ರಾಜ್ಯದಲ್ಲಿ ಕೊರೋನಾ ವೈರಸ್​ ಭೀತಿ; ಮಾಸ್ಕ್ ಕೊರತೆಯಿಂದ ಕಂಗಾಲಾದ ಜನತೆ

ಒಂದು ಮಾಸ್ಕ್​ಗೆ 25 ರೂಪಾಯಿ ಗಿಂತ ಹೆಚ್ಚಿದೆ. ಕರೋನಾ ವೈರಸ್​​ನಿಂದ ತಪ್ಪಿಸಿಕೊಳ್ಳಲು ವಿವಿಧ ಕಂಪನಿಗಳ ಮುಖ್ಯಸ್ಥರು ಬಲ್ಕ್ ನಲ್ಲಿ ಮಾಸ್ಕ್ ಕೇಳುತ್ತಿದ್ದಾರೆ. ಆದರೆ, ಒಂದೆರಡು ಫೀಸ್ ಕೊಟ್ಟು ಸಮಧಾನ ಮಾಡುತ್ತಿದ್ದಾರೆ.

 ಮೆಡಿಕಲ್​​​ ಶಾಪ್

ಮೆಡಿಕಲ್​​​ ಶಾಪ್

 • Share this:
  ಕಾರವಾರ(ಮಾ.11) : ಕರೋನಾ ವೈರಸ್ ರಾಜ್ಯದಲ್ಲೂ ಕೂಡ ಭಯಾನಕವಾಗಿ ಸದ್ದು ಮಾಡುತ್ತಿದೆ. ಕರೋನಾದಿಂದ ತಪ್ಪಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಜನತೆ ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಮಾಸ್ಕ್ ಪಡೆದುಕೊಳ್ಳಲು ಮೆಡಿಕಲ್ ಶಾಪ್​​​ಗಳಿಗೆ ಮುಗಿಬೀಳುತ್ತಿದ್ದು, ಅಗತ್ಯವಿರುವಷ್ಟು ಮಾಸ್ಕ್ ಸಿಗದಿರುವುದರಿಂದ ಜನರು ಬೇಸರ ವ್ಯಕ್ತಪಡಿಸುತ್ತಾರೆ.

  ಜಗತ್ತಿನ ಬೇರೆ ಬೇರೆ ದೇಶವನ್ನು ನಡುಗಿಸಿದ ಕರೋನಾ ವೈರಸ್ ಭಾರತದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲೂ ಕೂಡ ಅಲ್ಲಲ್ಲಿ ಕರೋನಾ ವೈರಸ್ ತನ್ನ ರುದ್ರ ನರ್ತನ ಶುರುಮಾಡಿದೆ. ಕರೋನಾದಿಂದ ತಪ್ಪಿಸಿಕೊಳ್ಳಲು ಜನತೆ ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಆರೋಗ್ಯ ಇಲಾಖೆ ಅಲ್ಲಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜನತೆಗೆ ಎಚ್ಚರಿಕೆ ನೀಡುತ್ತಿದೆ. ಆದರೆ,  ಉತ್ತರಕನ್ನಡ ಜಿಲ್ಲೆಯ ಕಾರವಾರದ ಮೆಡಿಕಲ್ ಶಾಪ್​​​​ಗಳಲ್ಲಿ ಎಲ್ಲಿಯೂ ಕೂಡ ಮಾಸ್ಕ್​ಗಳು ಲಭ್ಯವಿಲ್ಲ.

  ಹೆಚ್ಚಿನ ಪ್ರಮಾಣದ ಮಾಸ್ಕ್​ಗಳಿಗೆ ಆರ್ಡರ್ ಮಾಡಿದರೇ ಬೆಂಗಳೂರಿನಿಂದ ಕಡಿಮೆ ಪ್ರಮಾಣದಲ್ಲಿ ಕಳಿಸುತ್ತಾರೆ. ಹೀಗಾಗಿ ಗ್ರಾಹಕರಿಗೆ ಅಗತ್ಯವಾಗುವಷ್ಟು ಮಾಸ್ಕ್ ಪೂರೈಸಲು ಆಗುತ್ತಿಲ್ಲ ಎಂದು ಕಾರವಾರದ ಮೆಡಿಕಲ್ ಶಾಪ್​ವೊಂದರ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

  ಮಾಸ್ಕ್ ಕೊರತೆ ಜನರಲ್ಲಿ ಆತಂಕ

  ಈ ಹಿಂದೆ ತ್ರಿ ಲೆಯರ್ ಮಾಸ್ಕ್ 4 ರಿಂದ 6 ರುಪಾಯಿಗೆ ಸಿಗುತಿತ್ತು. ಆದರೇ ಈಗ ಮಾಸ್ಕ್​​​ ಇಲ್ಲದಿರುವುದರಿಂದ  ದರ ಕೂಡ ಜಾಸ್ತಿಯಾಗಿದೆ. ಒಂದು ಮಾಸ್ಕ್​ಗೆ 25 ರೂಪಾಯಿಗಿಂತ ಹೆಚ್ಚಿದೆ. ಕರೋನಾ ವೈರಸ್​​ನಿಂದ ತಪ್ಪಿಸಿಕೊಳ್ಳಲು ವಿವಿಧ ಕಂಪನಿಗಳ ಮುಖ್ಯಸ್ಥರು ಬಲ್ಕ್ ನಲ್ಲಿ ಮಾಸ್ಕ್ ಕೇಳುತ್ತಿದ್ದಾರೆ. ಆರೋಗ್ಯ ಇಲಾಖೆ ಅವಶ್ಯವಿರುವಷ್ಟು ಮಾಸ್ಕ್​ಗಳನ್ನು ಜನರಿಗೆ ವಿತರಿಸಬೇಕು. ಇಲ್ಲದಿದ್ದಲ್ಲಿ ಕರೋನಾ ವೈರಸ್ ಹರಡುವುದರಲ್ಲಿ ಸಂಶಯ ಇಲ್ಲ ಎಂದು ಜನರು ಹೇಳುತ್ತಾರೆ.

  ಇದನ್ನೂ ಓದಿ :   ಕೊರೋನಾ ವೈರಸ್​​ ಭೀತಿ; ಮದ್ದೂರಿನ ಕೆಲವು ಶಾಲೆಗಳಲ್ಲಿ ಹೊರಡಿಸಿದ ಆದೇಶಕ್ಕೆ ಕಂಗಾಲಾದ ಪೋಷಕರು

  ಕರೋನಾ ವೈರಸ್ ನಿಂದಾಗಿ ಜನರು ಹೊರಗೆ ತಿರುಗಾಡಲು ಭಯಪಡುತ್ತಿದ್ದಾರೆ. ಎಲ್ಲಿ ತಮಗೆ ಕರೋನಾ ಸೋಂಕು ಹರಡುತ್ತದೆಯೋ ಎಂಬ ಆತಂಕ ಕೂಡ ಜನರಲ್ಲಿದೆ. ಒಂದು ಕಡೆ ಮೆಡಿಕಲ್ ಶಾಪ್​​ಗಳಲ್ಲೂ ಕೂಡ ಮಾಸ್ಕ್ ಸಿಗದಿರುವುದು ಜನತೆಯ ಆತಂಕ ಮೂಡಿಸಿದೆ.

  (ವರದಿ : ದರ್ಶನ್​​​ ನಾಯ್ಕ)
  First published: