• Home
  • »
  • News
  • »
  • coronavirus-latest-news
  • »
  • ಇರಾನ್​ನಲ್ಲಿ ಸಿಲುಕಿರುವ 6,000 ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲಾಗುವುದು; ಸಚಿವ ಜೈಶಂಕರ್​ ಆಶ್ವಾಸನೆ

ಇರಾನ್​ನಲ್ಲಿ ಸಿಲುಕಿರುವ 6,000 ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲಾಗುವುದು; ಸಚಿವ ಜೈಶಂಕರ್​ ಆಶ್ವಾಸನೆ

ಎಸ್. ಜೈಶಂಕರ್

ಎಸ್. ಜೈಶಂಕರ್

ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರದ ಸುಮಾರು 1,100 ಯಾತ್ರಿಕರು ಸೇರಿದಂತೆ ಸುಮಾರು 6,000 ಭಾರತೀಯರು ಕೊರೋನಾ ಪೀಡಿತ ಇರಾನ್ ದೇಶದಲ್ಲಿ ಸಿಲುಕಿದ್ದಾರೆ ಈ ಎಲ್ಲರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ತರಲಾಗುವುದು ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್​ ತಿಳಿಸಿದ್ದಾರೆ.

  • Share this:

ನವ ದೆಹಲಿ (ಮಾರ್ಚ್​ 12); ಮಾರಣಾಂತಿಕ ಕೊರೋನಾ ವೈರಸ್​ ಪೀಡಿತ ಇರಾನ್ ದೇಶದಿಂದ ಭಾರತೀಯರನ್ನು ಮತ್ತೆ ದೇಶಕ್ಕೆ ಸುರಕ್ಷಿತವಾಗಿ ವಾಪಸ್​ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವ ಜೈಶಂಕರ್​ ಆಶ್ವಾಸನೆ ನೀಡಿದ್ದಾರೆ.


ಇಂದು ಲೋಕಸಭಾ ಕಲಾಪದ ವೇಳೆ ಕೊರೋನಾ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾತನಾಡಿರುವ ಅವರು, "ಮಾರಣಾಂತಿಕ ಕೊರೋನಾ ವೈರಸ್​ ಕಳವಳಕಾರಿಯಾದಂಹ ವಿಚಾರವಾಗಿದ್ದು, ಈ ಸಂದರ್ಭದಲ್ಲಿ ನಾವು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರದ ಸುಮಾರು 1,100 ಯಾತ್ರಿಕರು ಸೇರಿದಂತೆ ಸುಮಾರು 6,000 ಭಾರತೀಯರು ಕೊರೋನಾ ಪೀಡಿತ ಇರಾನ್ ದೇಶದಲ್ಲಿ ಸಿಲುಕಿದ್ದಾರೆ ಈ ಎಲ್ಲರನ್ನೂ ಸುರಕ್ಷಿತವಾಗಿ ದೇಶಕ್ಕೆ ಮರಳಿ ತರಲಾಗುವುದು" ಎಂದು ತಿಳಿಸಿದ್ದಾರೆ.


ಕೊರೋನಾ ವೈರಸ್​ ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡಿದ್ದು ಈವರೆಗೆ ಒಟ್ಟು 3,400 ಜನ ಸಾವನ್ನಪ್ಪಿದ್ದಾರೆ. ಈ ಸೋಂಕು ಭಾರತವನ್ನೂ ಪ್ರವೇಶಿಸಿದ್ದು 68 ಜನರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾರತ ವಿದೇಶಾಂಗ ಸಚಿವಾಲಯ ಎಲ್ಲಾ ದೇಶದ ಪ್ರವಾಸಿಗರ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಹೀಗಾಗಿ ವಿದೇಶಿಯರಿಗೆ ಭಾರತದ ಬಾಗಿಲು ಮುಚ್ಚಿದ್ದು, ಮಾರ್ಚ್​ 29 ರಿಂದ ನಡೆಯಲಿರುವ ಐಪಿಎಲ್​ ಟೂರ್ನಿಗೂ ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ. ಏಪ್ರಿಲ್ 15ರ ನಂತರ ಐಪಿಎಲ್​ಗೆ ವಿದೇಶಿ ಆಟಗಾರರು ಆಗಮಿಸುವ ನಿರೀಕ್ಷೆ ಇದೆ.


ಇದನ್ನೂ ಓದಿ : ಕೊರೋನಾ ಎಫೆಕ್ಟ್​; ಪಾತಾಳಕ್ಕೆ ಕುಸಿದ ಷೇರುಪೇಟೆ ಸೂಚ್ಯಾಂಕ, ಒಂದೇ ದಿನಕ್ಕೆ 9 ಲಕ್ಷ ಕೋಟಿ ನಷ್ಟ

Published by:MAshok Kumar
First published: