HOME » NEWS » Coronavirus-latest-news » CORONA VIRUS IMPACT ON INDIAN ECONOMIC SESR

ಚೀನಾದಲ್ಲಿ ಕೊರೊನಾ: ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ? ಯಾವ್ಯಾವ ವಸ್ತು ದುಬಾರಿ?

ಜಾಗತಿಕ ದೇಶಿಯ ವಸ್ತುಗಳ ಉತ್ಪಾದನೆಯಲ್ಲಿ ಶೇ. 16ರಷ್ಟು ಪಾಲು ಚೀನಾ ಹೊಂದಿದೆ. ಇದೀಗ ಕೊರೋನಾ ವೈರಸ್​ನಿಂದಾಗಿ  ವಸ್ತುಗಳ ಪೂರೈಕೆಗೆ ಅಡ್ಡಿಯುಂಟಾಗಿದೆ. ಜವಳಿ​, ಆಟೋಮೊಬೈಲ್​, ಎಲೆಕ್ಟ್ರಾನಿಕ್​ ಸರಕು, ರಸಗೊಬ್ಬರ, ವಾಹನ ಬಿಡಿಭಾಗ​, ಆರ್ಕಲಿಕ್​ ಹಾಗೂ ಉಣ್ಣೆಯ ಬಟ್ಟೆಗಳ ರಫ್ತಿನ ಮೇಲೆ ಪರಿಣಾಮ ಬೀರಿದೆ.

Seema.R | news18-kannada
Updated:February 13, 2020, 1:19 PM IST
ಚೀನಾದಲ್ಲಿ ಕೊರೊನಾ: ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ? ಯಾವ್ಯಾವ ವಸ್ತು ದುಬಾರಿ?
ಸಾಂದರ್ಭಿಕ ಚಿತ್ರ
  • Share this:
ವಿಶ್ವವನ್ನೇ ಬೆಚ್ಚಿಬೀಳಿಸುತ್ತಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಜಾಗತಿಕ ವ್ಯವಹಾರದ ಮೇಲೂ ಅತಿ ಹೆಚ್ಚು ಪರಿಣಾಮ ಬೀರುತ್ತಿದೆ. ಅತಿ ಕಡಿಮೆ ವೆಚ್ಚದ ಗ್ಯಾಜೆಟ್​ ಸೇರಿದಂತೆ ಹಲವು ವಸ್ತುಗಳ ಉತ್ಪಾದನೆ ಚೀನಾದಲ್ಲೇ ಹೆಚ್ಚು ಆಗುತ್ತದೆ. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಿಗೆ ವಿವಿಧ ಕಚ್ಛಾ ವಸ್ತುಗಳ ಪೂರೈಕೆ ಕೂಡ ಚೀನಾದಿಂದಲೇ ಆಗುತ್ತದೆ. ಸದ್ಯ ಚೀನಾ ದೇಶ ಕೊರೋನಾ ವೈರಸ್​​ಗೆ ನಲುಗಿದೆ. ಅಲ್ಲಿ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಇದು ಭಾರತದ ಆರ್ಥಿಕತೆ ಮೇಲೂ ಪ್ರಭಾವ ಬೀರಿದೆ.

ಒಂದು ಕಡೆ ಭಾರತದ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್​-ಡಿಸೇಲ್​ ಬೆಲೆ ಹೆಚ್ಚಳಗೊಳ್ಳುತ್ತಿದೆ. ಇದೇ ಸಮಯದಲ್ಲಿ ಗ್ಯಾಜೆಟ್​, ಗೃಹಬಳಕೆ ಆಹಾರ, ವೈದ್ಯಕೀಯ ಕಚ್ಛಾ ಸಾಮಾಗ್ರಿಗಳನ್ನು ಬಳಕೆ ಮಾಡುತ್ತಿದ್ದ ವಸ್ತುಗಳ ಬೆಲೆ ಕೂಡ ದುಬಾರಿಯಾಗುತ್ತಿದೆ.

ಜಾಗತಿಕ ದೇಶಿಯ ವಸ್ತುಗಳ ಉತ್ಪಾದನೆಯಲ್ಲಿ ಶೇ. 16ರಷ್ಟು ಪಾಲು ಚೀನಾ ಹೊಂದಿದೆ. ಇದೀಗ ಕೊರೋನಾ ವೈರಸ್​ನಿಂದಾಗಿ  ವಸ್ತುಗಳ ಪೂರೈಕೆಗೆ ಅಡ್ಡಿಯುಂಟಾಗಿದೆ. ಜವಳಿ​, ಆಟೋಮೊಬೈಲ್​, ಎಲೆಕ್ಟ್ರಾನಿಕ್​ ಸರಕು, ರಸಗೊಬ್ಬರ, ವಾಹನ ಬಿಡಿಭಾಗ​, ಆರ್ಕಲಿಕ್​ ಹಾಗೂ ಉಣ್ಣೆಯ ಬಟ್ಟೆಗಳ ರಫ್ತಿನ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಈ ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಎಕಾನಮಿಕ್​ ಟೈಮ್ಸ್​ ವರದಿ ಮಾಡಿದೆ.

ಕೊರೊನಾ ವೈರಸ್​ ಸೋಂಕು ಹರಡುತ್ತಿರುವ ಹಿನ್ನೆಲೆ ಚೀನಾದಲ್ಲಿ ಒಟ್ಟಿಗೆ ಸೇರಲು ಭಯಪಡುವ ವಾತವಾರಣ ನಿರ್ಮಾಣವಾಗಿದೆ. ಅಲ್ಲದೇ, ಚೀನಾ ಕೂಡ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರುವಂತೆ ಕೂಡ ಎಚ್ಚರಿಕೆ ನೀಡಿದೆ. ಇದರಿಂದ ಜನಜಂಗುಳಿಯಿಂದ ಕೂಡಿದ ಅನೇಕ ತಾಣಗಳು ಬಿಕೋ ಎನ್ನುತ್ತಿರುವುದು ಕೂಡ ಕಂಡು ಬಂದಿದೆ.

ವೈದ್ಯಕೀಯ ಉತ್ಪನ್ನಗಳು ದುಬಾರಿ

ಭಾರತದ ಕಂಪನಿಗಳು ಔಷಧ ತಯಾರಿಕೆಗೆ ಚೀನಾದಿಂದಲೇ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯ ಈ ಆಮದು ವಹಿವಾಟು ಸ್ಥಗಿತಗೊಂಡಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಉತ್ಪನ್ನಗಳ ಬೆಲೆ ದುಪ್ಪಟ್ಟುಗೊಳ್ಳಲಿದೆ.

ಮೊಬೈಲ್​ ಉದ್ಯಮದ ಮೇಲೆ ಪರಿಣಾಮಮೊಬೈಲ್​ ಕಂಪನಿ ಕ್ಸಿಯೊಮಿ, ಒಪ್ಪೊ, ವಿವೋ, ಆ್ಯಪಲ್​, ಸ್ಯಾಮ್​ಸುಂಗ್​ನ​ ಬಿಡಿ ಭಾಗಗಳು ಚೀನಾದಲ್ಲಿಯೇ ತಯಾರಾಗುವುದರಿಂದ ಈ ಉದ್ಯಮಗಳ ಮೇಲೂ ಹೆಚ್ಚು ಪರಿಣಾಮ ಬೀರಲಿದೆ.

ಆಟೋಮೊಬೈಲ್​ ವಸ್ತುಗಳು ದುಬಾರಿ

ಬಿಡಿ ಸಾಮಾಗ್ರಿಗಳ ನಿರ್ಮಾಣ ಪೂರೈಕೆಯಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು ಉತ್ಪಾದನೆ ಮಾಡುವುದು ಚೀನಾದಲ್ಲಿ. ವೈರಸ್​​ನಿಂದ ಜನರು ತತ್ತರಿಸುತ್ತಿರುವ ಹಿನ್ನೆಲೆ ಉತ್ಪಾದನೆಯಲ್ಲಿ ತೊಡಗುತ್ತಿರುವ ಜನರ ಸಂಖ್ಯೆ ಕುಗ್ಗುತ್ತಿದೆ.

ಗೃಹ ಬಳಕೆ

ಪಿಂಗಾಣಿ, ಪ್ಲಾಸ್ಟಿಕ್​, ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳು ಕೂಡ ದುಬಾರಿಯಾಗಲಿದೆ.
First published: February 13, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories