ರಾಜ್ಯದಲ್ಲಿ ಕೊರೋನಾ ಅತಂಕ; ವಿದೇಶದಿಂದ ಬಂದವರನ್ನು ಮೊದಲು ಪತ್ತೆ ಮಾಡಿ: ವಿಪಕ್ಷ ನಾಯಕ ಸಿದ್ದರಾಮಯ್ಯ

ವಿದೇಶದಿಂದ ವಾಪಸ್ಸಾದವರಿಗೆ ಕಡ್ಡಾಯ ಪರೀಕ್ಷೆ ಆಗಲೇ ಬೇಕು. ವಿದೇಶದಿಂದ ಬರುತ್ತಿರುವ ವಿಮಾನಗಳನ್ನು ಕೂಡಲೇ ಸಂಪೂರ್ಣ ಬಂದ್ ಮಾಡಿ

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು(ಮಾ.23): ರಾಜ್ಯದಲ್ಲಿ 27 ಜನರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಇವರೆಲ್ಲಾ ಹೊರದೇಶದಿಂದ ವೈರಸ್ ತಂದಿರುವವರೇ. 43 ಸಾವಿರ ಜನರು ಹೊರದೇಶಗಳಿಂದ ಕರ್ನಾಟಕಕ್ಕೆ ಬಂದಿದ್ದಾರೆ. ಅವರಲ್ಲಿ 23 ಸಾವಿರ ಜನರು ಇನ್ನೂ ಪತ್ತೆಯಾಗಬೇಕಾಗಿದ್ದು, ಅವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಈಗಾಗಲೇ ಶಾಸಕ ಹೆಚ್​ ಕೆ ಪಾಟೀಲ್​​​​​​ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕದಲ್ಲಿ ಇಪ್ಪತ್ತೇಳು ಜನಕ್ಕೆ ದೃಢಪಟ್ಟಿದೆ. ಇವರೆಲ್ಲರೂ ಹೊರದೇಶದಿಂದ ಬಂದಿರುವವರು. ಹೊರದೇಶದಿಂದ ಬಂದಿರುವವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲು ನೀವು ಹೇಳಿದ್ದೀರಿ. ಆದರೆ ಇದು ಸಾಧ್ಯವೆ ಎಂದು ಪ್ರಶ್ನೆ ಮಾಡಿದ್ದಾರೆ.

  ವಿಮಾನ ನಿಲ್ದಾಣದಿಂದ ಬಂದವರಿಗೆ ಅಲ್ಲಿಯೇ ಟೆಸ್ಟ್​ ಮಾಡಿಸಬೇಕು. ಬರೀ ಟೆಂಪರೇಚರ್ ನೋಡಿದ್ರೆ ಪ್ರಯೋಜನ ಇಲ್ಲ. ವಿದೇಶದಿಂದ ವಾಪಸ್ಸಾದವರಿಗೆ ಕಡ್ಡಾಯ ಪರೀಕ್ಷೆ ಆಗಲೇ ಬೇಕು. ವಿದೇಶದಿಂದ ಬರುತ್ತಿರುವ ವಿಮಾನಗಳನ್ನು ಕೂಡಲೇ ಸಂಪೂರ್ಣ ಬಂದ್ ಮಾಡಿ. ಡೊಮೆಸ್ಟಿಕ್ ವಿಮಾನಗಳನ್ನು ಶೇ. 100 ರಷ್ಟು ಬಂದ್ ಮಾಡಬೇಕು ಎಂದರು.

  ರೋಗಿಗಳನ್ನು ನೋಡಿಕೊಳ್ಳುವ ಡಾಕ್ಟರ್‌ ಗಳಿಗೂ ಹೆಚ್ಚು ಸವಲತ್ತು ಒದಗಿಸಬೇಕಾಗಿದೆ. ಉತ್ತರಪ್ರದೇಶದಲ್ಲಿ ಕೂಲಿ ಕಾರ್ಮಿಕರಿಗೆ ಒಂದು ಸಾವಿರ ರೂಪಾಯಿ ಹಾಗೂ ಕೇರಳ ಸರ್ಕಾರ ಇಪ್ಪತ್ತು ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ನಮ್ಮಲ್ಲಿ ಕೂಡ ಅಗತ್ಯವಿರುವಷ್ಟು ಫ್ಯಾಕೇಜ್​​ ಘೋಷಣೆ ಮಾಡಬೇಕು ಎಂದು ತಿಳಿಸಿದರು.

  ಇದನ್ನೂ ಓದಿ : ಕೊರೋನಾ ಭೀತಿಯಿಂದ ಕೇರಳ ಗಡಿ ಬಂದ್ - ಬಂಡೀಪುರ ಚೆಕ್ ಪೋಸ್ಟ್ ನಲ್ಲಿ ವಾಹನ ಸಂಚಾರ ನಿಷೇಧ

  ಒಟ್ಟು ಪಾಸಿಟಿವ್ ಪ್ರಕರಣಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರ ಆರೋಗ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ಕರ್ನಾಟಕದಲ್ಲಿ 33 ಪಾಸಿಟಿವ್ ಪ್ರಕರಣಗಳು ಅಂತ ಪ್ರಸ್ತಾಪಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
  First published: