Coronavirus India Update : ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ : ನಿನ್ನೆ ಒಂದೇ ದಿನ 56,282 ಪ್ರಕರಣಗಳು ಪತ್ತೆ

ಬುಧವಾರ 904 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 40 ಸಾವಿರದ ಗಡಿ‌ ದಾಟಿದ್ದು 40,699ಕ್ಕೆ ಏರಿಕೆಯಾಗಿದೆ

news18-kannada
Updated:August 6, 2020, 10:59 AM IST
Coronavirus India Update : ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ : ನಿನ್ನೆ ಒಂದೇ ದಿನ 56,282 ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಆಗಸ್ಟ್​.06): ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್​ಡೌನ್​​ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 19 ಲಕ್ಷದ ಗಡಿ ದಾಟಿದೆ.

ಅದೂ ಅಲ್ಲದೆ ಮೂರನೇ ಹಂತದ ಅನ್​ಲಾಕ್‌ ಕೂಡ ಜಾರಿ ಆಗುತ್ತಿದ್ದಂತೆ ಪ್ರತಿ ದಿನವೂ ಅರ್ಧ ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುವ ಟ್ರೆಂಡ್ ಆರಂಭವಾಗಿದ್ದು ಹೀಗೆ ಮುಂದುವರದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಆಗಸ್ಟ್ ‌ 10ರೊಳಗೆ ದೇಶದ ಕೊರೋನಾ ಪೀಡಿತರ ಸಂಖ್ಯೆ 20 ಲಕ್ಷ ದಾಟಲಿದೆ' ಎಂದು ಹೇಳಿದ್ದ ಭವಿಷ್ಯ ಇವತ್ತೇ ನಿಜವಾಗಲಿದೆ.

ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಮಾತ್ರ ದಾಖಲಾಗಿದ್ದವು. ನಂತರ ನೋಡ ನೋಡುತ್ತಿದ್ದಂತೆ ಜುಲೈ 10 ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದವು. ಅದಾದಮೇಲೆ ಜುಲೈ 20 ರಿಂದ 37 ಸಾವಿರಕ್ಕೂ ಪ್ರಕರಣಗಳು ಪತ್ತೆಯಾಗಿದ್ದವು. ಜುಲೈ 31ಕ್ಕೆ 57,117 ಪ್ರಕರಣಗಳು ಕಂಡು ಬಂದಿದ್ದವು‌. ಬಳಿಕ ತುಸು ಕಡಿಮೆ ಆಗತೊಡಗಿ ಆಗಸ್ಟ್ 1 ರಂದು 54,736 ಪ್ರಕರಣಗಳು, ಆಗಸ್ಟ್ 2ರಂದು 52,972 ಪ್ರಕರಣಗಳು, ಆಗಸ್ಟ್ 3 ರಂದು 52,050 ಪ್ರಕರಣಗಳು, ಆಗಸ್ಟ್ 4ರಂದು 52,509 ಪ್ರಕರಣಗಳು ಪತ್ತೆಯಾಗಿದ್ದವು. ಈಗ ಮತ್ತೆ ಹೆಚ್ಚಾಗಿ ಆಗಸ್ಟ್ 5ರಂದು 56,282 ಕಂಡು ಬಂದಿವೆ. ದೇಶದ ಕೊರೋನಾ ಪೀಡಿತರ ಸಂಖ್ಯೆ 19,64,537ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಬುಧವಾರ 904 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 40 ಸಾವಿರದ ಗಡಿ‌ ದಾಟಿದ್ದು 40,699ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 12,82,215 ಜನ ಮಾತ್ರ. ದೇಶದಲ್ಲಿ ಇನ್ನೂ 5,95,501 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹ ಜಮ್ಮು-ಕಾಶ್ಮೀರದ ನೂತನ ಉಪರಾಜ್ಯಪಾಲ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜುಲೈ 1 ರಂದು 19,148, ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4 ರಂದು 24,850, ಜುಲೈ 5 ರಂದು 24,248, ಜುಲೈ 6 ರಂದು 22,252, ಜುಲೈ 7 ರಂದು 22,752, ಜುಲೈ 8 ರಂದು 24,879, ಜುಲೈ 9 ರಂದು 26,506, ಜುಲೈ 10 ರಂದು 27,114, ಜುಲೈ 11 ರಂದು 28,637, ಜುಲೈ 12 ರಂದು‌ 28,701, ಜುಲೈ 13 ರಂದು 28,498, ಜುಲೈ 14 ರಂದು 29,429, ಜುಲೈ 15 ರಂದು 32,695, ಜುಲೈ 16 ರಂದು‌ 34,956, ಜುಲೈ 17 ರಂದು 34,884, ಜುಲೈ 18 ರಂದು 38,902, ಜುಲೈ 19 ರಂದು 40,425, ಜುಲೈ 20 ರಂದು 37,148, ಜುಲೈ 21 ರಂದು 37,724.
ಜುಲೈ 22ರಂದು 45,720, ಜುಲೈ 23 ರಂದು 49,310, ಜುಲೈ 24 ರಂದು 48,916,‌ ಜುಲೈ 25 ರಂದು 48,661, ಜುಲೈ 26 ರಂದು 49,931, ಜುಲೈ 27 ರಂದು 47,704, ಜುಲೈ 28 ರಂದು 48,512 ಹಾಗೂ ಜುಲೈ 29 ರಂದು 52,123, ಜುಲೈ 30 ರಂದು 55,079, ಜುಲೈ‌ 31ರಂದು 57,117, ಆಗಸ್ಟ್ 1 ರಂದು 54,736, ಆಗಸ್ಟ್ 2 ರಂದು 52,972, ಆಗಸ್ಟ್ 3 ರಂದು 52,050, ಆಗಸ್ಟ್ 4 ರಂದು 52,509 ಹಾಗೂ ಆಗಸ್ಟ್ 5 ರಂದು 56,282 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: G Hareeshkumar
First published: August 6, 2020, 10:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading