ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 7 ವಿಶೇಷ ಶ್ರಮಿಕ್​​​​ ರೈಲು: 10500 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​

Special Shramik Train: ಪ್ರತಿ ರೈಲಿನಲ್ಲಿ ಸುಮಾರು 1500 ಜನ ಪ್ರಯಾಣಿಕರಂತೆ 10500 ಜನ ವಲಸಿಗರು ಇಂದು ರಾಜ್ಯರಾಜಧಾನಿಯಿಂದ ತಮ್ಮ ತಾಯ್ನಾಡಿಗೆ ವಾಪಸ್ ತೆರಳಲಿದ್ದಾದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಮೇ.22): ಲಾಕ್ ‌ಡೌನ್‌ನಿಂದದಾಗಿ ಕೆಲಸ ಕಾರ್ಯಗಳಿಲ್ಲದೆ, ಸಂಬಳವಿಲ್ಲದೆ ಅನ್ನ ಆಹಾರಕ್ಕೂ ಕಷ್ಟ ಎದುರಾಗಿದ್ದ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದ ಶ್ರಮಿಕ್ ವಿಶೇಷ ರೈಲು ಯೋಜನೆಯಲ್ಲಿ, ರಾಜ್ಯದ ವಿವಿದೆಡೆಯಿಂದ ಈಗಾಗಲೇ ಸಾವಿರಾರು ವಲಸಿಗರು ತಮ್ಮ ಊರುಗಳನ್ನು ಸೇರಿದ್ದಾರೆ. ಶ್ರಮಿಕ್ ರೈಲು ಯೋಜನೆಯ ಮುಖಾಂತರ ಇಂದು ಸಹ ಬೆಂಗಳೂರಿನಿಂದ ಉತ್ತರ ಭಾರತದ ಹಲವು ರಾಜ್ಯಗಳಿಗೆ ಸುಮಾರು 10, 500 ವಲಸಿಗೆ ಕಾರ್ಮಿಕರು 7 ಶ್ರಮಿಕ್ ರೈಲುಗಳ ಮೂಲಕ ತೆರಳಲಿದ್ದಾರೆ‌. ರಾಜ್ಯ ರಾಜ್ಯಧಾನಿಯ ಮೂರು ರೈಲಿ ನಿಲ್ದಾಣಗಳಿಂದ 7 ರೈಲುಗಳು ಇಂದು ಉತ್ತರ ರಾಜ್ಯಗಳಿಗೆ ಪ್ರಯಾಣ ಬೆಳಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

  ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮೂರು ರೈಲಿಗಳು ಹೊರಡಲಿದ್ದು, ಮಧ್ಯಾಹ್ನ 3 ಗಂಟೆಗೆ ಬಿಹಾರ ರಾಜ್ಯದ ಬರೌನಿ ನಗರಕ್ಕೆ ಮೊದಲ ರೈಲು, ಸಂಜೆ 5 ಗಂಟೆಗೆ ಬಿಹಾರದ ಸಹರ್ಸಾ ನಗರಕ್ಕೆ ಎರಡನೇ ರೈಲು ಹಾಗೂ ರಾತ್ರಿ 7ಕ್ಕೆ ಪಶ್ಚಿಮ ಬಂಗಾಳದ ಮಾಲ್ಡಾ ನಗರಕ್ಕೆ 3 ನೇ ರೈಲು ತೆರಳಲಿದೆ. ಬೆಂಗಳೂರು ನಗರ ರೈಲು ನಿಲ್ದಾಣದದಿಂದ 2 ರೈಲು ಪ್ರಯಾಣಿಸಲಿದ್ದು, ರಾತ್ರಿ 8ಕ್ಕೆ ಜಾರ್ಖಂಡ್‌ ರಾಜ್ಯದ ಬರ್ಕಾಖಾನ ನಗರಕ್ಕೆ ಮೊದಲ ರೈಲು ಹಾಗೂ ಮಧ್ಯ ಪ್ರದೇಶದ ಗ್ವಾಲಿಯರ್ ನಗರಕ್ಕೆ ಎರಡನೇ ರೈಲು ಹೊರಡಲಿದೆ. ಇನ್ನೂ ಚಿಕ್ಕಬಾಣಾವರ ರೈಲು ನಿಲ್ದಾಣದಿಂದ ಎರಡು ರೈಲುಗಳು ತೆರಳಲಿದ್ದು ಸಂಜೆ 4ಕ್ಕೆ ಉತ್ತರ ಪ್ರದೇಶದ ಅಜ್ಮಗರ್‌ಗೆ ಮೊದಲ ರೈಲು ಹಾಗೂ ಸಂಜೆ 6ಕ್ಕೆ ಉತ್ತರ ಪ್ರದೇಶದ ಬಸ್ತಿನಗರಕ್ಕೆ ಎರಡನೇ ರೈಲು ಹೊರಡಲಿದೆ.

  ಪ್ರತಿ ರೈಲಿನಲ್ಲಿ ಸುಮಾರು 1500 ಜನ ಪ್ರಯಾಣಿಕರಂತೆ 10500 ಜನ ವಲಸಿಗರು ಇಂದು ರಾಜ್ಯರಾಜಧಾನಿಯಿಂದ ತಮ್ಮ ತಾಯ್ನಾಡಿಗೆ ವಾಪಸ್ ತೆರಳಲಿದ್ದಾದೆ. ಸೇವಾಸಿಂಧು ವೆಬ್‌ಪೋರ್ಟಲ್ ಮುಖಾಂತರ ನೊಂದಣಿ ಮಾಡಿಕೊಂಡು ಟಿಕೆಟ್ ಖಚಿತವಾದ ಪ್ರಯಾಣಿಕರನ್ನು ಬಿಬಿಎಂಪಿ ಅಧಿಕಾರಿಗಳು ಬಿಎಂ‌ಟಿಸಿ ಬಸ್ ಮುಖಾಂತರ ರೈಲು ನಿಲ್ದಾಣಗಳಿಗೆ ಕರೆತರಲಿದ್ದು, ರೈಲು ನಿಲ್ದಾಣದ ಬಳಿ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಪ್ರಯಾಣಕ್ಕೆ ಅವಕಾಶ ಕೊಡದೆ ನೇರವಾಗಿ ಆಸ್ಪತ್ರೆಗೆ ಕಳುಹಿಸಲಾಗುವುದು.

  ಇದನ್ನೂ ಓದಿ : Sonia Gandhi: ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ವಿರೋಧ ಪಕ್ಷಗಳ ನಾಯಕರ ಸಭೆ

  ಶ್ರಮಿಕ್ ರೈಲು ಪ್ರಯಾಣದ ಹಿನ್ನೆಲೆ ರೈಲು ನಿಲ್ದಾಣಗಳ ಬಳಿ ರೈಲ್ವೇ ಪೊಲೀಸ್ ಹಾಗೂ ಬೆಂಗಳೂರು ನಗರ ಪೊಲೀಸರಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನೂ ಬೆಂಗಳೂರಿನಿಂದ ತಮ್ಮ ತಾಯ್ನಾಡಿಗೆ ತೆರಳಿದ ವಲಸಿಗರನ್ನ ಆಯಾ ರಾಜ್ಯಗಳ ವಿವೇಚನೆಯಂತೆ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿದು ಬಂದಿದೆ.

  (ವರದಿ : ಅಭಿಷೇಕ್ ಚಿಕ್ಕಮಾರನಹಳ್ಳಿ)
  First published: