ಕೋಲಾರದಲ್ಲಿ ರೇಷ್ಮೆ ಗೂಡಿನ ಬೆಲೆ ತೀವ್ರ ಕುಸಿತ; ಕಂಗಾಲಾದ ರೈತರು

ದೇಶಾದ್ಯಂತ ರೇಷ್ಮೆ ಇಳುವರಿ ಕಡಿಮೆಯಾಗಿದ್ದ ಪರಿಣಾಮ ಬೆಲೆ ಏರಿಕೆಯಾಗಿತ್ತು, ಕಳೆದ ಒಂದು ವಾರದಿಂದ ರೇಷ್ಮೆ ಗೂಡು ಮಾರುಕಟ್ಟೆಗೆ ಚುರುಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬರ್ತಿದೆ ಹೀಗಾಗಿ ಬೆಲೆಯಲ್ಲಿ ಏರಿಳಿತ ಉಂಟಾಗಿದೆ

news18-kannada
Updated:March 14, 2020, 2:26 PM IST
ಕೋಲಾರದಲ್ಲಿ ರೇಷ್ಮೆ ಗೂಡಿನ ಬೆಲೆ ತೀವ್ರ ಕುಸಿತ; ಕಂಗಾಲಾದ ರೈತರು
ರೇಷ್ಮೆ ಗೂಡು
  • Share this:
ಕೋಲಾರ(ಮಾ.14) : ಕೋಲಾರದಲ್ಲಿ ರೇಷ್ಮೆ ಗೂಡಿನ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಕೊರೋನಾ ಪರಿಣಾಮದಿಂದ ಬೆಲೆ ಏರಿಕೆ ಆಗುತ್ತದೆ ಎಂಬ ವದಂತಿ ಮೊದಲು ಹಬ್ಬಿತ್ತಾದರೂ ಈಗ ಮಾರುಕಟ್ಟೆ ಅಧಿಕಾರಿಗಳು ಕೊರೋನಾ ಪರಿಣಾಮ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ, ಇತ್ತ ಬೆಲೆ ತಕ್ಕ ಮಟ್ಟಿಗಿದ್ದರೂ, ನಮಗೆ ಲಾಭವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೋಲಾರ ಜಿಲ್ಲೆ ಹೇಳಿ ಕೇಳಿ ಹೈನುಗಾರಿಕೆ, ರೇಷ್ಮೆ ಕೃಷಿಯನ್ನೆ ನಂಬಿ ಹೆಚ್ಚಾಗಿ ಜೀವನ ಮಾಡುತ್ತಿದ್ದಾರೆ, ಆದರೆ, ಕಳೆದ ಎರಡು ವಾರದ ಹಿಂದೆ ರೇಷ್ಮೆ ಗೂಡಿಗೆ ಬಂಪರ್ ಬೆಲೆ ಹಿನ್ನಲೆ ರೈತರು ಪುಲ್ ಖುಷ್ ಆಗಿದರು.  ಪ್ರತಿನಿತ್ಯ ಕೋಲಾರ ರೇಷ್ಮೆ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೇ 5 ರಿಂದ 6 ಟನ್‍ಗಳಷ್ಟು ರೇಷ್ಮೆ ಗೂಡು ಬರುತ್ತದೆ. ಆದರೆ ಒಂದು  ದಿನವಿರುವ ಬೆಲೆ ಮತ್ತೊಂದು ದಿನ ರೈತರಿಗೆ ಸಿಗುತ್ತಿಲ್ಲ,

ಎರಡು ವಾರಗಳ ಹಿಂದೆ ಬಿಳಿ ರೇಷ್ಮೆಗೆ ಒಂದು ಕೆ.ಜಿ 620 ರೂಗೆ ಮಾರಾಟವಾಗಿತ್ತು, ಆದರೀಗ 450 ರೂಪಾಯಿಗೆ ಇಳಿಕೆಯಾಗಿದೆ, ಇನ್ನು ಮಿಶ್ರ ತಳಿ ಗೂಡು ಸಹ 350 ಕ್ಕೆ ಇಳಿಕೆಯಾಗಿದ್ದು, ಎರಡು ವಾರಗಳ ಹಿಂದೆ 450 ರೂ ಇತ್ತು, ಹೀಗೆ ರೇಷ್ಮೆ ಗೂಡಿನ ಬೆಲೆ ಇಳಿಕೆಯಾಗುತ್ತಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಇನ್ನು ಚೀನಾದಲ್ಲಿ ಕರೋನಾ ಸೋಂಕಿನ ಪರಿಣಾಮ ಚೀನಾ ರೇಷ್ಮೆ ಆಮದು ಭಾರತ ದೇಶಕ್ಕೆ ಇಳಿಕೆಯಾಗಿದೆ, ಹಾಗಾಗಿ ಎರಡು ವಾರಗಳ ಹಿಂದೆ ರೇಷ್ಮೆ ಬೆಲೆ 700 ರಿಂದ 800 ರೂಗೆ ಹೋಗಿತ್ತು, ಮುಂದೆ ಒಂದು ಸಾವಿರ ಗಡಿಯನ್ನ ಬೆಲೆ ಮುಟ್ಟಬಹುದು ಎಂದು ರೈತರ ವಲಯದಲ್ಲಿ ಇಂತಹ ವಿಚಾರಗಳು ಓಡಾಡುತ್ತಿತ್ತು.

ದೇಶಾದ್ಯಂತ ರೇಷ್ಮೆ ಇಳುವರಿ ಕಡಿಮೆಯಾಗಿದ್ದ ಪರಿಣಾಮ ಬೆಲೆ ಏರಿಕೆಯಾಗಿತ್ತು, ಕಳೆದ ಒಂದು ವಾರದಿಂದ ರೇಷ್ಮೆ ಗೂಡು ಮಾರುಕಟ್ಟೆಗೆ ಚುರುಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬರ್ತಿದೆ ಹೀಗಾಗಿ ಬೆಲೆಯಲ್ಲಿ ಏರಿಳಿತ ಉಂಟಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದ್ರೆ ಈಗಲು ಬೆಲೆ ಸ್ಥಿರವಾಗಿದೆ ಎಂದು ಮಾರುಕಟ್ಟೆ ಸಹಾಯಕ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ರೇಷ್ಮೆ ಬೆಳೆಯ ಹಿಪ್ಪು ನೇರಳೆ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ತೋಟಗಳಿಗೆ ನೀರು ಪೂರೈಸಲಾಗದೆ ರೈತರು ಅಧಿಕ ಬಂಡವಾಳ ಸುರಿದಿದ್ದಾರೆ. ಹೀಗಾಗಿ ರೇಷ್ಮೆಗೆ ಒಂದು ಕೆ.ಜಿಗೆ 700 ರೂಪಾಯಿ ಮೇಲೆ ಬೆಲೆ ಸಿಕ್ಕಲ್ಲಿ ರೈತರಿಗೆ ಲಾಭ ಇಲ್ಲದೆ ಹೊದಲ್ಲಿ ನಷ್ಟ ಎಂದು ಜಿಲ್ಲೆಯ ರೈತ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ : ಮಧ್ಯಪ್ರದೇಶದಿಂದ ಕರೆದು ತಂದಿರುವ 20 ಜನ ದೇವದಾಸಿಯರಿಗೆ ಕೊರೋನಾ ಪರೀಕ್ಷೆ ಮಾಡಿಸಿ; ಸಿ ಎಂ ಇಬ್ರಾಹಿಂ ವ್ಯಂಗ್ಯಕೊರೋನಾ ಸೋಂಕಿನ ಪರಿಣಾಮ ರೇಷ್ಮೆ ಗೂಡಿನ ಬೆಲೆ ಹೆಚ್ಚಾಗಲು ಕಾರಣ ಎಂಬ ಸುದ್ದಿ ಮಾರುಕಟ್ಟೆಯಲ್ಲಿ ಹರಿದಾಡುತ್ತಿದ್ದವು, ಆದರೆ ಈ ಬಗ್ಗೆ ಮಾರುಕಟ್ಟೆ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದು, ಕೇವಲ ಉತ್ಪಾದನೆ ಕಡಿಮೆಯಾಗಿ, ಹೆಚ್ಚಾದ ಪರಿಣಾಮ ಬೆಲೆ ಏರಿಳಿತ ಕಂಡಿದೆ ಎಂದು ತಿಳಿಸಿದ್ದು, ಇತ್ತ ರೇಷ್ಮೆಗೆ 400 ರೂ ಬೆಲೆ ಸಿಕ್ಕಿದ್ರು ರೈತರು ಏನೂ ಪ್ರಯೋಜನವಿಲ್ಲ ಅಂತಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಭೀತಿಯಿಂದ ಹಲವು ಉದ್ದಿಮೆಗಳು ಈಗಾಗಲೇ ನಷ್ಟದತ್ತ ಮುಖಮಾಡಿದ್ದು ಸದ್ಯ ದೇಶಿಯ ರೇಷ್ಮೆಗೆ ಇನ್ನು ಬೆಲೆ ಇರೋದ್ರಿಂದ ರೇಷ್ಮೆ ಉದ್ಯಮಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಲಾಗುತ್ತದೆ.

 (ವರದಿ : ರಘುರಾಜ್)
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading