಪತ್ತೆಯಾಗದ ಹಿನ್ನಲೆ ಕೇಂದ್ರ ಆರೋಗ್ಯ ಇಲಾಖೆ ಅವರನ್ನೆಲ್ಲಾ ವಾಪಸ್ ಕಳುಹಿಸಿಕೊಟ್ಟಿದೆ. ಅಭಿಷೇಕ್ ಕಾರವಾರದ ತಮ್ಮ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದು ಮನೆಗೆ ಬಂದ ಬಳಿಕ ಸ್ವಾತಂತ್ರ್ಯ ಸಿಕ್ಕಂತಾಗಿದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ನಿಟ್ಟುಸಿರು ‌ಬಿಟ್ಟು ಸಂತೋಷ ವ್ಯಕ್ತಪಡಿಸಿದ ಕುಟುಂಬ

  ಇನ್ನು 18 ದಿನಗಳ ಕಾಲ ಕ್ರೂಜ್‌ನಲ್ಲಿದ್ದ ವೇಳೆ ಪ್ರತಿನಿತ್ಯ ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ಇತ್ತು ಅಂತಾ ಅಭಿಷೇಕ್ ಹೇಳಿಕೊಂಡಿದ್ದಾರೆ. ಸೋಂಕು ತಗುಲಿದವರನ್ನ ಹೊರಗೆ ಬಾರದಂತೆ ರೂಮುಗಳಲ್ಲೇ ಇರಿಸಿದ್ದು, ಯಾರೂ ಸಹ ಓಡಾಡುವಂತಿರಲಿಲ್ಲ. ಜಪಾನ್‌ನ ಆರೋಗ್ಯ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೇ ಸೋಂಕಿಗೊಳಗಾದವರನ್ನ ತಪಾಸಣೆಗೊಳಪಡಿಸಿದ್ದು ಬಳಿಕ ನಮ್ಮ ದೇಶಕ್ಕೆ ವಾಪಸ್ಸಾಗಲು ಅನುಮತಿ ನೀಡಿದರು ಎಂದಿದ್ದಾರೆ.

  ಇನ್ನು ಒಂದೂವರೆ ತಿಂಗಳ ಆತಂಕದ ವಾತಾವರಣದ ಬಳಿಕ ಮಗ ಮನೆಗೆ ವಾಪಸ್ಸಾಗಿದ್ದಕ್ಕೆ ಅಭಿಷೇಕ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

  ಕ್ರೂಜ್‌ನಲ್ಲಿ ಜಲದಿಗ್ಭಂದನಕ್ಕೊಳಗಾಗಿದ್ದ ವೇಳೆ ಪ್ರತಿನಿತ್ಯ ಮಗನ ಆರೋಗ್ಯ ವಿಚಾರಿಸುತ್ತಿದ್ದು ಮನೆಗೆ ಬರುವವರೆಗೂ ಆತಂಕ ಇತ್ತು. ಆದ್ರೆ ಇದೀಗ ಸುರಕ್ಷಿತವಾಗಿ ಮನೆಗೆ ಮರಳಿದ್ದು ಯಾವುದೇ ಸೋಂಕು ತಗುಲಿಲ್ಲ ಅಂತಾ ಆರೋಗ್ಯ ಇಲಾಖೆಯಿಂದ ಪ್ರಮಾಣ ಪತ್ರ ನೀಡಿದ್ದಾರೆ ಅಂತಾ ಅಭಿಷೇಕ್ ತಂದೆ ತಿಳಿಸಿದ್ದಾರೆ

  ಇನ್ನು ಭಾರತಕ್ಕೆ ಬಂದ ಬಳಿಕವೂ ಎರಡು ಬಾರಿ ಸೋಂಕಿನ ಪರೀಕ್ಷೆ ನಡೆಸಿದ್ದು ಯಾವುದೇ ರೀತಿಯ ಸೋಂಕು ಕಂಡುಬರದ ಹಿನ್ನಲೆ ಮನೆಗೆ ಸುರಕ್ಷಿತವಾಗಿ ವಾಪಸ್ಸಾಗುವಂತಾಗಿದೆ. ಸದ್ಯ ಎಲ್ಲೆಡೆ ಕೊರೊನಾ ಭೀತಿ ಆವರಿಸಿದ್ದು ಕೊರೊನಾ ಸೋಂಕು ಕಡಿಮೆಯಾದ ಬಳಿಕ ಮತ್ತೆ ಕ್ರೂಜ್‌ನಲ್ಲಿ ಕೆಲಸಕ್ಕೆ ತೆರಳೋದಾಗಿ ಅಭಿಷೇಕ್ ತಿಳಿಸಿದ್ದಾನೆ.

  ಇದನ್ನೂ ಓದಿ : ಕಾಂಗ್ರೆಸ್ ಎಂದಿಗೂ ದೇಶದಿಂದ ಮುಕ್ತವಾಗಲ್ಲ, ಗಾಂಧಿ ಕುಟುಂಬ ನಾಶವಾಗಲ್ಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​

  ಒಟ್ಟಾರೇ ಕಾರವಾರಿದ ಯುವಕನೊಬ್ಬ ಜಪಾನ್ ಬಳಿ ಕ್ರೂಜ್‌ನಲ್ಲಿ ಸಿಲುಕಿದ್ದು ಸಾಕಷ್ಟು ಆತಂಕ ಮೂಡಿಸಿದ್ದು ಕೊನೆಗೂ ಆತ ಸುರಕ್ಷಿತವಾಗಿ ಮನೆಗೆ ಮರಳಿರುವುದು ಮನೆಯವರಲ್ಲಿ ಸಂತಸ ಉಂಟು ಮಾಡಿದೆ.
  First published: