ಕೊರೋನಾ ಭೀತಿ: ಮಲೆಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆ ಹಾಗೂ ರಥೋತ್ಸವ ರದ್ದು

ಇದೀಗ ಮೈಸೂರಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನಿಂದ ಬರುವ ಕೋಳಿ ಹಾಗೂ ಕೋಳಿ ಉತ್ಪನ್ನಗಳಿಗೂ ನಿಷೇಧ ಹೇರಲಾಗಿದೆ.

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

 • Share this:
  ಚಾಮರಾಜನಗರ(ಮಾ.18): ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಯುಗಾದಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ. ಮಾರ್ಚ್ 21 ರಿಂದ 26 ವರೆಗೆ ಯುಗಾದಿ ಜಾತ್ರೆ ನಿಗದಿಯಾಗಿತ್ತು

  ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಈಗ ಕೊರೋನಾ ಭೀತಿ ಇದ್ದು ಈ ಜಾತ್ರೆಯಲ್ಲಿ ಸುಮಾರು ಎರಡು ಲಕ್ಷ ಜನ ಜಾತ್ರೆಗೆ ಸೇರುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಲಿದೆ. ಹಾಗಾಗಿ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅನುಮತಿ ಪಡೆದು 144 ಸೆಕ್ಷನ್ 3 ಅಡಿಯಲ್ಲಿ ಹಾಗೂ ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ ಈ ಎರಡನ್ನು ಉಪಯೋಗಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರ ಬಳಸಿ ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಹಾಗು ರಥೋತ್ಸವ ರದ್ದುಪಡಿಸಲಾಗಿದೆ ಎಂದರು.

  ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಪುನಸ್ಕಾರಗಳು ನಡೆಯಲಿವೆ. ಭಕ್ತರು ಎಂದಿನಂತೆ ದೇವರ ದರ್ಶನ ಮಾಡಬಹುದು. ಆದರೆ ಗುಂಪು ಸೇರುವತಿಲ್ಲ ಯುಗಾದಿ ಜಾತ್ರೆಗೆ ನೆರೆಯ ತಮಿಳುನಾಡಿನಿಂದ ಸಹಸ್ರಾರು ಭಕ್ತರು ಬರುವ ನಿರೀಕ್ಷೆ ಇದೆ. ಹಾಗಾಗಿ ಜಾತ್ರೆ ರದ್ದಾಗಿರುವ ಬಗ್ಗೆ ತಮಿಳುನಾಡಿನ ಭಕ್ತರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ತಮಿಳುನಾಡಿನ ಸೇಲಂ, ಈರೋಡ್ ಹಾಗು ಕೊಯಮತ್ತೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

  ಕೋಳಿ ಉತ್ಪನ್ನ ಮಾರಾಟ ನಿಷೇಧ:

  ನೆರೆಯ ಕೇರಳ ಹಾಗು ಪಕ್ಕದ ಮೈಸೂರಿನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೋಳಿ ಹಾಗೂ ಕೋಳಿ ಉತ್ಪನ್ನಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಈಗಾಗಲೇ ಜಿಲ್ಲೆಯಲ್ಲಿ ಕೋಳಿ ಸಾಗಾಣಿಕೆ ನಿಷೇಧ ವಿಧಿಸಲಾಗಿತ್ತು. ಇದೀಗ ಮೈಸೂರಿನಲ್ಲು ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನಿಂದ ಬರುವ ಕೋಳಿ ಹಾಗೂ ಕೋಳಿ ಉತ್ಪನ್ನಗಳಿಗೂ ನಿಷೇಧ ಹೇರಲಾಗಿದೆ.

  ಇದನ್ನೂಓದಿ : ಮಾ. 31ರವರೆಗೆ ಬಂದ್ ಮುಂದುವರಿಕೆ; ಕೊರೋನಾ ನಿಯಂತ್ರಣಕ್ಕೆ 200 ಕೋಟಿ ಬಿಡುಗಡೆ: ಸಿಎಂ ಯಡಿಯೂರಪ್ಪ

  ಈ ಸಂಬಂಧ ಬೇಗೂರು, ಸತ್ತೆಗಾಲ, ಮೂಗೂರು ಕ್ರಾಸ್ ಹಾಗು ನಂಜನಗೂಡು ರಸ್ತೆಯ ಹೆಗ್ಗವಾಡಿ ಕ್ರಾಸ್ ಹೀಗೆ ನಾಲ್ಕು ಕಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದರು. ಮಾರ್ಚ್ 17 ರಿಂದಲೇ ಜಿಲ್ಲೆಯಲ್ಲಿ ಕೋಳಿ ಹಾಗು ಕೋಳಿ ಉತ್ಪನ್ನಗಳ ಮಾರಾಟವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

  (ವರದಿ: ಎಸ್​.ಎಂ. ನಂದೀಶ್​)

   
  First published: