HOME » NEWS » Coronavirus-latest-news » CORONA VIRUS EFFECT 83 PEOPLE HIT BY CORONA VIRUS IN INDIA 10 PEOPLE RECOVERED RMD

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ; 10 ಸೋಂಕಿತರು ಚೇತರಿಕೆ

ಕೊರೋನಾಗೆ ಭಾರತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಮೊದಲು ಈ ಸೋಂಕಿನಿಂದ ಕಲಬುರ್ಗಿಯ ವೃದ್ಧ ಮೃತಪಟ್ಟಿದ್ದರೆ, ದೆಹಲಿಯ ವೃದ್ಧೆ ಶುಕ್ರವಾರ ತಡರಾತ್ರಿ ಸಾವನಪ್ಪಿದ್ದರು. ಮುಂದಿನ ದಿನಗಳಲ್ಲಿ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:March 14, 2020, 1:02 PM IST
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ; 10 ಸೋಂಕಿತರು ಚೇತರಿಕೆ
ಕೊರೋನಾ ವೈರಸ್
  • Share this:
ಕೋರೋನಾ ವೈರಸ್​ ವಿಶ್ವವ್ಯಾಪಿ ಹಬ್ಬುತ್ತಲೇ ಇದೆ. ಭಾರತದಲ್ಲೂ ಕೂಡ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ ಆಗಿದ್ದು, ಸಾಕಷ್ಟು ಆತಂಕ ಸೃಷ್ಟಿಸಿದೆ.

ಕೊರೋನಾ ವೈರಸ್​ ತಗುಲಿದವರ ಸಂಖ್ಯೆ ಭಾರತದಲ್ಲಿ 83 ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಕೇರಳದಲ್ಲಿ 19 ಮಂದಿ, ಹರಿಯಾಣದಲ್ಲಿ 15, ಮಹಾರಾಷ್ಟ್ರದಲ್ಲಿ 14, ಉತ್ತರ ಪ್ರದೇಶದಲ್ಲಿ 10, ದೆಹಲಿಯಲ್ಲಿ 7, ಕರ್ನಾಟಕ 6, ಲಡಾಕ್ 3, ಆಂಧ್ರ, ಪಂಜಾಬ್​, ಜಮ್ಮು&ಕಾಶ್ಮೀರ, ತಮಿಳುನಾಡು, ತೆಲಂಗಾಣ, ರಾಜಸ್ಥಾನದಲ್ಲಿ ತಲಾ ಒಬ್ಬರಿಗೆ ಕೊರೋನಾ ವೈರಸ್​ ತಗುಲಿದೆ. 83 ಜನ ಸೋಂಕಿತರಲ್ಲಿ 17 ಜನ ವಿದೇಶಿ ಪ್ರಜೆಗಳು ಇದ್ದಾರೆ.

ಕೊರೋನಾಗೆ ಭಾರತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಮೊದಲು ಈ ಸೋಂಕಿನಿಂದ ಕಲಬುರ್ಗಿಯ ವೃದ್ಧ ಮೃತಪಟ್ಟಿದ್ದರೆ, ದೆಹಲಿಯ ವೃದ್ಧೆ ಶುಕ್ರವಾರ ತಡರಾತ್ರಿ ಸಾವನಪ್ಪಿದ್ದರು. ಮುಂದಿನ ದಿನಗಳಲ್ಲಿ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

ಇನ್ನು, ಭಾರತದಲ್ಲಿ 10 ಜನ ಕೊರೋನಾ ಸೋಂಕಿತರು ಚೇತರಿಕೆ ಕಾಣುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಜನರು ಚೇತರಿಕೆ ಕಾಣಲಿದ್ದಾರೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಾದ್ಯಂತ 1.47 ಲಕ್ಷ ಪ್ರಕರಣ ದಾಖಲಾಗಿವೆ. ಸಾವಿನ ಸಂಖ್ಯೆ 5,425 ಗಡಿ ತಲುಪಿದೆ. ಇನ್ನು, ವಿಶ್ವಾದ್ಯಂತ ಸುಮಾರು 72,392 ಸೋಂಕಿತರು ಚೇತರಿಕೆ ಕಂಡಿದ್ದಾರೆ. ಚೀನಾ ಈ ವೈರಸ್​ಗೆ ಭಾರೀ ದಂಡ ತೆತ್ತಿದ್ದು, 3,189 ಜನರು ಸಾವನಪ್ಪಿದ್ದಾರೆ.
First published: March 14, 2020, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories