ಕರೋನಾ ಅಟ್ಟಹಾಸ; ಏರುತ್ತಿರುವ ಸಾವಿನ ಸಂಖ್ಯೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ

ಚೀನಾದಲ್ಲಿ ದಿನೇ ದಿನೇ ಕರೋನಾ ವೈರಸ್ ದಾಳಿ ಹೆಚ್ಚುತ್ತಿದ್ದಂತೆ ಭಾರತ, ಜಪಾನ್ ಹಾಗೂ ಅಮೆರಿಕ ಸೇರಿದಂತೆ ಅನೇಕ ದೇಶಗಳು ಚೀನಾದಲ್ಲಿರುವ ತಮ್ಮ ರಾಷ್ಟ್ರದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಮುಂದಾಗುತ್ತಿವೆ.

ಚೀನಾ-ಕೊರೊನಾ ವೈರಸ್​

ಚೀನಾ-ಕೊರೊನಾ ವೈರಸ್​

  • Share this:
ಚೀನಾ (ಜನವರಿ. 30); ಮಾರಣಾಂತಿಕ ಕರೋನಾ ವೈರಸ್​ಗೆ ಚೀನಾದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಬುಧವಾರ ಒಂದೇ ದಿನ 40 ಜನ ಸಾವನ್ನಪ್ಪಿದ್ದು ಇದೀಗ ಸಾವಿನ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಇನ್ನೂ 7,700 ಜನರಲ್ಲಿ ಈ ಸೋಂಕು ಕಂಡುಬಂದಿದೆ. ಅಲ್ಲದೆ, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಚೀನಾದಲ್ಲಿ ಕರೋನಾ ವೈರಸ್ ಉಂಟು ಮಾಡಿರುವ ಭೀತಿಯ ಕುರಿತು ವಿಷಾಧ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೊಮ್, “ಚೀನಾದಲ್ಲಿ ಕರೋನಾ ಸೃಷ್ಟಿಸಿರುವ ಅನಾಹುತವನ್ನು ವಿಶ್ವ ಆರೋಗ್ಯ ಸಂಸ್ಥೆ ಮನಗಂಡಿದ್ದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಅಲ್ಲದೆ, ಈ ವೈರಸ್ ಹರಡದಂತೆ ತಡೆಗಟ್ಟಲು ಇರುವ ಸಾಧ್ಯತೆಗಳ ಕುರಿತು ಮಾಹಿತಿ ಕಲೆ ಹಾಕಲು ಇಂದು ತುರ್ತು ಸಮಿತಿಯನ್ನು ಕರೆಯಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ ದಿನೇ ದಿನೇ ಕರೋನಾ ವೈರಸ್ ದಾಳಿ ಹೆಚ್ಚುತ್ತಿದ್ದಂತೆ ಭಾರತ, ಜಪಾನ್ ಹಾಗೂ ಅಮೆರಿಕ ಸೇರಿದಂತೆ ಅನೇಕ ದೇಶಗಳು ಚೀನಾದಲ್ಲಿರುವ ತಮ್ಮ ರಾಷ್ಟ್ರದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಮುಂದಾಗುತ್ತಿವೆ. ಈ ನಡುವೆ 2 ಬಿಲಿಯನ್ ಜನಸಂಖ್ಯೆ ಹೊಂದಿರುವ ಚೀನಾದ ಐತಿಹಾಸಿಕ ಪ್ರಸಿದ್ಧ ವುಹಾನ್ ಪಟ್ಟಣದಲ್ಲಿ ಜನ ಮನೆಯಿಂದ ಹೊರ ಬರದಂತೆ ಸರ್ಕಾರ ಆದೇಶ ಹೊರಡಿಸಿದೆ. ಪರಿಣಾಮ ನಗರದ ಪಟ್ಟಣಗಳು ಕಳೆದ 10 ದಿನದಿಂದ ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಇದನ್ನೂ ಒದಿ : ಚೀನಾದಲ್ಲಿ​​ ಮುಂದುವರೆದ ಕರೋನಾ ಅಟ್ಟಹಾಸ; ಪಾಸ್​ಪೋರ್ಟ್​ ಹರಿದುಹಾಕಿದ ನಾಯಿಗೆ ಥ್ಯಾಂಕ್ಸ್​ ಎಂದ ಮಹಿಳೆ!
First published: